ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

FIFA World Cup 2022: ವಿಶ್ವಕಪ್ ಇತಿಹಾಸದ ರೋಚಕ ಪಂದ್ಯದಲ್ಲಿ ಗೆದ್ದ ಅರ್ಜೆಂಟೀನಾ, ವಿಶ್ವಕಪ್‌ ಎತ್ತಿಹಿಡಿದ ಲಿಯೋನೆಲ್ ಮೆಸ್ಸಿ

FIFA World Cup 2022 Final : Messi Magic, Argentina Won World Cup To Beat France In Penalty Shootout

ಕೋಟ್ಯಂತರ ಅಭಿಮಾನಿಗಳ ಹಾರೈಕೆ ಕೊನೆಗೂ ಫಲ ನೀಡಿದೆ. ಕೊನೆಯ ವಿಶ್ವಕಪ್ ಆಡುತ್ತಿರುವ ವಿಶ್ವದ ಜನಪ್ರಿಯ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಕೊನೆಗೂ ತಮ್ಮ ದೇಶಕ್ಕಾಗಿ ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಫಿಫಾ ವಿಶ್ವಕಪ್‌ ಇತಿಹಾಸದಲ್ಲಿ ರಣರೋಚಕ ಫೈನಲ್ ಪಂದ್ಯದಲ್ಲಿ ಕೊನೆಗೂ ಅರ್ಜೆಂಟೀನಾ ಜಯ ಗಳಿಸುವಲ್ಲಿ ಯಶಸ್ವಿಯಾಗಿದೆ. ಕತಾರ್ ನ ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಎರಡೂ ತಂಡಗಳ ಪಂದ್ಯದ 90 ನಿಮಿಷದ ಅಂತ್ಯಕ್ಕೆ 2-2 ಗೋಲುಗಳಲ್ಲಿ ಸಮಬಲ ಸಾಧಿಸಿದ್ದವು. ನಂತರ ಹೆಚ್ಚುವರಿ 30 ನಿಮಿಷಗಳ ಅವಧಿಯಲ್ಲಿ ಉಭಯ ತಂಡಗಳು ತಲಾ ಒಂದು ಗೋಲು ಗಳಿಸುವ ಮೂಲಕ ಮತ್ತೆ 3-3 ರಲ್ಲಿ ಸಮಬಲದಲ್ಲಿ ಮುಕ್ತಾಯವಾಯಿತು.

ಹೆಚ್ಚುವರಿ ಸಮಯದಲ್ಲಿ ಕೂಡ ಡ್ರಾನಲ್ಲಿ ಅಂತ್ಯಗೊಂಡ ಕಾರಣ, ಪೆನಾಲ್ಟಿ ಶೂಟೌಟ್‌ ಮೂಲಕ ವಿಜೇತರನ್ನು ನಿರ್ಣಯಿಸಬೇಕಾಯಿತು. ಫ್ರಾನ್ಸ್‌ನ ಎಂಬಾಪೆ ಮೊದಲ ಪೆನಾಲ್ಟಿ ಶೂಟೌಟ್‌ನಲ್ಲಿ ಯಶಸ್ವಿಯಾಗಿ ಗೋಲು ಗಳಿಸಿದರು. ನಂತರ ಮೆಸ್ಸಿ ಗೋಲು ಗಳಿಸುವ ಮೂಲಕ ಸಮಬಲಗೊಳಿಸಿದರು. ಆದರೆ ನಂತರದ ಎರಡು ಅವಕಾಶಗಳನ್ನು ಫ್ರಾನ್ಸ್ ಕೈಚೆಲ್ಲಿದರೆ, ಅರ್ಜೆಂಟೀನಾ ಸತತವಾಗಿ ನಾಲ್ಕು ಅವಕಾಶಗಳಲ್ಲಿ ಗೋಲು ಗಳಿಸುವ ಮೂಲಕ ಜಯ ಸಾಧಿಸಿತು.

IPL 2023: ಪಂಜಾಬ್ ಕಿಂಗ್ಸ್‌ ತಂಡಕ್ಕೆ ಶುಭಸುದ್ದಿ, ಐಪಿಎಲ್‌ ಆಡಲಿದ್ದಾರೆ ಸ್ಫೋಟಕ ಬ್ಯಾಟರ್IPL 2023: ಪಂಜಾಬ್ ಕಿಂಗ್ಸ್‌ ತಂಡಕ್ಕೆ ಶುಭಸುದ್ದಿ, ಐಪಿಎಲ್‌ ಆಡಲಿದ್ದಾರೆ ಸ್ಫೋಟಕ ಬ್ಯಾಟರ್

ಫಿಫಾ ವಿಶ್ವಕಪ್‌ನ ಇತಿಹಾಸದಲ್ಲಿ ಇದು ಮೂರನೇ ಬಾರಿಗೆ ಪೆನಾಲ್ಟಿ ಶೂಟೌಟ್ ಮೂಲಕ ವಿಜೇತರನ್ನು ನಿರ್ಣಯಿಸಲಾಯಿತು. 1994 ರಲ್ಲಿ ಬ್ರೆಜಿಲ್ ಮತ್ತು ಇಟಲಿ ನಡುವಿನ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಬ್ರೆಜಿಲ್ ಜಯ ಗಳಿಸಿತ್ತು. ನಂತರ 2006ರಲ್ಲಿ ಇಟಲಿ ಮತ್ತು ಫ್ರಾನ್ಸ್ ನಡುವಿನ ಪಂದ್ಯಲ್ಲಿ ಫ್ರಾನ್ಸ್ 5-3 ಗೋಲುಗಳೊಂದಿಗೆ ವಿಶ್ವಕಪ್ ಗೆದ್ದಿತ್ತು.

FIFA World Cup 2022 Final : Messi Magic, Argentina Won World Cup To Beat France In Penalty Shootout

ಮೆಸ್ಸಿ ಪಡೆಗೆ ಕೈಲಿಯನ್ ಎಂಬಪ್ಪೆ ಏಕಾಂಗಿ ಸವಾಲು

ಪಂದ್ಯ ಆರಂಭವಾದ 23ನೇ ನಿಮಿಷದಲ್ಲಿಯೇ ಲಿಯೋನೆಲ್ ಮೆಸ್ಸಿ ಪೆನಾಲ್ಟಿ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಈ ಗೋಲಿನ ಮೂಲಕ ಅರ್ಜೆಂಟೀನಾ 1-0 ಮುನ್ನಡೆ ಸಾಧಿಸಿತು. ನಂತರ 36ನೇ ನಿಮಿಷದಲ್ಲಿ ಏಂಜಲ್ ಡಿ ಮರಿಯಾ ಗೋಲು ದಾಖಲಿಸುವ ಮೂಲಕ ಅರ್ಜೆಂಟೀನಾ 2-0 ಗೋಲುಗಳ ಮುನ್ನಡೆ ಕಂಡಿತು.

ಪಂದ್ಯದ 80ನೇ ನಿಮಿಷದವರೆಗೆ ಅರ್ಜೆಂಟೀನಾ ಗೆಲುವು ಸುಲಭ ಎಂದು ಭಾವಿಸಿತ್ತು. ಆದರೆ, ಪಂದ್ಯದ ಅವಧಿ ಮುಕ್ತಾಯವಾಗಲು 10 ನಿಮಿಷ ಇದ್ದಾಗ ಕೈಲಿಯನ್ ಎಂಬಪ್ಪೆ ಮೈದಾನದಲ್ಲಿ ಮಿಂಚು ಹರಿಸಿದರು. 80ನೇ ನಿಮಿಷದಲ್ಲಿ ಪೆನಾಲ್ಟಿ ಗೋಲು ಬಾರಿಸಿದರೆ, 81ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸುವ ಮೂಲಕ ಅರ್ಜೆಂಟೀನಾ ಸೇರಿದಂತೆ ಇಡೀ ಫುಟ್ಬಾಲ್ ಜಗತ್ತಿಗೆ ಶಾಕ್ ನೀಡಿದರು.

ಹಾಲಿ ಚಾಂಪಿಯನ್ ಫ್ರಾನ್ಸ್ ಯಾವುದೇ ಕಾರಣಕ್ಕೂ ಸುಲಭವಾಗಿ ಸೋಲಲು ಒಪ್ಪಲಿಲ್ಲ. ನಂತರ ಹೆಚ್ಚವರಿಯಾಗಿ 30 ನಿಮಿಷಗಳ ಆಟ ನಡೆಯಿತು. ಲಿಯೋನೆಲ್ ಮೆಸ್ಸಿ 108ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ 3-2 ಮುನ್ನಡೆ ತಂದುಕೊಟ್ಟರು. ಆದರೆ, 118ನೇ ನಿಮಿಷದಲ್ಲಿ ಕೊನೆಯ ಎರಡು ನಿಮಿಷಗಳ ಆಟ ಬಾಕಿಯಿದ್ದಾಗ ಎಂಬಪ್ಪೆ ಮೂರನೇ ಗೋಲು ಬಾರಿಸುವ ಮೂಲಕ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.

ಕೈಲಿಯನ್ ಎಂಬಪ್ಪೆ ಫೈನಲ್‌ ಪಂದ್ಯದಲ್ಲಿ ಫ್ರಾನ್ಸ್ ಪರವಾಗಿ ಮೂರೂ ಗೋಲುಗಳನ್ನು ಹೊಡೆಯುವ ಮೂಲಕ ದಾಖಲೆ ನಿರ್ಮಿಸಿದರು.

Story first published: Sunday, December 18, 2022, 23:52 [IST]
Other articles published on Dec 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X