ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಮ್ಯಾಂಚೆಸ್ಟರ್ ಯುನೈಟೆಡ್ ಫುಟ್‌ಬಾಲ್‌ ಕ್ಲಬ್ ಖರೀದಿಸುತ್ತೇನೆ ಎಂದ ಎಲಾನ್ ಮಸ್ಕ್!

I am buying Manchester United football club says Tesla CEO Elon Musk

ಜಗತ್ತಿನ ಅತಿ ದೊಡ್ಡ ಶ್ರೀಮಂತ ಎನಿಸಿಕೊಂಡಿರುವ ಅಮೇರಿಕಾದ ಬೃಹತ್ ಉದ್ಯಮಿ ಎಲಾನ್ ಮಸ್ಕ್ ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣ ದೈತ್ಯ ಟ್ವಿಟ್ಟರ್ ಅನ್ನು ಖರೀದಿಸಲು ಮುಂದಾಗಿ ಅದರಿಂದ ಹಿಂದೆ ಸರಿದು ಕಾನೂನು ಸಮರ ಎದುರಿಸುತ್ತಿರುವ ಕಠಿಣ ಸಂದರ್ಭದಲ್ಲಿಯೇ ಜಗತ್ತಿನ ಶ್ರೀಮಂತ ಫುಟ್ಬಾಲ್ ಕ್ಲಬ್‌ಗಳಲ್ಲಿ ಒಂದಾದ ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ಖರೀದಿಸುತ್ತಿದ್ದೇನೆ ಎಂದು ಟ್ವೀಟ್ ಮಾಡುವ ಮೂಲಕ ನೆಟ್ಟಿಗರಿಗೆ ಶಾಕ್ ನೀಡಿದ್ದಾರೆ.

"ನಾನು ಮ್ಯಾಂಚೆಸ್ಟರ್ ಯುನೈಟೆಡ್ ಅನ್ನು ಖರೀದಿಸುತ್ತಿದ್ದೇನೆ, ನಿಮಗಿದೋ ಸ್ವಾಗತ" ಎಂದು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಎಲಾನ್ ಮಸ್ಕ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸುದ್ದಿ ಎಬ್ಬಿಸಿದ್ದಾರೆ.

ಕೆಲವೊಮ್ಮೆ ಕೇವಲ ತಮಾಷೆಗಾಗಿ ಟ್ವೀಟ್ ಮಾಡುವ ಎಲಾನ್ ಮಸ್ಕ್ ಈ ಟ್ವೀಟ್ ಅನ್ನು ನಿಜವಾಗಿಯೂ ಮಾಡಿದ್ದಾರಾ ಅಥವಾ ತಮಾಷೆ ಮಾಡುತ್ತಿದ್ದಾರಾ ಎಂಬ ಸ್ಪಷ್ಟನೆ ಸಿಗದ ನೆಟ್ಟಿಗರು ಎಲಾನ್ ಮಸ್ಕ್ ಅವರ ಕಾಲನ್ನು ಎಳೆದಿದ್ದಾರೆ.

ಇನ್ನು 2005ರಲ್ಲಿ 790 ಮಿಲಿಯನ್ ಪೌಂಡ್‌ಗೆ ( 955.51 ಮಿಲಿಯನ್ ಡಾಲರ್ ) ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ ಬಾಲ್ ಕ್ಲಬ್ ಅನ್ನು ಖರೀದಿಸಿದ್ದ ದಿ ಅಮೇರಿಕನ್ ಗ್ಲೇಜರ್ ಫ್ಯಾಮಿಲಿ ಸದ್ಯ ಕ್ಲಬ್‌ನ ಅಭಿಮಾನಿ ಬಳಗದಿಂದ ಸಾಕಷ್ಟು ದೊಡ್ಡ ಮಟ್ಟದ ವಿರೋಧವನ್ನು ಎದುರಿಸುತ್ತಿದೆ. ಓಲ್ಡ್ ಟ್ರಾಫರ್ಡ್ ಮೂಲದ ಈ ಕ್ಲಬ್ ಇತ್ತೀಚೆಗಷ್ಟೇ ಬ್ರೆಂಟ್ ಫೋರ್ಡ್ ವಿರುದ್ಧ 0-4 ಅಂತರದಲ್ಲಿ ಹೀನಾಯವಾಗಿ ಸೋತು ಪ್ರೀಮಿಯರ್ ಲೀಗ್ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದ್ದು, ಈ ಹೀನಾಯ ಸೋಲಿನ ಮುಖಭಂಗದ ನಂತರ ಕ್ಲಬ್ ಅಭಿಮಾನಿಗಳು ದಿ ಅಮೇರಿಕನ್ ಗ್ಲೇಜರ್ ಫ್ಯಾಮಿಲಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾಲುಸಾಲು ಟೀಕೆಗಳನ್ನು ಆರಂಭಿಸಿದ್ದಾರೆ.

ಸದ್ಯ ಎಲಾನ್ ಮಸ್ಕ್ ಈ ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ಖರೀದಿಸಲಿದ್ದೇನೆ ಎಂದು ಮಾಡಿರುವ ಟ್ವೀಟ್ ಕುರಿತಾಗಿ ಪ್ರತಿಕ್ರಿಯಿಸಿರುವ ನೆಟ್ಟಿಗರು 'ಹೇಗಿದ್ದರೂ ಕ್ಲಬ್ ಹೀನಾಯ ಪ್ರದರ್ಶನವನ್ನು ನೀಡುತ್ತಿದ್ದು, ನೀವು ಕ್ಲಬ್ ಅನ್ನು ಖರೀದಿಸಲು ಮುಂದಾದರೆ ರಿಯಾಯಿತಿ ದರದಲ್ಲಿ ವ್ಯವಹಾರ ಮುಗಿಸಬಹುದು' ಎಂದು ಕಾಲನ್ನು ಎಳೆಯುತ್ತಿದ್ದಾರೆ.

ಆಗಸ್ಟ್ 16ರ ಮಂಗಳವಾರದ ಸಮಯಕ್ಕೆ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ 2.08 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದ್ದು, ವಿಶ್ವದ ಶ್ರೀಮಂತ ಫುಟ್ಬಾಲ್ ಕ್ಲಬ್‌ಗಳಲ್ಲಿ ಒಂದಾಗಿದೆ.

ಇನ್ನು ಎಲಾನ್ ಮಸ್ಕ್ ಈ ಹಿಂದೆ ಟ್ವಿಟ್ಟರ್ ಅಪ್ಲಿಕೇಶನ್‌ನ್ನೂ ಸಹ ಖರೀದಿಸಲು ಮುಂದಾಗಿದ್ದರು. ಆದರೆ ಟ್ವಿಟ್ಟರ್ ಹಲವಾರು ಬಾಟ್ ಮತ್ತು ನಕಲಿ ಖಾತೆಗಳಿಂದ ಕೂಡಿದ್ದು ಖರೀದಿಸಲು ಆಗುವುದಿಲ್ಲ ಎಂದು ಎಲಾನ್ ಮಸ್ಕ್ ತಮ್ಮ ನಿರ್ಣಯದಿಂದ ಹಿಂದೆ ಸರಿದಿದ್ದರು. ಈ ಮೂಲಕ ಟ್ವಿಟ್ಟರ್ ಮತ್ತು ಎಲಾನ್ ಮಸ್ಕ್ ನಡುವೆ ಕಾನೂನು ಸಮರ ಏರ್ಪಟ್ಟಿದೆ.

Story first published: Wednesday, August 17, 2022, 11:30 [IST]
Other articles published on Aug 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X