FIFA World Cup: ಪೋರ್ಚುಗಲ್ ವಿರುದ್ಧ 2-1 ಅಂತರದ ಜಯ ಸಾಧಿಸಿ 16ರ ಘಟ್ಟಕ್ಕೆ ಪ್ರವೇಶಿಸಿದ ದಕ್ಷಿಣ ಕೊರಿಯಾ

ಶುಕ್ರವಾರ ದೋಹಾದ ಎಜುಕೇಶನ್ ಸಿಟಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಲಿಷ್ಠ ಪೋರ್ಚುಗಲ್ ವಿರುದ್ಧ ಹಯ ಸಾಧಿಸುವ ಮೂಲಕ ದಕ್ಷಿಣ ಕೊರಿಯಾ ತಂಡ ಫಿಫಾ ವಿಶ್ವಕಪ್‌ 2022 ರಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಹಂತಕ್ಕ ಪ್ರವೇಶ ಪಡೆದಿದೆ.

ಪಂದ್ಯದ ಮೊದಲಾರ್ಧದ ಅಂತ್ಯಕ್ಕೆ ಎರಡೂ ತಂಡಗಳು 1-1 ಗೋಲಿ ಗಳಿಸುವ ಮೂಲಕ ಸಮಬಲ ಸಾಧಿಸಿದ್ದವು. ಆಟದ ಕೊನೆಯ ಕ್ಷಣದವರೆಗೂ ಉಭಯ ತಂಡಗಳಿಗೂ ಮತ್ತೊಂದು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಹೆಚ್ಚುವರಿ ಅವಧಿಯಲ್ಲಿ (90+1) ನಿಮಿಷದಲ್ಲಿ ಹ್ವಾಂಗ್-ಹೀ-ಚಾನ್‌ ಮಹತ್ವದ ಗೋಲು ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದರು.

PKL 2022: ಯು ಮುಂಬಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಯುಪಿ ಯೋಧಾಸ್PKL 2022: ಯು ಮುಂಬಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಯುಪಿ ಯೋಧಾಸ್

ಎಚ್‌ ಗುಂಪಿನಲ್ಲಿ 3 ರಲ್ಲಿ 2 ಪಂದ್ಯಗಳನ್ನು ಗೆದ್ದು ಒಂದು ಪಂದ್ಯದಲ್ಲಿ ಸೋಲನುಭವಿಸುವ ಮೂಲಕ 6 ಅಂಕಗಳೊಂದಿಗೆ ಗ್ರೂಪಿನ ಅಗ್ರಸ್ಥಾನಿಯಾಗಿ ಅಗ್ರ 16ರ ಘಟ್ಟಕ್ಕೆ ಪ್ರವೇಶ ಪಡೆಯಿತು. ಪೋರ್ಚುಗಲ್ ತಂಡವನ್ನು ಸೋಲಿಸುವ ಮೂಲಕ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ದಕ್ಷಿಣ ಕೊರಿಯಾ ಅರ್ಹವಾಗಿಯೇ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಪಂದ್ಯ ಆರಂಭವಾದ 5ನೇ ನಿಮಿಷದಲ್ಲೇ ಪೋರ್ಚುಗಲ್ ಗೋಲು ದಾಖಲಿಸುವ ಮೂಲಕ ಭರ್ಜರಿಯಾಗಿ ಆಟವನ್ನು ಆರಂಭಿಸಿತು. ಡಿಯಾಗೋ ನೀಡಿದ ಬಾಲ್‌ ಅನ್ನು ಪಡೆದ ರಿಕಾಡೋ ಹೋರ್ಟಾ ಪಂದ್ಯದ ಮೊದಲನೇ ಗೋಲು ದಾಖಲಸಿ ಸಂಭ್ರಮಿಸಿದರು. ಆದರೆ ಆಟದ 27ನೇ ನಿಮಿಷದಲ್ಲಿ ದಕ್ಷಿಣ ಕೊರಿಯಾದ ಕಿಮ್ ಯಂಗ್ ಗ್ವಾನ್ ಗೋಲು ಗಳಿಸುವ ಮೂಲಕ 1-1ರಲ್ಲಿ ಸಮಬಲವಾಗಲು ಕಾರಣವಾದರು.

ಹೆಚ್ಚುವರಿ ಸಮಯದಲ್ಲಿ ಬಂದ ಗೆಲುವಿನ ಗೋಲು

ಮೊದಲಾರ್ಧದಲ್ಲಿ ಉಭಯ ತಂಡಗಳು 1-1ರಲ್ಲಿ ಸಮಬಲ ಸಾಧಿಸಿದ್ದವು. ದ್ವಿತೀಯಾರ್ಧದಲ್ಲಿ ಕೂಡ ಎರಡೂ ತಂಡಗಳು ಗೋಲು ಗಳಿಸಲು ಹರಸಾಹಪಟ್ಟವು. ಆದರೆ, 90 ನಿಮಿಷಗಳ ಆಟದ ಅವಧಿಯ ಮುಕ್ತಾಯದ ನಂತರ ಹೆಚ್ಚುವರಿ ಸಮಯದ ಮೊದಲನೇ ನಿಮಿಷದಲ್ಲಿಯೇ ಹ್ವಾಂಗ್-ಹೀ-ಚಾನ್‌ ಗೋಲು ಗಳಿಸುವ ಮೂಲಕ ದಕ್ಷಿಣ ಕೊರಿಯಾ ತಂಡದ ಹೀರೋ ಎನಿಸಿಕೊಂಡರು.

ಹೆಚ್‌ ಗುಂಪಿನಿಂದ ಪೋರ್ಚುಗಲ್ ಮತ್ತು ದಕ್ಷಿಣ ಕೊರಿಯಾ ಪ್ರಿ ಕ್ವಾರ್ಟರ್ ಫೈನಲ್ ತಲುಪುವುದರೊಂದಿಗೆ. ಗುಂಪಿನಲ್ಲಿದ್ದ ಇತರೆ ತಂಡಗಳಾದ ಉರುಗ್ವೆ ಮತ್ತು ಘಾನಾ ಟೂರ್ನಿಯಿಂದ ಹೊರ ಬಿದ್ದಿವೆ. ಉರುಗ್ವೆ ಮತ್ತು ಘಾನ ಈ ಬಾರಿ ವಿಶ್ವಕಪ್‌ನಲ್ಲಿ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಯಿತು.

For Quick Alerts
ALLOW NOTIFICATIONS
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS
Story first published: Saturday, December 3, 2022, 2:35 [IST]
Other articles published on Dec 3, 2022
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X