ಬ್ರೆಝಿಲ್ ಮಾಜಿ ಫುಟ್ಬಾಲಿಗ ರೊನಾಲ್ಡಿನೋಗೆ ಕೊರೊನಾ ಪಾಸಿಟಿವ್

ರಿಯೋ ಡಿ ಜನೈರೊ: ಬ್ರೆಝಿಲ್‌ನ ಮಾಜಿ ಫುಟ್ಬಾಲಿಗ ರೊನಾಲ್ಡಿನೋ ಕೊರೊನಾವೈರಸ್‌ ಸೋಂಕಿಗೀಡಾಗಿದ್ದಾರೆ. ತಾನು ಕೋವಿಡ್-19ಗೆ ಪಾಸಿಟಿವ್ ಇರುವುದಾಗಿ ರೊನಾಲ್ಡಿನೋ ಅವರೇ ಭಾನುವಾರ (ಅಕ್ಟೋಬರ್ 25) ಹೇಳಿಕೊಂಡಿದ್ದಾರೆ. ಕೊರೊನಕ್ಕೆ ಇತ್ತೀಚೆಗೆ ತುತ್ತಾಗಿರುವ ಕ್ರೀಡಾಪಟುವಾಗಿ ರೊನಾಲ್ಡಿನೋ ಗುರುತಿಸಿಕೊಂಡಿದ್ದಾರೆ.

ಎರಡು ಬಾರಿ 'ಫೀಫಾ ವಿಶ್ವದ ಆಟಗಾರ' ಪ್ರಶಸ್ತಿ ಗೆದ್ದಿರುವ ರೊನಾಲ್ಡಿನೋ ಇತ್ತೀಚೆಗಷ್ಟೇ ಪೆರಗ್ವೆಯಲ್ಲಿ ಬಂಧನಕ್ಕೊಳಗಾಗಿದ್ದರು. ನಕಲಿ ವೀಸಾ ಬಳಸಿದ್ದಕ್ಕಾಗಿ 40ರ ಹರೆಯದ ರೊನಾಲ್ಡೋ ಅವರಿಗೆ 5 ತಿಂಗಳ ಬಂಧನ ಶಿಕ್ಷೆ ವಿಧಿಸಲಾಗಿತ್ತು.

ಕೋವಿಡ್-19ಗೆ ತಾನು ಪಾಸಿಟಿವ್ ಆಗಿರುವ ವಿಚಾರವನ್ನು ತಿಳಿಸಿರುವ ರೊನಾಲ್ಡಿನೋ ತನಗೆ ಸೋಂಕಿಗೆ ಸಂಬಂಧಿಸಿ ಯಾವುದೇ ಗುಣಲಕ್ಷಣಗಳಿಲ್ಲ ಎಂದೂ ಹೇಳಿದ್ದಾರೆ. ಸದ್ಯ ತಾನೀಗ ಬೆಲೊ ಹರೈಜಾಂಟೆಯಲ್ಲಿ ಸೆಲ್ಫ್ ಐಸೊಲೇಶನ್‌ನಲ್ಲಿರುವುದಾಗಿ ರೊನಾಲ್ಡಿರೋ ಮಾಹಿತಿ ನೀಡಿದ್ದಾರೆ.

ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ರೊನಾಲ್ಡಿನೋ ಈ ಮಾಹಿತಿ ನೀಡಿದ್ದಾರೆ. 'ನಾನು ಇಲ್ಲಿಗೆ ಒಂದು ಕಾರ್ಯಕ್ರಮದ ಸಲುವಾಗಿ ಬಂದಿದ್ದೆ. ನಾನು ಕೊರೊನಾ ಪರೀಕ್ಷೆ ಮಾಡಿಕೊಂಡಿದ್ದೇನೆ. ನನಗೆ ಪಾಸಿಟಿವ್ ಬಂದಿದೆ,' ಎಂದು ರೊನಾಲ್ಡೋ ತಿಳಿಸಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, October 26, 2020, 16:34 [IST]
Other articles published on Oct 26, 2020
  • Nov 26 2020, Thu - 01:30 AM (IST)
  • Nov 26 2020, Thu - 01:30 AM (IST)
  • Nov 26 2020, Thu - 01:30 AM (IST)
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X