ಐಎಸ್‌ಎಲ್ 2019: ಮುಂಬೈಗೆ ಮನೆಯಂಗಣದಲ್ಲೇ ಶಾಕ್ ನೀಡಿದ ಒಡಿಶಾ

By Isl Media

ಮುಂಬೈ, ನವೆಂಬರ್ 1: ಕ್ಸಿಸ್ಕೊ ಹೆರ್ನಾಂಡೀಸ್ (6ನೇ ನಿಮಿಷ), ಆರಿಡನೆ ಸ್ಯಾಂಟೇನಾ ( 21ಮತ್ತು 73 ನೇ ನಿಮಿಷ) ಮತ್ತು ಜೆರ್ರಿ ಮ್ಹಮಿಂಗ್ತ್ಹ್ಯಾಂಗ್ (41ನೇ ನಿಮಿಷ) ಅವರು ಗಳಿಸಿದ ಅದ್ಭುತ ಗೋಲುಗಳ ನೆರವಿನಿಂದ ಒಡಿಶಾ ಎಫ್ ಸಿ ತಂಡ ಬಲಿಷ್ಠ ಮುಂಬೈ ಸಿಟಿ ಎಫ್ ಸಿ ವಿರುದ್ಧ 4-2 ಗೋಲುಗಳ ಅಂತರದಲ್ಲಿ ಜಯ ಗಳಿಸಿತಲ್ಲದೆ, ಲೀಗ್ ನಲ್ಲಿ ತನ್ನ ಮೊದಲ ಪೂರ್ಣ ಅಂಕ ಪಡೆಯಿತು. ಕೊನೆಯ ಕ್ಷಣದಲ್ಲಿ ಹೋರಾಟ ನೀಡಿದ ಮುಂಬೈ ಪರ ಮೊಹಮ್ಮದ್ ಲಾರ್ಬಿ ಪೆನಾಲ್ಟಿ ಮೂಲಕ ( 51 ನೇ ನಿಮಿಷ) ಹಾಗೂ ಬಿಪಿನ್ ಸಿಂಗ್ ( 90 ನೇ ನಿಮಿಷ) ದಲ್ಲಿ ಗೋಳು ಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಭಾರತ vs ಬಾಂಗ್ಲಾ: ಪಂದ್ಯಗಳ ದಿನಾಂಕ, ಸಮಯ, ಸಂಪೂರ್ಣ ಮಾಹಿತಿ

ಒಡಿಶಾಕ್ಕೆ ಬೃಹತ್ ಮುನ್ನಡೆ

ಪ್ರಥಮಾರ್ಧದಲ್ಲೇ 3-0 ಗೋಲುಗಳ ಅಂತರದಲ್ಲಿ ಮುನ್ನಡೆಯುವ ಮೂಲಕ ಒಡಿಶಾ ತಂಡ ಮುಂಬೈ ಸಿಟಿ ವಿರುದ್ಧದ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಮೊದಲ ಜಯಕ್ಕೆ ಅಗತ್ಯ ಇರುವ ವೇದಿಕೆ ಹಾಕಿಕೊಂಡಿತು, ಕ್ಸಿಸ್ಕೊ ಹೆರ್ನಾಂಡೀಸ್ (6ನೇ ನಿಮಿಷ), ಆರಿಡನೆ ಸ್ಯಾಂಟೇನಾ ( 21 ನೇ ನಿಮಿಷ) ಮತ್ತು ಜೆರ್ರಿ ಮ್ಹಮಿಂಗ್ತ್ಹ್ಯಾಂಗ್ (41ನೇ ನಿಮಿಷ) ಅವರು ಗಳಿಸಿದ ಗೋಲಿನಿಂದ ಒಡಿಶಾ ತಾನು ಹೊಸ ತಂಡವಾಗಿದ್ದರೂ ಆಟಗಾರರು ಅನುಭವಿಗಳು ಎಂಬುದನ್ನು ಸಾಬೀತುಪಡಿಸಿತು.

'ಭಾರತದ ಆಯ್ಕೆ ಸಮಿತಿಯವರು ವಿಶ್ವಕಪ್‌ ವೇಳೆ ಅನುಷ್ಕಾಗೆ ಟೀ ತರುತ್ತಿದ್ದರು'

ಮುಂಬೈ ತಂಡ ಅತಿಯಾದ ಆತ್ಮವಿಶ್ವಾಸಕ್ಕೆ ತಕ್ಕ ಬೆಲೆ ತೆರಬೇಕಾಯಿತು. ಪಂದ್ಯ ಆರಂಭಗೊಂಡ 6ನೇ ನಿಮಿಷದಲ್ಲಿ ಒಡಿಶಾ ಮುನ್ನಡೆ ಸಾಧಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಏಕೆಂದರೆ ಎದುರಾಳಿ ಮುಂಬೈ ಅನುಭವಿ ತಂಡ. ಆದರೆ ಅಂಗಣಕ್ಕಿಳಿದಾಗ ಯಾರು ಚೆನ್ನಾಗಿ ಆಡುತ್ತಾರೋ, ಸಿಕ್ಕ ಅವಕಾಶಗಳನ್ನು ಯಾರು ಉತ್ತಮವಾಗಿ ಉಪಯೋಗಿಸಿಕೊಳ್ಳುತ್ತಾರೋ ಅವರೇ ಹೀರೋ ಎನಿಸುತ್ತಾರೆ.

ಸಾಂತಾನ ನೀಡಿದ ಪಾಸ್ ಮೂಲಕ ಕ್ಸಿಸ್ಕೊ ಗೋಲು ಗಳಿಸಿದಾಗ ಮುಂಬೈ ಪ್ರೇಕ್ಷಕರು ಮೌನಕ್ಕೆ ಜಾರಿದರು. ಮತ್ತೆ 21ನೇ ನಿಮಿಷದಲ್ಲಿ ಆರಿಡನೆ ಸಂತಾನಾ ಎರಡನೇ ಗೋಲು ಗಳಿಸಿ ತಂಡಕ್ಕೆ 2-0 ಮುನ್ನಡೆ ಕಲ್ಪಿಸಿದರು. ಈ ಗೋಲಿಗೆ ಜೆರ್ರಿ ನೆರವಾದರು.

ಡಿಫೆನ್ಸ್ ವಿಭಾಗದಲ್ಲಿ ಕಂಗೆಟ್ಟ ಮುಂಬೈ ಸಿಟಿ ತಂಡಕ್ಕೆ 41ನೇ ನಿಮಿಷದಲ್ಲಿ ಮತ್ತೊಂದು ಆಘಾತ. ಒಡಿಶಾಕ್ಕೆ ಸಂಭ್ರಮ; ಈ ಬಾರಿ ಎರಡನೇ ಗೋಲಿಗೆ ನೆರವಾಗಿದ್ದ ಜೆರ್ರಿ ಮ್ಹಮಿಂಗ್ತ್ಹ್ಯಾಂಗ್ ತಂಡದ ಪರ ಮೂರನೇ ಗೋಳು ಗಳಿಸಿದ್ದು ಮುಂಬೈನ ಸೋಲಿಗೆ ದಿಟ್ಟ ವೇದಿಕೆಯಾಯಿತು.

ಶ್ರೀಲಂಕಾ ಸೋಲಿಸಿ ಮಹಿಳೆಯರ 'ಎಮರ್ಜಿಂಗ್ ಏಷ್ಯಾ ಕಪ್‌' ಗೆದ್ದ ಭಾರತ

ಮುಂಬೈಗೆ ಗೆಲ್ಲುವ ನಿರೀಕ್ಷೆ

ಸಾಮಾನ್ಯವಾಗಿ ಪ್ರತಿಯೊಂದು ತಂಡವೂ ಮನೆಯಂಗಣದಲ್ಲಿ ಮಿಂಚುವ ಗುರಿ ಇಟ್ಟುಕೊಂಡಿರುತ್ತದೆ. ಮನೆಯಂಗಣದ ಪ್ರೇಕ್ಷಕರ ಬೆಂಬಲ ಇದಕ್ಕೆ ಮುಖ್ಯ ಕಾರಣ. ಮುಂಬೈ ತಂಡ ಇದುವರೆಗೂ ಎದುರಾಳಿ ತಂಡಕ್ಕೆ ಗೋಲು ಗಳಿಸುವ ಅವಕಾಶ ನೀಡಲಿಲ್ಲ. ಮನೆಯಂಗಣದಲ್ಲೂ ಅದೇ ರೀತಿಯ ಪ್ರದರ್ಶನ ನೀಡಲು ಮುಂದಾಯಿತು. ಮೊದಲ ಪಂದ್ಯದಲ್ಲಿ ಏಕೈಕ ಗೋಲಿನಿಂದ ಜಯ ಗಳಿಸಿತ್ತು. ನಂತರ ಚೆನ್ನೈಯಿನ್ ಎಫ್ ಸಿ ವಿರುದ್ಧ ಡ್ರಾ ಸಾಧಿಸಿತ್ತು. ಮುಂಬೈಗೆ ಈ ಋತುವಿನಲ್ಲಿ ಮನೆಯಂಗಣದಲ್ಲಿ ಮೊದಲ ಪಂದ್ಯ. ಇಲ್ಲಿ ಗೆದ್ದರೆ ಅಕ್ಟೋಬರ್ ತಿಂಗಳಲ್ಲಿ ಐಎಸ್ ಎಲ್ ನಲ್ಲಿ ಅಗ್ರ ಸ್ಥಾನ ತಲುಪಲಿದೆ.

ಎರಡು ಪಂದ್ಯಗಳಲ್ಲಿ ಕ್ಲೀನ್ ಶೀಟ್ ಸಾಧನೆ ಮಾಡಿರುವ ಅಮರಿಂದರ್ ಸಿಂಗ್ ಪಡೆ ಪಂದ್ಯ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಏಕೆಂದರೆ ಒಡಿಶಾ ಹೊಸ ತಂಡ ಒಡಿಶಾ ತಂಡ ಮನೆಯಂಗಣದ ಹೊರಗಡೆ ಸತತ ಮೂರನೇ ಪಂದ್ಯವನ್ನಾಡಲಿದೆ. ಕಳೆದ ಎರಡೂ ಪಂದ್ಯಗಳಲ್ಲಿ ಕೊನೆಯ ಹಂತದಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಿತ್ತು. ಮುಂಬೈಯಲ್ಲಿ ಗೆಲ್ಲಲೇ ಬೇಕು ಎಂಬ ಆತ್ಮವಿಶ್ವಾಸದೊಂದಿಗೆ ಅಂಗಣಕ್ಕಿಳಿಯಿತು. ಹೊಸ ತಂಡ ಎಂದು ಮುಂಬೈ ತಂಡ ಒಡಿಶಾ ವನ್ನು ಹಗುರವಾಗಿ ಕಂಡರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ.

For Quick Alerts
ALLOW NOTIFICATIONS
For Daily Alerts
Story first published: Friday, November 1, 2019, 10:25 [IST]
Other articles published on Nov 1, 2019
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X