ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫಿಫಾ ವಿಶ್ವಕಪ್ ಫೈನಲ್: ಗೋಲ್ಡನ್ ಬೂಟ್, ಗೋಲ್ಡನ್ ಬಾಲ್ ಪಡೆದ ಆಟಗಾರರು ಯಾರು?

FIFA World cup: complete List of Award Winners, Golden Boot, Golden Ball and Golden Glove

ಫಿಫಾ ವಿಶ್ವಕಪ್ ಇತಿಹಾಸದ ರೋಚಕ ಪಂದ್ಯಕ್ಕೆ ಭಾನುವಾರ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ತಂಡ ರೋಚಕ ಗೆಲುವು ಸಾಧಿಸಿದ್ದು ಚಾಂಪಿಯನ್ ತಂಡವಾಘಿ ಹೊರಹೊಮ್ಮಿದೆ. ಈ ಮೂಲಕ ಸುದೀರ್ಘ ಕಾಲದ ಅರ್ಜೆಂಟಿನಾ ಅಭಿಮಾನಿಗಳ ಕನಸು ಸಾಕಾರಗೊಂಡಿದೆ.

ಈ ಗೆಲುವಿನಿಂದಿಗೆ ಅರ್ಜೆಂಡಿಆ ತಂಡ 3ನೇ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಂತಾಗಿದೆ. 1086ರಲ್ಲಿ ಮರಡೋನಾ ಅವರ ಅದ್ಭುತ ಪ್ರದರ್ಶನದಲ್ಲಿ ಗೆದ್ದ ಬಳಿಕ ಒಮ್ಮೆಯೂ ಗೆಲುವು ಸಾಧ್ಯವಾಗಿರಲಿಲ್ಲ. ಇದೀಗ ಲಿಯೋನೆಲ್ ಮೆಸ್ಸಿ ನೇತೃತ್ವದಲ್ಲಿ ಅರ್ಜೆಂಟಿನಾ ತಂಡ ಈ ವಿಶೇಷ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದೆ.

ಈ ವಿಶ್ವಕಪ್ ಆರಂಭದಿಂದಲೇ ಸಾಕಷ್ಟು ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಕೆಲ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳನ್ನು ಏಷ್ಯಾ ಹಾಗೂ ಆಫ್ರಿಕಾದ ಹೊರಹಾಕುವ ಮೂಲಕ ಈ ವಿಶ್ವಕಪ್‌ನಲ್ಲಿ ಭಾರೀ ಏರುಪೇರಿಗೆ ಕಾರಣವಾದವು. ಮೊರಾಕ್ಕೋ ಸೆಮಿಫೈನಲ್‌ಗೆ ಪ್ರವೇಶಿಸುವ ಮೂಲಕ ಈ ಸಾಧನೆ ಮಾಡಿದ ಆಫ್ರಿಕಾ ಖಂಡದ ಮೊದಲ ಫುಟ್ಬಾಲ್ ತಂಡ ಎನಿಸಿಕೊಂಡಿತು. ಭಾನುವಾರದ ವರೆಗೂ ಟ್ರೋಫಿಗಾಗಿ ಪೈಪೋಟಿ ನಡೆದೇ ಇತ್ತು. ಅಂತಿಮವಾಗಿ ಈ ಪ್ರಶಸ್ತಿ ಅರ್ಜೆಂಡಿನಾ ಪಾಲಾಗಿದೆ. ಇನ್ನು ಚಾಂಪಿಯನ್ ಪಟ್ಟ ಹೊರತುಪಡಿಸಿ ಈ ವಿಒಶ್ವಕಪ್‌ನಲ್ಲಿ ಯಾವೆಲ್ಲಾ ಪ್ರಮುಖ ಪ್ರಶಸ್ಸತಿಗಳು ಯಾರ ಪಾಲಾಗಿದೆ ಎಂಬುದನ್ನು ಇಲ್ಲಿ ನೋಡೀಣ.

ಗೋಲ್ಡನ್ ಬೂಟ್
ಫ್ರಾನ್ಸ್‌ನ ಯುವ ಆಟಗಾರ ಕಿಲಿಯನ್ ಕಿಲಿಯನ್ ಎಂಬಪ್ಪೆ ಈ ಬಾರಿಯ ವಿಶ್ವಕಪ್‌ನಲ್ಲಿ ನೀಡಿದ ಅಮೋಘ ಪ್ರದರ್ಶನ ಆ ತಂಡವನ್ನು ಸತತ ಎರಡನೇ ಬಾರಿಗೆ ಫೈಬಲ್ ಹಂತಕ್ಕೇರುವಂತೆ ಮಾಡಿತ್ತು. ಫೈನಲ್‌ನಲ್ಲಿಯೂ ಐತಿಹಾಸಿಕ ಸಾಧನೆ ಮಾಡಿದ ಎಂಬಪ್ಪೆ ಹ್ಯಾಟ್ರಿಕ್ ಗೋಲು ಬಾರಿಸಿ ಫ್ರಾನ್ಸ್ ತಂಡದ ಗೆಲುವಿಗಾಗಿ ಪ್ರಯತ್ನಿಸಿದರು. ಆದರೆ ಫೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ಸೋಲು ಅನುಭವಿಸಬೇಕಾಯಿತು. ಆದರೆ ಈ ವಿಶ್ವಕಪ್‌ನಲ್ಲಿ ಒಟ್ಟು 8 ಗೋಲು ಗಳಿಸಿದ ಎಂಬಪ್ಪೆ ಅತಿ ಹೆಚ್ಚು ಗೋಲು ಸಿಡಿಸಿ ವಿಶ್ವಕಪ್‌ನ ಪ್ರತಿಷ್ಠಿತ ಪ್ರಶಸ್ತಿಯಾದ ಗೋಲ್ಡನ್ ಬೂಟ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಗೋಲ್ಡನ್ ಬಾಲ್: ಇನ್ನು ಅತ್ಯುತ್ತಮ ಆಟಗಾರನಿಗೆ ನೀಡುವ ಗೋಲ್ಡನ್ ಬಾಲ್ ಪ್ರಶಸ್ತಿ ಲಿಯೋನೆಲ್ ಮೆಸ್ಸಿ ಪಾಲಾಗಿದೆ. 7 ಗೋಲು ಹಾಗೂ 3 ಅಸಿಸ್ಟ್‌ಗಳನ್ನು ಲಿಯೋನೆಲ್ ಮೆಸ್ಸಿ ಹೊಂದಿದ್ದು ವಿಶ್ವಕಪ್‌ನಲ್ಲಿ ಅರ್ಜೆಂಟಿನಾ ಗೆಲ್ಲಲು ಪ್ರಮುಖ ಕಾರಣವಾಗಿದ್ದರೆ.

ಗೋಲ್ಡನ್ ಗ್ಲೌ: ಇನ್ನು ಟೂರ್ನಿಯ ಅತ್ಯುತ್ತಮ ಗೋಲ್‌ಕೀಪರ್‌ಗೆ ನೀಡುವ ಗೋಲ್ಡನ್ ಗ್ಲೌ ಪ್ರಶಸ್ತಿ ಅರ್ಜೆಂಟಿನಾ ತಂಡದ ಗೋಲ್ ಕೀಪರ್ ಎಮಿ ಪಾರ್ಟಿನೆನ್ಜ್ ಪಾಲಾಗಿದೆ.

ಯುವ ಆಟಗಾರ ಪ್ರಶಸ್ತಿ: ಇನ್ನು ಈ ವಿಶ್ವಕಪ್‌ನ ಅತ್ಯುತ್ತಮ ಯುವ ಆಟಗಾರ ಪ್ರಶಸ್ತಿ ಅರ್ಜೆಂಟಿನಾ ತಂಡದ ಯುವ ಆಟಗಾರ ಎನ್ಜೋ ಫರ್ನಾಂಡೀಸ್ ಪಾಲಾಗಿದೆ.

ಕೈಲಿಯನ್ ಎಂಬಪ್ಪೆ (ಫ್ರಾನ್ಸ್) - 8
ಲಿಯೋನೆಲ್ ಮೆಸ್ಸಿ (ಅರ್ಜೆಂಟೀನಾ) - 7
ಜೂಲಿಯನ್ ಅಲ್ವಾರೆಜ್ (ಅರ್ಜೆಂಟೀನಾ) - 4
ಒಲಿವಿಯರ್ ಗಿರೌಡ್ - 4
ಅಲ್ವಾರೊ ಮೊರಾಟಾ (ಸ್ಪೇನ್) - 3
ಬುಕಾಯೊ ಸಾಕಾ (ಇಂಗ್ಲೆಂಡ್) - 3
ಕೋಡಿ ಗಕ್ಪೋ (ನೆದರ್ಲ್ಯಾಂಡ್ಸ್) - 3

Story first published: Monday, December 19, 2022, 8:28 [IST]
Other articles published on Dec 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X