ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌: ರೋಚಕ ಪಂದ್ಯದಲ್ಲಿ ಕೇರಳ ಮಣಿಸಿದ ಬೆಂಗಳೂರು ಎಫ್‌ಸಿ

By Isl Media
ISL 2018: Bengaluru maintain perfect away record

ಕೊಚ್ಚಿ, ನವೆಂಬರ್ 6: ಸುನಿಲ್ ಛೆಟ್ರಿ (17ನೇ ನಿಮಿಷ) ಹಾಗೂ ನಿಕೋಲಾ ಕ್ರೆಮರೆವಿಕ್ 81ನೇ ನಿಮಿಷದಲ್ಲಿ ನೀಡಿದ ಉಡುಗೊರೆ ಗೋಲಿನಿಂದ ಬೆಂಗಳೂರು ಎಫ್ ಸಿ ತಂಡ ಕೇರಳ ಬ್ಲಾಸ್ಟರ್ಸ್ ವಿರುದ್ಧದ ಇಂಡಿಯನ್ ಸೂಪರ್ ಲೀಗ್ ಪಂದ್ಯವನ್ನು 2-1 ಗೋಲಿನಿಂದ ಗೆದ್ದುಕೊಂಡಿತು.

ಟಿ10 ಕ್ರಿಕೆಟ್ ಲೀಗ್ ಗೆ ಜಹೀರ್, ಪ್ರವೀಣ್, ಮುನಾಫ್ಟಿ10 ಕ್ರಿಕೆಟ್ ಲೀಗ್ ಗೆ ಜಹೀರ್, ಪ್ರವೀಣ್, ಮುನಾಫ್

ಕೇರಳಕ್ಕೆ ಈ ಹಿಂದಿನ ಪಂದ್ಯದಲ್ಲಿ ಗೋಲು ಗಳಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದ್ದ ನಿಕೋಲಾ ಕ್ರೆಮರೆವಿಕ್ ನೀಡಿದ ಉಡುಗೊರೆ ಗೋಲು ಬೆಂಗಳೂರು ಹಾಗೂ ಕೇರಳ ನಡುವಿನ ಪಂದ್ಯದಲ್ಲಿ ಬೆಂಗಳೂರು ಎಫ್ಸಿ 2-1 ಗೋಲಿನಿಂದ ಜಯ ಗಳಿಸಿ ದಕ್ಷಿಣದ ಡರ್ಬಿ ಗೆದ್ದುಕೊಂಡಿತು.

ವಿರಾಟ್ ಕೊಹ್ಲಿ ಟಾಪ್ 5 ಏಕದಿನ ಕ್ರಿಕೆಟ್ ಇನ್ನಿಂಗ್ಸ್ವಿರಾಟ್ ಕೊಹ್ಲಿ ಟಾಪ್ 5 ಏಕದಿನ ಕ್ರಿಕೆಟ್ ಇನ್ನಿಂಗ್ಸ್

ಕೇರಳ ಹಾಗೂ ಬೆಂಗಳೂರು ಎಫ್ ಸಿ ತಂಡಗಳ ನಡುವಿನ ಪಂದ್ಯದ ಪ್ರಥಮಾರ್ಧ 1-1ರಲ್ಲಿ ಸಮಬಲಗೊಂಡಿತು. ಮಿಕು ಹಾಗೂ ಛೆಟ್ರಿ ಅವರ ಶ್ರಮದಲ್ಲಿ ಒಂದು ಗೋಲು ದಾಖಲಾಗುತ್ತದೆ ಎಂಬುದಕ್ಕೆ ಇದು ಉತ್ತಮ ನಿದರ್ಶನ. ಇದೇ ಮೊದಲ ಬಾರಿಗೆ ಮಿಕು ನೀಡಿದ ಪಾಸ್‌ನಲ್ಲಿ ಛೆಟ್ರಿ ಗೋಲು ಗಳಿಸಿದರು. ಚೆಂಡಿನ ಮೇಲೆ ನಿಯಂತ್ರಿಸಿದ ಛೆಟ್ರಿ ನೇರವಾಗಿ ಗೋಲ್ ಬಾಕ್ಸ್ ಕಡೆಗೆ ಮುನ್ನುಗ್ಗಿದರು. ಜಿಂಗಾನ್ ಜೊತೆಯಲ್ಲಿ ಅಡ್ಡಿ ಮಾಡಲು ಯತ್ನಿಸಿದರೂ ಛೆಟ್ರಿಯ ವೇಗವನ್ನು ನಿಯಂತ್ರಿಸಲಾಗಲಿಲ್ಲ.

17ನೇ ನಿಮಿಷದಲ್ಲಿ ಮುನ್ನಡೆ

17ನೇ ನಿಮಿಷದಲ್ಲಿ ಮುನ್ನಡೆ

ಬೆಂಗಳೂರು ಮುನ್ನಡೆ ಸಾಧಿಸಿದ ನಂತರ 30ನೇ ನಿಮಿಷದಲ್ಲಿ ಕೇರಳ ಬ್ಲಾಸ್ಟರ್ಸ್ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಸ್ಲಾವಿಸ್ಲಾ ಸ್ಟೊಜಾನೊವಿಕ್ ಪೆನಾಲ್ಟಿ ಕಿಕ್ ಮೂಲದ ಗಳಿಸಿದ ಗೋಲಿನಿಂದ ಪಂದ್ಯ 1-1ರಲ್ಲಿ ಸಮಬಲಗೊಂಡಿತು. ಕಳೆದ ಬಾರಿ ಇದೇ ರೀತಿಯ ಅವಕಾಶವನ್ನು ಸದುಪಯೋಗಪಡಿಸುವಲ್ಲಿ ಸ್ಟೊಜಾನೊವಿಕ್ ಯಶಸ್ವಿಯಾದರು. 30ನೇ ನಿಮಿಷದಲ್ಲಿ ಪೆನಾಲ್ಟಿ ವಲಯದಲ್ಲಿ ಬೆಂಗಳೂರಿನ ನಿಶು ಕುಮಾರ್ ಕೇರಳದ ಸಮದ್ ಅವರನ್ನು ಹಿಂದಿನಿಂದ ಅಡ್ಡಿ ಮಾಡಿಕೆಡವಿದರು. ಈ ಪ್ರಮಾದವನ್ನು ಗಮನಿಸಿದ ರೆರಿ ಕೇರಳಕ್ಕೆ ಪೆನಾಲ್ಟಿ ಶೂಟ್ ಅವಕಾಶ ಕಲ್ಪಿಸಿದರು. ಮನೆಯಂಗಣದಲ್ಲಿ ಕೇರಳ ಸಮಬಲ ಸಾಧಿಸಿತು.

ಜಿದ್ದಾಜಿದ್ದಿಯ ಪಂದ್ಯ

ಜಿದ್ದಾಜಿದ್ದಿಯ ಪಂದ್ಯ

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸಾಕಷ್ಟು ವೈರತ್ವ ಹಾಗೂ ಜಿದ್ದಿನಿಂದ ಕೂಡಿರುವ ಪಂದ್ಯವೆಂದರೆ ಅದು ಕೇರಳ ಬ್ಲಾಸ್ಟರ್ಸ್ ಹಾಗೂ ಬೆಂಗಳೂರು ಎ್‌ಸಿ ನಡುವಿನ ಪಂದ್ಯ. ದಕ್ಷಿಣ ಭಾರತದ ಎರಡು ಉತ್ತಮ ತಂಡಗಳು ಕೇರಳದಲ್ಲಿ ಮುಖಾಮುಖಿಯಾದವು. ಇತ್ತಂಡಗಳ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ತಮ್ಮ ತಂಡಗಳನ್ನು ಹೊಗಳುತ್ತಿರುವುದು ಇದುವರೆಗೂ ಸಾಮಾನ್ಯವಾಗಿತ್ತು. ಕೆಲವೊಮ್ಮೆ ಅದು ಅತಿರೇಕಕ್ಕೂ ಇಳಿಯುತ್ತಿತ್ತು. ಆದರೆ ಋತುವಿನ ಮೊದಲ ಪಂದ್ಯದಲ್ಲಿ ಬೆಂಗಳೂರು ಹಾಗೂ ಕೇರಳ ತಂಡಗಳು ಮುಖಾಮುಖಿಯಾಗುತ್ತಿರುವುದು ಇತ್ತಂಡಗಳ ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿದೆ.

ಕೇರಳ ಸೋಲಿಸುವುದು ಸುಲಭವಿರಲಿಲ್ಲ

ಕೇರಳ ಸೋಲಿಸುವುದು ಸುಲಭವಿರಲಿಲ್ಲ

ಮನೆಯಂಗಣದಲ್ಲಿ ಕೇರಳವನ್ನು ಮಣಿಸುವುದು ಅಷ್ಟು ಸುಲಭವಲ್ಲ. ಅದೇ ರೀತಿ ಮನೆಯಂಗಣದ ಹೊರಗಡೆ ಬೆಂಗಳೂರು ತಂಡ ಇದುವರೆಗೂ ಉತ್ತಮ ಪ್ರದರ್ಶನ ತೋರುತ್ತಿದೆ, ಕೇರಳ ತಂಡ ಇದುವರೆಗೂ ಅಜೇಯದ ಹೆಜ್ಜೆ ಹಾಕುತ್ತ ಬಂದಿರಬಹುದು, ಆದರೆ ತಂಡ ಗೆದ್ದಿರುವುದು ಒಂದೇ ಪಂದ್ಯ. ಬೆಂಗಳೂರು ತಂಡ ಕೂಡ ಅಜೇಯವಾಗಿದೆ. ಮನೆಯಂಗಣದಲ್ಲಿ ಕೇರಳದ ದಾಖಲೆ ಉತ್ತಮವಾಗಿಲ್ಲ.

ಇಬ್ಬರು ಬಲಾಡ್ಯರು

ಇಬ್ಬರು ಬಲಾಡ್ಯರು

ಮಿಕು ಹಾಗೂ ಸುನಿಲ್ ಛೆಟ್ರಿಯನ್ನು ನಿಯಂತ್ರಿಸದ ಹೊರತು ಕೇರಳ ಎಷ್ಟೇ ಬಲಿಷ್ಠವಾಗಿದ್ದರೂ ಫಲಿತಾಂಶ ಸೋಲಿನಲ್ಲಿ ಕೊನೆಗೊಳ್ಳುವುದು ಸ್ಪಷ್ಟ. ಕೇರಳ ಬ್ಲಾಸ್ಟರ್ಸ್ ವಿರುದ್ಧ ಆಡಿರುವ ಎರಡೂ ಪಂದ್ಯಗಳಲ್ಲಿ ಬೆಂಗಳೂರು ಜಯ ಗಳಿಸಿ ಮೇಲುಗೈ ಸಾಧಿಸಿದೆ.

Story first published: Tuesday, November 6, 2018, 0:14 [IST]
Other articles published on Nov 6, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X