ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

2027ರ ಏಷ್ಯಾ ಕಪ್ ಫುಟ್ಬಾಲ್ ಆತಿಥ್ಯಕ್ಕೆ ನಾಲ್ಕು ದೇಶಗಳೊಂದಿಗೆ ಭಾರತ ಪೈಪೋಟಿ

India among five bidders for 2027 Asian Cup

2027ರ ಏಷ್ಯಾ ಕಪ್ ಫ‌ುಟ್ಬಾಲ್‌ ಪಂದ್ಯಾವಳಿಯ ಆತಿಥ್ಯ ವಹಿಸಲು ಭಾರತ ಸೇರಿದಂತೆ 5 ದೇಶಗಳು ಬಿಡ್‌ ಸಲ್ಲಿಸಿವೆ. ಏಷ್ಯನ್‌ ಫ‌ುಟ್ಬಾಲ್‌ ಫೆಡರೇಶನ್‌ (ಎಎಫ್ಸಿ) ಈ ಬಗ್ಗೆ ಬುಧವಾರ ಈ ಮಾಹಿತಿ ನೀಡಿತು. ಮೂರು ಬಾರಿ ಈ ಟೂರ್ನಿಯಲ್ಲಿ ಚಾಂಪಿಯನ್ ಆಗಿರುವ ಭಾರತ ತಂಡ ಈವರೆಗೂ ಇದರ ಆತಿಥ್ಯವನ್ನು ವಹಿಸಿಕೊಂಡಿಲ್ಲ.

ಇರಾನ್‌, ಕತಾರ್‌, ಸೌದಿ ಅರೇಬಿಯಾ ಮತ್ತು ಉಜ್ಬೆಕಿಸ್ಥಾನ್‌ ದೇಶಗಳು ಕೂಡ ಈ ಪ್ರತಿಷ್ಠಿತ ಕೂಟಕ್ಕೆ ಆತಿಥ್ಯವಹಿಸಲು ಭಾರತದೊಂದಿಗೆ ಪೈಪೋಟಿ ನಡೆಸಲಿದೆ. ಹೀಗಾಗಿ ಈ ಆತಿಥ್ಯ ಯಾರ ಪಾಲಾಗಲಿದೆ ಎಂಬುದು ಮುಂದಿನ ವರ್ಷ ತಿಳಿದು ಬರಲಿದೆ ಎಂದು ಎಎಫ್ಸಿ ಅಧ್ಯಕ್ಷ ಶೇಖ್‌ ಸಲ್ಮಾನ್‌ ಬಿನ್‌ ಇಬ್ರಾಹಿಂ ಅಲ್‌ ಖಲೀಫಾ ಹೇಳಿದ್ದಾರೆ.

3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲು ಕಾರಣ ಚಾಪೆಲ್ ಅಲ್ಲ ಸಚಿನ್: ಇರ್ಫಾನ್3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲು ಕಾರಣ ಚಾಪೆಲ್ ಅಲ್ಲ ಸಚಿನ್: ಇರ್ಫಾನ್

ಬಿಡ್ ಸಲ್ಲಿಸಿದ ಐದು ರಾಷ್ಟ್ರಗಳ ಪೈಕಿ ಎರಡು ರಾಷ್ಟ್ರಗಳು ತಲಾ ಎರಡು ಬಾರಿ ಏಷ್ಯಾ ಕಪ್ ಫುಟ್ಬಾಲ್‌ನ ಆತಿಥ್ಯವನ್ನು ವಹಿಸಿದೆ. ಹಾಲಿ ಚಾಂಪಿಯನ್ ಕತಾರ್ 1988 ಮತ್ತು 2011ರಲ್ಲಿ ಹಾಗೂ ಇರಾನ್‌ 1968 ಮತ್ತು 1976ರಲ್ಲಿ ಈ ಕೂಟವನ್ನು ಯಶಸ್ವಿಯಾಗಿ ಸಂಘಟಿಸಿದ್ದವು.

ಏಷ್ಯಾ ಕಪ್ ಫುಟ್ಬಾಲ್ ಚಾಂಪಿಯನ್‌ಶಿಪ್ 1956ರಿಂದ ಆರಂಭವಾಗಿದೆ. "ಏಷ್ಯನ್‌ ಫ‌ುಟ್ಬಾಲ್‌ ಪರಿವಾರದ ಪರವಾಗಿ ಈ ಕೂಟವನ್ನು ಸಂಘಟಿಸಲು ಮುಂದೆ ಬಂದ ಎಲ್ಲ ದೇಶಗಳಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಎಲ್ಲರಿಗೂ ಬೆಸ್ಟ್‌ ಆಫ್ ಲಕ್‌' ಎಂಬುದಾಗಿ ಎಎಫ್ಸಿ ಅಧ್ಯಕ್ಷ ಅಲ್‌ ಖಲೀಫಾ ಶುಭ ಹಾರೈಸಿದರು.

ವೇಗಿ ಭುವನೇಶ್ವರ್ ಕುಮಾರ್ ಸಿನಿಮಾ ಆದರೆ ರಾಜ್‌ಕುಮಾರ್ ನಟಿಸಬೇಕಂತೆವೇಗಿ ಭುವನೇಶ್ವರ್ ಕುಮಾರ್ ಸಿನಿಮಾ ಆದರೆ ರಾಜ್‌ಕುಮಾರ್ ನಟಿಸಬೇಕಂತೆ

3 ಬಾರಿಯ ಚಾಂಪಿಯನ್‌ಗಳಾದ ಭಾರತ ಮತ್ತು ಸೌದಿ ಅರೇಬಿಯಾ ಈವರೆಗೆ ಏಷ್ಯಾ ಕಪ್‌ ಆತಿಥ್ಯ ವಹಿಸಿಲ್ಲ. ಹಾಗೆಯೇ ಉಜ್ಬೆಕಿಸ್ಥಾನಕ್ಕೂ ಈವರೆಗೆ ಈ ಪಂದ್ಯಾವಳಿಯ ಆತಿಥ್ಯ ಲಭಿಸಿಲ್ಲ. ಆದರೆ ಭಾರತ 2022ರ ಎಎಫ್ಸಿ ವನಿತಾ ಏಶ್ಯ ಕಪ್‌ ಮತ್ತು ಉಜ್ಬೆಕಿಸ್ಥಾನ ಈ ವರ್ಷದ ಎಎಫ್ಸಿ ಅಂಡರ್‌-19 ಪಂದ್ಯಾವಳಿಯನ್ನು ನಡೆಸಿ ಕೊಡಲಿವೆ.

Story first published: Friday, July 3, 2020, 9:50 [IST]
Other articles published on Jul 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X