ಶಸ್ತ್ರ ಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ ದಂತಕತೆ ಪೀಲೆ

ಸಾವೊ ಪೌಲೊ: ಬ್ರೆಝಿಲ್‌ನ ಫುಟ್ಬಾಲ್ ದಂತಕತೆ ಪೀಲೆ ಆರೋಗ್ಯ ಚೇತರಿಸಿಕೊಳ್ಳುತ್ತಿದೆ. ತನ್ನ ಕೊಲೊನ್ (ಕರುಳಿನ ಭಾಗ)ನಲ್ಲಿದ್ದ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆದ ಬಳಿಕ ಆಸ್ಪತ್ರೆಯಲ್ಲಿ ತಾನು ಚೇತರಿಸಿಕೊಳ್ಳುತ್ತಿರುವುದಾಗಿ ಸ್ವತಃ ಪೀಲೆ ತಿಳಿಸಿದ್ದಾರೆ.

'ವಿಶ್ವ ಕ್ರಿಕೆಟ್‍ನಲ್ಲಿ ಭಾರತ ಪವರ್‌ಹೌಸ್, ಕೊಹ್ಲಿ ಸೂಪರ್‌ಸ್ಟಾರ್' ಎಂದು ಕೊಂಡಾಡಿದ ದಿಗ್ಗಜ ಕ್ರಿಕೆಟಿಗ'ವಿಶ್ವ ಕ್ರಿಕೆಟ್‍ನಲ್ಲಿ ಭಾರತ ಪವರ್‌ಹೌಸ್, ಕೊಹ್ಲಿ ಸೂಪರ್‌ಸ್ಟಾರ್' ಎಂದು ಕೊಂಡಾಡಿದ ದಿಗ್ಗಜ ಕ್ರಿಕೆಟಿಗ

ವಿಶ್ವದಲ್ಲಿ ಮೂರು ಫುಟ್ಬಾಲ್ ವಿಶ್ವಕಪ್‌ಗಳನ್ನು ಗೆದ್ದ ಏಕಮಾತ್ರ ಫುಟ್ಬಾಲರ್ ಪೀಲೆ. ಹೊಟ್ಟೆಯೊಳಗಿದ್ದ ಗಡ್ಡೆ ಮಾರಕವಾಗಿತ್ತೆ ಎಂಬ ಪ್ರಶ್ನೆಗೆ ಪೀಲೆ ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ ತಾನೀಗ ಆರೋಗ್ಯ ವಿಚಾರದಲ್ಲಿ ಉತ್ತಮ ಸ್ಥಿತಿಯಲ್ಲಿದ್ದೇನೆ ಎಂದಿದ್ದಾರೆ. 80 ಹರೆಯದ ಪೀಲೆ ಸ್ಯಾಂಟೋಸ್ ಮತ್ತು ನ್ಯೂಯಾರ್ಕ್ ಕಾಸ್ಮೋಸ್ ತಂಡದ ಮಾಜಿ ಆಟಗಾರ.

"ಕಳೆದ ಶನಿವಾರ (ಸೆಪ್ಟೆಂಬರ್‌ 4) ನಾನು ಶಸ್ತ್ರ ಚಿಕಿತ್ಸೆಗೆ ಹೋಗಿದ್ದೆ. ನನ್ನ ಬಲ ಕೊಲೊನ್ ಭಾಗದಲ್ಲಿದ್ದ ಅನುಮಾನಾಸ್ಪದ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆಸಿದೆ. ಕಳೆದ ವಾರ ಪರೀಕ್ಷೆಯ ವೇಳೆ ಗಡ್ಡೆಯಿರುವುದು ಕಂಡು ಬಂದಿತ್ತು," ಎಂದು ಪೀಲೆ ಮಾಹಿತಿ ನೀಡಿದ್ದಾರೆ.

ಓವಲ್ ಟೆಸ್ಟ್ ಪಂದ್ಯದಲ್ಲಿ ಬೃಹತ್ ದಾಖಲೆ ನಿರ್ಮಿಸಿದ ಎರಡೂ ತಂಡಗಳ ನಾಲ್ವರು ಆಟಗಾರರುಓವಲ್ ಟೆಸ್ಟ್ ಪಂದ್ಯದಲ್ಲಿ ಬೃಹತ್ ದಾಖಲೆ ನಿರ್ಮಿಸಿದ ಎರಡೂ ತಂಡಗಳ ನಾಲ್ವರು ಆಟಗಾರರು

ಮುಂಜಾಗ್ರತಾ ಕ್ರಮವಾಗಿ ಇನ್ನೂ ಪೀಲೆ ಅವರನ್ನು ತೀವ್ರ ನಿಗಾ ಘಟಕದಲ್ಲಿ ಉಳಿಸಿಕೊಂಡಿದ್ದೇವೆ. ಆದರೆ ಮಂಗಳವಾರ (ಸೆಪ್ಟೆಂಬರ್‌ 7) ಪೀಲೆ ಅವರನ್ನು ಬೇರೆ ಕೋಣೆಗೆ ಸ್ಥಳಾಂತರಿಸಲಿದ್ದೇವೆ ಎಂದು ಬ್ರೆಝಿಲ್‌ನ ಸಾವೊ ಪೌಲೊದಲ್ಲಿರುವ ಅಲ್ಬರ್ಟ್ ಐನ್‌ಸ್ಟೈನ್ ಆಸ್ಪತ್ರೆಯಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
ಪೂರ್ವಭಾವಿಗಳು
VS
Story first published: Tuesday, September 7, 2021, 12:51 [IST]
Other articles published on Sep 7, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X