ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಅರ್ಜೆಂಟಿನಾ ವಿರುದ್ಧ ಗೆದ್ದ ಸೌದಿ ಅರೇಬಿಯಾ: ರಾಷ್ಟ್ರೀಯ ರಜೆ ಘೋಷಣೆ ಮಾಡಿದ ಕಿಂಗ್ ಸಲ್ಮಾನ್

FIFA World Cup: Saudi Arabia’s King Salman announced holiday after win against Lionel Messis Argentina

ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾ ಅಮೋಘ ಗೆಲುವು ಸಾಧಿಸಿದ್ದು ಫುಟ್ಬಾಲ್ ಲೋಕದಲ್ಲಿ ಎಲ್ಲರನ್ನೂ ದಿಗ್ಭ್ರಮೆಗೆ ಒಳಪಡಿಸಿದೆ. ಈ ಗೆಲುವಿನ ಸಂಭ್ರಮದಲ್ಲಿರುವ ಸೌದಿ ಅರೇಬಿಯಾ ಜನತೆಗೆ ಅಲ್ಲಿನ ರಾಜ ಸಲ್ಮಾನ್ ಸರ್ಕಾರಿ ರಜೆ ಘೋಷಣೆ ಮಾಡಿದ್ದಾರೆ. ಈ ಮೂಲಕ ಇಡೀ ದೇಶ ಈ ಗೆಲುವನ್ನು ಸಂಭ್ರಮಿಸುತ್ತಿದೆ. ಅರ್ಜೆಂಟಿನಾ ವಿರುದ್ಧ ಬುಧವಾರ ನಡೆದ ಪಮದ್ಯದಲ್ಲಿ ಸೌದಿ ಅರೇಬಿಯಾ 2-1 ಅಂತರದಿಂದ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿತು.

ಇಲ್ಲಿನ ಲುಸೈಲ್ ಸ್ಟೇಡಿಯಂನಲ್ಲಿ ಬಲಿಷ್ಠ ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾ 2-1 ಗೋಲುಗಳಿಂದ ಜಯ ಗಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಸಲೆಹ್ ಅಲ್‌ಶೆಹ್ರಿ ಮತ್ತು ಸಲೇಮ್ ಅಲ್ದಾವ್ಸರಿ ತಲಾ ಒಂದು ಗೋಲು ಗಳಿಸುವ ಮೂಲಕ ಸೌದಿ ಅರೇಬಿಯಾ ತಂಡ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಯಿತು. ಈ ಬಾರಿಯ ವಿಶ್ವಕಪ್‌ನಲ್ಲಿ ಗೆಲ್ಲುವ ನೆಚ್ಚಿನ ತಂಡವೆನಿಸಿಕೊಂಡಿದ್ದ ಅರ್ಜೆಂಟೀನಾಗೆ ಮೊದಲನೇ ಪಂದ್ಯದಲ್ಲೇ ಸೋಲು ಎದುರಾಗಿದ್ದು ಭಾರೀ ಮುಖಭಂಗವಾಗಿದೆ.

ಈ ಪಂದ್ಯದಲ್ಲಿ ಆರಂಭದಲ್ಲಿಯೇ ಅರ್ಜಂಟಿನಾ ತಂಡ ಗೋಲು ಗಳಿಸುವ ಮೂಲಕ ಮೇಲುಗೈ ಸಾಧಿಸಿತ್ತು. ಅರ್ಜೆಂಟಿನಾ ತಂಡದ ಲಿಯೊನೆಲ್ ಮೆಸ್ಸಿ ಪಂದ್ಯದ ಆರಂಭದಲ್ಲೇ ಗೋಲು ಗಳಿಸುವ ಮೂಲಕ ಅರ್ಜೆಂಟೀನಾ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟಿದ್ದರು. ಹೀಗಾಗಿ ನಿರೀಕ್ಷಿತವಾಗಿಯೇ ಮೆಸ್ಸಿ ಪಡೆ ಸುಲಭ ಗೆಲುವು ಸಾಧಿಸಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಸೌದಿ ಅರೇಬಿಯಾ ತಿರುಗಿಬಿದ್ದು ಅರ್ಜೆಂಟೀನಾ ತಂಡಕ್ಕೆ ಭಾರೀ ಆಘಾತ ನೀಡಿತು. ಮೆಸ್ಸಿ ಪಡೆಯ ರಕ್ಷಣಾವಿಭಾಗವನ್ನು ಕೆಡವಿದ ಸೌದಿ ಅರೇಬಿಯಾ ಎರಡು ಗೋಲು ದಾಖಲಿಸಿ ಎದುರಾಳಿಗೆ ಆಘಾತ ನೀಡಿತು.

ಸಲೆಹ್ ಅಲ್‌ಶೆಹ್ರಿ 48ನೇ ನಿಮಿಷದಲ್ಲಿ ಮೊದಲನೇ ಗೋಲು ಗಳಿಸುವ ಮೂಲಕ 1-1 ಗೋಲಿನಿಂದ ಆಟದಲ್ಲಿ ಸಮಬಲ ಸಾಧಿಸಿದರು. ಅದಾದ ಕೇವಲ ಐದು ನಿಮಿಷದಲ್ಲೇ ಸಲೇಮ್ ಅಲ್ದಾವ್ಸರಿ ಸೌದಿ ಅರೇಬಿಯಾ ಪರವಾಗಿ 2ನೇ ಗೋಲು ಗಳಿಸಿ ಫುಟ್ಬಾಲ್ ಲೋಕವನ್ನು ದಂಗುಬಡಿಸಿದರು.
ಅಲ್ಲಿಂದ ಕೊನೆಯ ಕ್ಷಣದವರೆಗೂ ಅರ್ಜೆಂಟೀನಾ ಒಂದು ಗೋಲು ಗಳಿಸಲು ಕೂಡ ಸಾಧ್ಯವಾಗದಂತೆ ಬಲಿಷ್ಠ ರಕ್ಷಣಾ ಕೋಟೆ ನಿರ್ಮಿಸಿದ ಸೌದಿ ಅರೇಬಿಯಾ, ಅವಿಸ್ಮರಣೀಯ ವಿಜಯದೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸಿದೆ.

Story first published: Tuesday, November 22, 2022, 23:59 [IST]
Other articles published on Nov 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X