ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌: ಮನೆಯಂಗಣದಲ್ಲಿ ಜಯದ ಖಾತೆ ತೆರೆದ ಹೈದರಾಬಾದ್

By Isl Media
Indian Super League: Marcelinho bends it for Hyderabad

ಹೈದರಾಬಾದ್, ನವೆಂಬರ್ 2: ಆಡಿದ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿ ಕಂಗೆಟ್ಟಿದ್ದ ಹೈದರಾಬಾದ್ ಎಫ್ ಸಿ ಕೊನೆಗೂ ಮನೆಯಂಗಣದಲ್ಲಿ ಜಯದ ಖಾತೆ ತೆರೆದಿದೆ. ಮಾಜಿ ಚಾಂಪಿಯನ್ ಕೇರಳ ಬ್ಲಾಸ್ಟರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಹೈದರಾಬಾದ್ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿತು.

ಮಾರ್ಕೊ ಸ್ಟ್ಯಾಂಕೊವಿಕ್ ( 54 ನೇ ನಿಮಿಷ) ಹಾಗೂ ಮಾರ್ಸಿಲಿನೊ ಪೆರೇರಾ ( 81 ನೇ ನಿಮಿಷ) ಗೋಲು ಗಳಿಸಿ ತಂಡಕ್ಕೆ ಮನೆಯಂಗಣದಲ್ಲಿ ಅಮೂಲ್ಯ ಜಯ ತಂದುಕೊಟ್ಟರು. ಕೇರಳದ ಪರ ರಾಹುಲ್ ( 34 ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು.

ಭಾರತ vs ಬಾಂಗ್ಲಾದೇಶ: ಮೊದಲನೇ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ XIಭಾರತ vs ಬಾಂಗ್ಲಾದೇಶ: ಮೊದಲನೇ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ XI

ಸಮಬಲ ಸಾಧಿಸಿದ ಸ್ಟ್ಯಾಂಕೋವಿಕ್
54ನೇ ನಿಮಿಷದಲ್ಲಿ ಕೇರಳ ತಂಡದ ಆಟಗಾರ ಮೊಹಮ್ಮದ್ ಗ್ನಿಂಗ್ ಮಾಡಿದ ಪ್ರಮಾದದಿಂದ ಹೈದರಾಬಾದ್ ಗೆ ಪೆನಾಲ್ಟಿ ಅವಕಾಶ ಸಿಕ್ಕಿತು. ಮೊಹಮ್ಮದ್ ಯಾಸಿರ್ ಅವರನ್ನು ಕೆಡಹಿದ ಕಾರಣ ಕೇರಳ ಇದಕ್ಕೆ ತಕ್ಕ ಬೆಲೆ ತೆರಬೇಕಾಯಿತು. ಮಾರ್ಕೊ ಸ್ಟ್ಯಾಂಕೊವಿಕ್ ಯಾವುದೇ ಪ್ರಮಾದ ಮಾಡದೆ ಕೇರಳದ ಗೋಲ್ ಕೀಪರ್ ರೆಹನೇಶ್ ಅವರನ್ನು ವಂಚಿಸುವಲ್ಲಿ ಯಶಸ್ವಿಯಾದರು. ಪಂದ್ಯ 1-1 ರಲ್ಲಿ ಸಮಬಲ.

ರಾಹುಲ್ ತಂದ ಯಶಸ್ಸು
ಪ್ರಥಮಾರ್ಧದ 34ನೇ ನಿಮಿಷದ ವರೆಗೂ ಇತ್ತಂಡಗಳು ಸಮಬಲದ ಹೋರಾಟ ನೀಡಿದ್ದವು. ಆದರೆ 34ನೇ ನಿಮಿಷದಲ್ಲಿ ರಾಹುಲ್ ಕೆಪಿ ಗಳಿಸಿದ ಗೋಲಿನಿಂದ ಕೇರಳ ನಿರೀಕ್ಷೆಯಂತೆ ಮೇಲುಗೈ ಸಾಧಿಸಿತು. ಹೈದರಾಬಾದ್ ತಂಡದ ಡಿಫೆನ್ಸ್ ದುರ್ಬಲಗೊಂಡಿರುವುದೇ ಇದಕ್ಕೆ ಕಾರಣವಾಯಿತು. ಆ ನಂತರ ಹೈದರಾಬಾದ್ ಕೆಲವು ಅವಕಾಶಗಳನ್ನು ನಿರ್ಮಿಸಿತ್ತು, ಆದರೆ ಅದು ಗೋಲಾಗಿಸುವ ಅವಕಾಶ ಆಗಿರಲಿಲ್ಲ. ಬಾರ್ತಲೋಮ್ಯೋ ಓಗ್ಬ್ಯಾಚೆಗೆ ಒಮ್ಮೆ ಮಾತ್ರ ಉತ್ತಮವಲ್ಲದ ಅವಕಾಶ ಲಭಿಸಿತ್ತು. ಹೈದರಾಬಾದ್ ತಂಡ ಪ್ರಥಮಾರ್ಧದಲ್ಲಿ ಹಿನ್ನಡೆ ಕಂಡರೂ ಹಿಂದಿನ ಪಂದ್ಯಗಳಿಗಿಂತ ಉತ್ತಮವಾಗಿಯೇ ಆಡಿತ್ತು.

Indian Super League: Marcelinho bends it for Hyderabad

ಕೇರಳಕ್ಕೆ ಮುನ್ನಡೆ
ಕೇರಳ ಬ್ಲಾಸ್ಟರ್ಸ್ ಗೆ ಗೋಲಿಗಿಂತ ಬೇರೇನೂ ಬೇಕಾಗಿಲ್ಲ. ಟಿಪಿ ರೆಹೆನೇಶ್ ಚೆಂಡನ್ನು ಎದುರಾಳಿ ತಂಡದ ಕಡೆಗೆ ತುಳಿದರು. ಅದು ಯಾರ ತಲೆಗೆ ತಾಗಲಿತೋ ಗೊತ್ತಿಲ್ಲ, ಆದರೆ, ಅದು ಸಹಾಲ್ ಅಬ್ದುಲ್ ಸಮದ್ ಅವರ ನಿಯಂತ್ರಣಕ್ಕೆ ಸಿಕ್ಕಿತು, ಸಮದ್ ಚೆಂಡನ್ನು ಡಿಫೆನ್ಸ್ ವಿಭಾಗಕ್ಕೆ ತಳ್ಳಿದರು. ಕಮಲ್ಜಿತ್ ಸಿಂಗ್ ಚೆಂಡನ್ನು ನಿಯಂತ್ರಿಸಲು ಯತ್ನಿಸಿದರೂ ಚೆಂಡು ರಾಹುಲ್ ಕೆಪಿ ಅವರ ವಶವಾಯಿತು. ಚೆಂಡನ್ನು ನೇರವಾಗಿ ಗೋಲ್ ಬಾಕ್ಸ್ ಕಡೆಗೆ ಕಿಕ್ ಮಾಡಿದಾಗ ಕೇರಳಕ್ಕೆ ಮೊದಲ ಗೋಲಿನ ಸಂಭ್ರಮ.

ವಿರಾಟ್ ಕೊಹ್ಲಿ ಬರೆದ ಟಿ20 ವಿಶ್ವದಾಖಲೆ ಮುರಿಯಲಿದ್ದಾರೆ ರೋಹಿತ್ ಶರ್ಮಾ!ವಿರಾಟ್ ಕೊಹ್ಲಿ ಬರೆದ ಟಿ20 ವಿಶ್ವದಾಖಲೆ ಮುರಿಯಲಿದ್ದಾರೆ ರೋಹಿತ್ ಶರ್ಮಾ!

ಹೈದರಾಬಾದ್ ಗೆ ಭವ್ಯ ಸ್ವಾಗತ
ಹೈದರಾಬಾದ್ ಎಫ್ ಸಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ಹೊಸ ತಂಡ. ಈಗಾಗಲೇ ಆಡಿರುವ ಎರಡು ಪಂದ್ಯಗಳಲ್ಲಿ ಸೋತಿದೆ. ಮೂರನೇ ಪಂದ್ಯದಲ್ಲಿ ಜಯ ಗಳಿಸಲು ಕೇರಳ ಬ್ಲಾಸ್ಟರ್ಸ್ ವಿರುದ್ಧ ಸೆಣೆಸಲಿಡ. ಹೈದರಾಬಾದ್ ಗೆ ಮನೆಯಂಗಣದಲ್ಲಿ ಇದು ಮೊದಲ ಪಂದ್ಯ. ಎರಡು ಪಂದ್ಯಗಳಲ್ಲಿ ಸೋತರೂ ಹೊಸ ತಂಡಕ್ಕೆ ಮನೆಯಂಗಣದ ಪ್ರೇಕ್ಷಕರು ಕ್ರೀಡಾ ಸ್ಫೂರ್ತಿಯಿಂದ ಸ್ವಾಗತ ನೀಡಿದ್ದಾರೆ . ಅದು ಫುಟ್ಬಾಲ್ ಕ್ರೀಡೆಗೆ ಇರುವ ಶಕ್ತಿ. ಎರಡು ಪಂದ್ಯಗಳನ್ನಾಡಿ ಎದುರಾಳಿ ತಂಡಕ್ಕೆ ಎಂಟು ಗೋಲು ಗಳಿಸಲು ಅವಕಾಶ ನೀಡಿರುವ ತಂಡ ಪರವಾಗಿ ಗಳಿಸಿದ್ದು ಕೇವಲ ಒಂದು ಗೋಲು . ತಂಡದ ಪ್ರಮುಖ ವಿದೇಶ ಆಟಗಾರರು ಗಾಯದ ಸಮಸ್ಯೆ ಎದುರಿಸುತ್ತಿರುವುದು ಸೋಲಿಗೆ ಪ್ರಮುಖ ಕಾರಣವಾಗಿದೆ. ಮಿಡ್ ಫೀಲ್ಡರ್ ಅಭಾಷ್ ತಾಪ ತಂಡವನ್ನು ಸೇರಿಕೊಂಡಿದ್ದಾರೆ. ಇಲ್ಲಿ ಗೋಲು ಗಾಳಿಸುವುದಕ್ಕಿಂತ ಡಿಫೆಂಡರ್ಸ್ ಉತ್ತಮ ರೀತಿಯಲ್ಲಿ ಎದುರಾಳಿ ತಂಡಕ್ಕೆ ತಡೆಯನ್ನೊಡ್ಡುವುದು ಪ್ರಮುಖವಾಗಿದೆ.

ಮೊದಲ ಪಂದ್ಯದಲ್ಲಿ ಜಯ ಗಳಿಸಿರುವ ಕೇರಳ ಬ್ಲಾಸ್ಟರ್ಸ್ ತನ್ನ ಎರಡನೇ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋಲನುಭವಿಸಿತು. ಬಾರ್ತಲೋಮ್ಯೋ ಓಗ್ಬ್ಯಾಚೆ ಮೇಲೆ ತಂಡ ಹೆಚ್ಚು ಆಧರಿಸಿದೆ.

Story first published: Saturday, November 2, 2019, 23:51 [IST]
Other articles published on Nov 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X