ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

FIFA World Cup 2022: ಲಿಯೋನೆಲ್ ಮೆಸ್ಸಿ ಭಾರತೀಯನಾಗಿದ್ದರೆ? ಸೆಹ್ವಾಗ್ ಹಂಚಿಕೊಂಡ ಪೋಸ್ಟ್ ವೈರಲ್

FIFA World Cup 2022 : Virender Sehwag Tweet About What If Messi Was Indian Went Viral

ಭಾನುವಾರ, ಡಿಸೆಂಬರ್ 18 ರಂದು ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಜಯ ಸಾಧಿಸಿದ ಅರ್ಜೆಂಟೀನಾ 36 ವರ್ಷಗಳ ಬಳಿಕ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತು.

ಭಾರತದಲ್ಲಿ ಕೂಡ ಫುಟ್ಬಾಲ್‌ಗೆ ಅಪಾರ ಅಭಿಮಾನಿಗಳಿದ್ದಾರೆ. ಅರ್ಜೆಂಟೀನಾ ತಂಡಕ್ಕೆ ಮತ್ತು ಲಿಯೋನೆಲ್ ಮೆಸ್ಸಿಗೆ ಸಾಕಷ್ಟು ಅಭಿಮಾನಿಗಳು ಪಂದ್ಯದ ವೇಳೆ ಬೆಂಬಲ ನೀಡಿದ್ದರು. ಪಂದ್ಯದಲ್ಲಿ ಗೆಲುವು ಸಾಧಿಸಿದ ನಂತರ ಹಲವು ಕ್ರಿಕೆಟಿಗರು, ಮೆಸ್ಸಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಭಾರತ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಲಿಯೋನೆಲ್ ಮೆಸ್ಸಿ ಕುರಿತಂತೆ ಹಂಚಿಕೊಂಡಿರುವ ಪೋಸ್ಟ್ ಈಗ ಸಖತ್ ವೈರಲ್ ಆಗಿದೆ. ಅರ್ಜೆಂಟೀನಾದ ವಿಶ್ವಕಪ್ ವಿಜಯದ ಬಗ್ಗೆ ಪ್ರತಿಕ್ರಿಯಿಸಿದ ಸೆಹ್ವಾಗ್ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮೀಮ್ ಅನ್ನು ಹಂಚಿಕೊಂಡಿದ್ದಾರೆ, ಒಂದು ಮೆಸ್ಸಿ ಭಾರತೀಯನಾಗಿದ್ದರೆ ವಿಶ್ವಕಪ್ ಗೆದ್ದ ನಂತರ ಸರ್ಕಾರಿ ಉದ್ಯೋಗವನ್ನು ಗಳಿಸುತ್ತಿದ್ದರು ಎನ್ನುವ ಸಂದೇಶ ಅವರ ಮೀಮ್‌ನಲ್ಲಿದೆ.

ಡಿಸೆಂಬರ್ 18 ರ ಭಾನುವಾರದಂದು ಫ್ರಾನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಮೆಸ್ಸಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಅನುಭವಿ ಫುಟ್ಬಾಲ್ ಆಟಗಾರ ಫೈನಲ್‌ನಲ್ಲಿ ಎರಡು ಗೋಲು ಗಳಿಸಿದರು. ಪೆನಾಲ್ಟಿ ಕಿಕ್‌ ಅನ್ನು ಅವರು ಗೋಲ್ ಆಗಿ ಪರಿವರ್ತಿಸಿದ್ದರು.

ಫೈನಲ್‌ನಲ್ಲಿ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳಿಂದ ಫ್ರಾನ್ಸ್ ಅನ್ನು ಸೋಲಿಸುವ ಮೂಲಕ 35 ವರ್ಷ ವಯಸ್ಸಿನ ಫುಟ್ಬಾಲ್ ತಾರೆ ತಮ್ಮ ಮೊದಲ ಫಿಫಾ ವಿಶ್ವಕಪ್ ಟ್ರೋಫಿಯನ್ನು ಗೆದ್ದರು.

ಮೆಸ್ಸಿ ಆಟಕ್ಕೆ ಸಂತಸ ವ್ಯಕ್ತಪಡಿಸಿದ ಸೆಹ್ವಾಗ್

ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ ಗೆಲುವು ಸಾಧಿಸುತ್ತಿದ್ದಂತೆ ವೀರೇಂದ್ರ ಸೆಹ್ವಾಗ್ ಮೆಸ್ಸಿ ಮತ್ತು ತಂಡವನ್ನು ಹೊಗಳಿದರು. ಫ್ರಾನ್ಸ್ ಮತ್ತು ಅರ್ಜೆಂಟೀನಾ ನಡುವಿನ ಫೈನಲ್ ಪಂದ್ಯವನ್ನು ವಿಶ್ವಕಪ್ ಪಂದ್ಯಗಳಲ್ಲಿ ಸಾರ್ವಕಾಲಿಕ ಶ್ರೇಷ್ಠ ಪಂದ್ಯವಾಗಿತ್ತು ಎಂದು ಹೇಳಿದರು.

ಮೆಸ್ಸಿ ಜೊತೆಯಲ್ಲಿಯೇ ಹ್ಯಾಟ್ರಿಕ್ ಗೋಲು ದಾಖಲಿಸಿದ ಫ್ರಾನ್ಸ್‌ನ ಕೈಲಿಯನ್ ಎಂಬಾಪೆ ಬಗ್ಗೆ ಕೂಡ ವೀರೇಂದ್ರ ಸೆಹ್ವಾಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ಸಾರ್ವಕಾಲಿಕ ಶ್ರೇಷ್ಠ ವಿಶ್ವಕಪ್ ಪಂದ್ಯಗಳಲ್ಲಿ ಒಂದಾಗಿದೆ. ಭವ್ಯವಾದ ಚಮತ್ಕಾರಕ್ಕಾಗಿ ಅರ್ಜೆಂಟೀನಾ ಮತ್ತು ಫ್ರಾನ್ಸ್‌ಗೆ ಧನ್ಯವಾದಗಳು. ಎಂಬಾಪೆ ಫ್ರಾನ್ಸ್‌ ಪರವಾಗಿ ಅತ್ಯುತ್ತಮ ಆಟವಾಡಿದರು. ಆದರೆ, ಇದು ಲಿಯೋನೆಲ್ ಮೆಸ್ಸಿಯ ಕಿರೀಟದ ಕ್ಷಣವಾಗಿತ್ತು. ಫಿಫಾ ವಿಶ್ವಕಪ್ ಚಾಂಪಿಯನ್ ಆಗಿದ್ದಕ್ಕಾಗಿ ಅರ್ಜೆಂಟೀನಾಗೆ ಅಭಿನಂದನೆಗಳು." ಎಂದು ಪೋಸ್ಟ್ ಮಾಡಿದ್ದಾರೆ.

ಮೆಸ್ಸಿ ಇಡೀ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಗೋಲ್ಡನ್ ಬಾಲ್ ಗೆದ್ದುಕೊಂಡರು.

Story first published: Monday, December 19, 2022, 23:20 [IST]
Other articles published on Dec 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X