ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

FIFA World Cup 2022: ಫೈನಲ್‌ನಲ್ಲಿ ಸೋತ ಬಳಿಕ ಕೈಲಿಯನ್ ಎಂಬಾಪೆ ಮಾಡಿದ ಪೋಸ್ಟ್ ವೈರಲ್

FIFA World Cup 2022: France Football Star Kylian Mbappes Post Went Viral After Lost In Final Against Argentina

2022ರ ಫಿಫಾ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ ಫ್ರಾನ್ಸ್ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ 36 ವರ್ಷಗಳ ಬಳಿಕ ವಿಶ್ವಕಪ್ ಗೆದ್ದ ಸಾಧನೆ ಮಾಡಿತು. ವಿಶ್ವ ವಿಖ್ಯಾತ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಚೊಚ್ಚಲ ವಿಶ್ವಕಪ್‌ ಗೆದ್ದ ಸಾಧನೆ ಮಾಡಿದರು.

ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ 80ನೇ ನಿಮಿಷದವರೆಗೂ 2-0 ಗೋಲುಗಳ ಮುನ್ನಡೆಯೊಂದಿಗೆ ಸುಲಭವಾಗಿ ಜಯ ಸಾಧಿಸುವ ವಿಶ್ವಾಸದಲ್ಲಿತ್ತು. ಆದರೆ, ಫ್ರಾನ್ಸ್‌ನ ಯುವ ಫುಟ್ಬಾಲ್ ಆಟಗಾರ ಕೈಲಿಯನ್ ಎಂಬಾಪೆ 2 ನಿಮಿಷದ ಅಂತರದಲ್ಲಿ ಎರಡು ಮಿಂಚಿನ ಗೋಲು ಗಳಿಸುವ ಮೂಲಕ 2-2 ಗೋಲುಗಳಿಂದ ಸಮಬಲಗೊಳಿಸಿದರು.

ನಿಗದಿತ ಸಮಯದ ವೇಳೆಗೆ ಪಂದ್ಯ ಡ್ರಾಗೊಂಡ ನಂತರ, ಹೆಚ್ಚಿನ 30 ನಿಮಿಷಗಳ ಕಾಲ ಪಂದ್ಯ ನಡೆಯಿತು. ಹೆಚ್ಚುವರಿ ಸಮಯದಲ್ಲಿ, ಲಿಯೋನೆಲ್ ಮೆಸ್ಸಿ ಅರ್ಜೆಂಟೀನಾಕ್ಕೆ ಮುನ್ನಡೆ ನೀಡಿದರು, ಆದರೆ ಎಂಬಾಪೆ ಮತ್ತೆ ಅರ್ಜೆಂಟೀನಾ ಗೆಲುವಿಗೆ ಅಡ್ಡಗಾಲು ಹಾಕಿದರು. ಪಂದ್ಯದ ಮುಕ್ತಾಯಕ್ಕೆ 2 ನಿಮಿಷ ಬಾಕಿ ಇರುವಾಗ ಗೋಲು ಗಳಿಸಿ 3-3ರಲ್ಲಿ ಸಮಬಲಗೊಳಿಸಿದರು. ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ 4-2 ಗೋಲುಗಳ ಅಂತರದಲ್ಲಿ ರೋಚಕ ಜಯ ಸಾಧಿಸಿತು.

FIFA World Cup 2022: France Football Star Kylian Mbappes Post Went Viral After Lost In Final Against Argentina

ನಾವು ಮತ್ತೆ ಬರುತ್ತೇವೆ ಎಂದು ಎಂಬಾಪೆ

ಪಂದ್ಯದಲ್ಲಿ ಸೋಲನುಭವಿಸಿದ ಬಳಿಕ ಎಂಬಾಪೆ ಟ್ವೀಟ್ ಮಾಡಿದ್ದು ಸಾಕಷ್ಟು ವೈರಲ್ ಆಗಿದೆ. ನಾವು ಮತ್ತೆ ಬರುತ್ತೇವೆ ಎಂದು ಅವರು ಪೋಸ್ಟ್ ಮಾಡುವ ಮೂಲಕ ಮುಂದಿನ ವಿಶ್ವಕಪ್‌ಗೆ ಸಿದ್ಧವಾಗಿದ್ದೇವೆ ಎಂದು ಸಂದೇಶ ನೀಡಿದ್ದಾರೆ.

ಇಂಗ್ಲೆಂಡ್‌ನ ಜಿಯೋಫ್ ಹರ್ಸ್ಟ್ ನಂತರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಹ್ಯಾಟ್ರಿಕ್ ಗಳಿಸಿದ ಎರಡನೇ ಆಟಗಾರ ಎನ್ನುವ ಕೀರ್ತಿಗೆ ಎಂಬಾಪೆ ಭಾಜನಾರದರು. 1966 ರಲ್ಲಿ ವೆಂಬ್ಲಿಯಲ್ಲಿ ಆಗಿನ ಪಶ್ಚಿಮ ಜರ್ಮನಿ ವಿರುದ್ಧದ ಪಂದ್ಯದಲ್ಲಿ ಜಿಯೋಫ್ ಹರ್ಸ್ಟ್ ಹ್ಯಾಟ್ರಿಕ್ ಗೋಲು ಗಳಿಸುವ ಮೂಲಕ 4-2 ಅಂತರದಲ್ಲಿ ಪಂದ್ಯವನ್ನು ಗೆದ್ದಿದ್ದರು. ಈ ಬಾರಿ ವಿಶ್ವಕಪ್‌ನಲ್ಲಿ ಎಂಟು ಗೋಲುಗಳನ್ನು ಗಳಿಸುವ ಮೂಲಕ ಎಂಬಾಪೆ ಗೋಲ್ಡನ್ ಬೂಟ್ ಗೆದ್ದರು. 2018ರ ಚಾಂಪಿಯನ್‌ಗಳಾದ ಫ್ರಾನ್ಸ್ ತಂಡ ಈ ಬಾರಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಎಂಬಾಪೆ ಸಾಧನೆ ಬಗ್ಗೆ ಜಿಯೋಫ್ ಹರ್ಸ್ಟ್ ಟ್ವೀಟ್ ಮಾಡಿದ್ದು, "ಎಂಬಾಪೆಗೆ ಅಭಿನಂದನೆಗಳು, ಎಂಬಾಪೆ ಪೆನಾಲ್ಟಿ ಸ್ಪಾಟ್‌ನಿಂದ ಎರಡು ಗೋಲು ಗಳಿಸಿದರು, ಆದರೆ ನಾನು ಉತ್ತಮವಾಗಿ ಗೋಲು ಗಳಿಸಿದ್ದೇನೆ" ಎಂದು ಹೇಳಿದ್ದಾರೆ.

24 ವರ್ಷದ ಯುವ ಆಟಗಾರ ಕೈಲಿಯನ್ ಎಂಬಾಪೆ ಈ ಬಾರಿಯ ವಿಶ್ವಕಪ್‌ನಲ್ಲಿ ಜಗತ್ತಿನ ಗಮನ ಸೆಳೆದರು. ಈತ ಮುಂದೆ ವಿಶ್ವ ಫುಟ್ಬಾಲ್‌ ಲೋಕದ ದಿಗ್ಗಜ ಆಟಗಾರರ ಪಟ್ಟಿಗೆ ಸೇರಲಿದ್ದಾನೆ ಎಂದು ಈಗಾಗಲೇ ಹಲವರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ವಿಶ್ವಕಪ್‌ನಲ್ಲಿ ಎಂಬಾಪೆ ಫ್ರಾನ್ಸ್ ತಂಡಕ್ಕಾಗಿ ವಿಶ್ವಕಪ್‌ ಗೆದ್ದರೂ ಅಚ್ಚರಿ ಪಡಬೇಕಿಲ್ಲ.

Story first published: Monday, December 19, 2022, 22:42 [IST]
Other articles published on Dec 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X