ಐಎಸ್‌ಎಲ್: ಚೆನ್ನೈಯಿನ್ ಎಫ್‌ಸಿ vs ಒಡಿಶಾ ಎಫ್‌ಸಿ Live ಸ್ಕೋರ್

ಚೆನ್ನೈಯಿನ್‌ ಎಫ್‌ಸಿ ಮತ್ತು ಒಡಿಶಾ ಎಫ್‌ಸಿ ತಂಡಗಳು ಕೆಲವೇ ದಿನಗಳ ಅಂತರದಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಿದೆ. ಕಳೆದ ಬಾರಿ ಮುಖಾಮುಖಿಯಾಗಿದ್ದಾಗ ಗೋಲ್‌ ರಹಿತ ಸಮಬಲ ಸಾಧಿಸಿದ್ದವು. ಇದೀಗ ಪ್ರಸಕ್ತ ಸಾಲಿನ ಇಂಡಿಯನ್ ಸೂಪರ್‌ ಲೀಗ್‌ ಟೂರ್ನಿಯ ಎರಡನೇ ಘಟ್ಟದಲ್ಲಿ ಇತ್ತಂಡಗಳು ಮತ್ತೆ ಕದನಕ್ಕಿಳಿದಿದೆ.

ಜಿಎಮ್‌ಸಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಚೆನ್ನೈಯಿನ್‌ ಎಫ್‌ಸಿ ಸಂಘಟಿತ ಹೋರಾಟ ಪ್ರದರ್ಶಿಸುವ ಮೂಲಕ ಒಡಿಶಾ ಎಫ್‌ಸಿ ತಂಡವನ್ನು ಮಣಿಸಿ ಸಂಪೂರ್ಣ 3 ಅಂಕಗಳನ್ನು ಬಾಚಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಅಂಕಪಟ್ಟಿಯಲ್ಲಿ ಒಡಿಶಾ ತಂಡ ಕೊನೆಯ ಸ್ಥಾನದಲ್ಲಿದ್ದರೆ, ಚೆನ್ನೈಯಿನ್‌ ತಂಡ 11ನೇ ಸ್ಥಾನದಲ್ಲಿದೆ. ಕೆಲ ದಿನಗಳ ಹಿಂದಷ್ಟೇ ಈ ತಂಡಗಳು ಮುಖಾಮುಖಿಯಾಗಿವೆ. ಹೀಗಾಗಿ ಈ ಬಾರಿ ಡ್ರಾ ಅಲ್ಲ ಗೆಲುವಿಗಾಗಿ ಇತ್ತಂಡಗಳು ಕಣ್ಣಿಟ್ಟಿವೆ. ಯಾವುದೇ ತಂಡ ಗೆದ್ದರೂ ಅಂಕಪಟ್ಟಿಯಲ್ಲಿ ಕೊಂಚ ಪ್ರಗತಿ ಕಾಣಲಿವೆ.

ನಾರ್ತ್‌ಈಸ್ಟ್‌ ವಿರುದ್ಧ 'ಡ್ರಾ'ಗೆ ತೃಪ್ತಿಪಟ್ಟ ಬೆಂಗಳೂರು ಎಫ್‌ಸಿ

Live ಸ್ಕೋರ್ ಪಟ್ಟಿ ಹೀಗಿದೆ:

1
2183381

ಚೆನ್ನೈಯಿನ್ ಎಫ್‌ಸಿ - ಆಡುವ ಬಳಗ

ವಿಶಾಲ್ ಕೈತ್ (ಗೋಲ್‌ಕೀಪರ್), ರೇಗನ್ ಸಿಂಗ್, ಎನೆಸ್ ಸಿಪೋವಿಕ್, ಲಲಿಯನ್ಜುವಾಲಾ ಚಾಂಗ್ಟೆ, ಎಲಿ ಸಬಿಯಾ (ನಾಯಕ), ಅನಿರುದ್ಧ್ ಥಾಪಾ, ಜೆರ್ರಿ ಲಾಲ್ರಿನ್ಜುಲಾ, ಫತ್ಖುಲೋ ಫತ್ಖುಲ್ಲೋವ್, ಮೆಮೋ ಮೌರಾ, ರಹೀಮ್ ಅಲಿ, ಎಸ್ಮೇಲ್ ಗೊನ್ಕಾಲ್ವ್ಸ್

ಒಡಿಶಾ ಎಫ್‌ಸಿ - ಆಡುವ ಬಳಗ

ಅರ್ಷ್‌ದೀಪ್ ಸಿಂಗ್ (ಗೋಲ್‌ಕೀಪರ್), ಹೆಂಡ್ರಿ ಆಂಟೊನೆ, ಕೋಲ್ ಅಲೆಕ್ಸಾಂಡರ್, ಮಾರ್ಸೆಲೊ ಪಿರೇರಾ, ಗೌರವ್ ಬೋರಾ, ಶುಭಮ್ ಸಾರಂಗಿ, ವಿನಿತ್ ರೈ, ಜೆರ್ರಿ ಮಾವಿಹ್ಮಿಂಗ್ಥಂಗಾ, ಮ್ಯಾನುಯೆಲ್ ಒನ್ವು, ಕಮಲ್‌ಪ್ರೀತ್ ಸಿಂಗ್, ಸ್ಟೀವನ್ ಟೇಲರ್ (ನಾಯಕ).

For Quick Alerts
ALLOW NOTIFICATIONS
For Daily Alerts
Story first published: Wednesday, January 13, 2021, 19:35 [IST]
Other articles published on Jan 13, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X