ಐಎಸ್‌ಎಲ್: ಮುಂಬೈ ಗೋಲಿನ ಮಳೆಯಲ್ಲಿ ಮುಳುಗಿದ ಒಡಿಶಾ

By Isl Media

ಗೋವಾ, ಫೆಬ್ರವರಿ 24: ಬಾರ್ಥಲೋಮ್ಯೊ ಒಗ್ಬಚೆ (14 ಮತ್ತು 43ನೇ ನಿಮಿಷ), ಬಿಪಿನ್ ಸಿಂಗ್ (38, 47 ಮತ್ತು 86ನೇ ನಿಮಿಷ) ಮತ್ತು ಸಿ ಗೊಡಾರ್ಡ್ (44ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಒಡಿಶಾ ಎಫ್ ಸಿ ವಿರುದ್ಧ 6-1 ಗೋಲುಗಳ ಭರ್ಜರಿ ಜಯ ಗಳಿಸಿದ ಮುಂಬೈ ಸಿಟಿ ಎಫ್ ಸಿ ಲೀಗ್ ಚಾಂಪಿಯನ್ಷಿಪ್ ಗೆಲ್ಲಲು ತಾನೂ ಸ್ಪರ್ಧೆಯಲ್ಲಿ ಇರುವುದಾಗಿ ಎಟಿಕೆ ಮೋಹನ್ ಬಾಗನ್ ಗೆ ಸಂದೇಶ ರವಾನಿಸಿದೆ. ಬಿಪಿನ್ ಸಿಂಗ್ ಈ ಋತುವಿನಲ್ಲಿ ಹ್ಯಾಟ್ರಿಕ ಗೋಲುಗಳ ಸಾಧನೆ ಮಾಡಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು.

ಮುಂಬೈ ಗೋಲಿನ ಮಳೆ: ಮುಂಬೈ ಸಿಟಿ ಎಫ್ ಸಿ 4-1 ಅಂತರದಲ್ಲಿ ಮೇಲುಗೈ ಸಾಧಿಸಿದೆ. ಇದು ಪಂದ್ಯ ಮುಗಿದ ನಂತರದ ಫಲಿತಾಂಶವಲ್ಲ. 45 ನಿಮಿಷಗಳ ಆಟದ ಫಲಿತಾಂಶ. ಬಾರ್ಥಲೋಮ್ಯೋ ಒಗ್ಬಚೆ (14 ಮತ್ತು 43ನೇ ನಿಮಿಷ), ಬಿಪಿನ್ ಸಿಂಗ್ ತೌಂಜಾಮ್ (38ನೇ ನಿಮಿಷ) ಮತ್ತು ಸಿ ಗೊಡಾರ್ಡ್ (44ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಮುಂಬಯ ಸಿಟಿ ಎಫ್ ಸಿ ಪ್ರಥಮಾರ್ಧದಲ್ಲಿ 4-1 ಗೋಲುಗಳ ಅಂತರದಲ್ಲಿ ಮೇಲುಗೈ ಸಾಧಿಸಿ ಜಯಕ್ಕೆ ಅಗತ್ಯ ಇರುವ ವೇದಿಕೆ ನಿರ್ಮಿಸಿಕೊಂಡಿತು.

ಮೊಟೆರಾ ಸ್ಟೇಡಿಯಂ ಇನ್ಮುಂದೆ 'ನರೇಂದ್ರ ಮೋದಿ ಸ್ಟೇಡಿಯಂ'

ಸಮಬಲಗೊಳಿಸಿದ ಒಗ್ಬಚೆ

ಸಮಬಲಗೊಳಿಸಿದ ಒಗ್ಬಚೆ

ಒಡಿಶಾದ ಮುನ್ನಡೆಯ ಸಂಭ್ರಮ ಕೇವಲ 5 ನಿಮಿಷಕ್ಕೆ ಸೀಮಿತವಾಯಿತು. 14ನೇ ನಿಮಿಷದಲ್ಲಿ ಬಾರ್ಥಲೋಮ್ಯೋ ಒಗ್ಬಚೆ ಹೆಡರ್ ಮೂಲಕ ಗಳಿಸಿದ ಗೋಲು ಪಂದ್ಯವನ್ನು ಸಮಬಲಗೊಳಿಸಿತು. ಓಗ್ಬಚೆ ಮುಂಬೈ ಸಿಟಿ ಎಫ್ ಸಿ ತಂಡ ಸೇರಿದ ನಂತರ ಉತ್ತಮ ಅವಕಾಶವನ್ನು ಗಳಿಸಿರಲಿಲ್ಲ. ಬದಲಿ ಆಟಗಾರನಾಗಿಯೇ ಅಂಗಣಕ್ಕಿಳಿಯುತ್ತಿದ್ದರು. ಈ ಬಾರಿ ಆರಂಭದಲ್ಲೇ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಗೋಲು ಗಳಿಸಿದರು.

ಮೌರಿಸಿಯೋ ಗೋಲು

ಮೌರಿಸಿಯೋ ಗೋಲು

ಒಡಿಶಾ ತಂಡಕ್ಕೆ ಆರಂಭದಲ್ಲೇ ಯಶಸ್ಸು. 9ನೇ ನಿಮಿಷದಲ್ಲಿ ಡಿಗೋ ಮೌರಿಸಿಯೊ ಪೆನಾಲ್ಟಿ ಮೂಲಕ ಗಳಿಸಿದ ಗೋಲು ಮುಂಬೈ ಎದುರು ದುರ್ಬಲ ಎನಿಸಿದ ತಂಡಕ್ಕೆ ಮುನ್ನಡೆ ತಂದುಕೊಟ್ಟಿತು. ಈ ಗೋಲು ಮುಂಬೈ ತಂಡದಲ್ಲಿ ನಿಜವಾಗಿಯೂ ಆತಂಕವನ್ನುಂಟು ಮಾಡಿರುವುದು ಸಹಜ. ಸೇಡಿನ ಮೊದಲ ಗೋಲಾಗಿ ಅದು ಮೂಡಿ ಬಂತು. ಮೌರಾಸಿಯೋ ಹೆಚ್ಚು ಶಕ್ತಿ ಉಪಯೋಗಿಸಿ ಚೆಂಡನ್ನು ತುಳಿದಿರಲಿಲ್ಲ. ಮುಂಬೈ ಸಿಟಿ ಗೋಲ್ ಕೀಪರ್ ಅಮ್ರಿಂದರ್ ಸಿಂಗ್ ನಿಖರವಾಗಿ ತಡೆದಿದ್ದರು, ಆದರೆ ಚೆಂಡು ಮೇಲಕ್ಕೆ ಚಿಮ್ಮಿ ನೆಟ್ ಗೆ ಸೇರಿತು.

ಮುಂಬೈಗೆ ಜಯದ ಅಗತ್ಯ

ಮುಂಬೈಗೆ ಜಯದ ಅಗತ್ಯ

ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನೇ ತನ್ನ ವಿಳಾಸವಾಗಿರಿಸಿಕೊಂಡಿರುವ ಒಡಿಶಾ ಎಫ್ ಸಿ ವಿರುದ್ಧ ಮುಂಬೈ ಸಿಟಿ ಎಫ್ ಸಿ ಗೆಲ್ಲುವ ಆತ್ಮವಿಶ್ವಾಸದೊಂದಿಗೆ ಅಂಗಣಕ್ಕಿಳಿಯಿತು. ಜಯದೊಂದಿಗೆ ಲೀಗ್ ಹಂತವನ್ನು ಪೂರ್ಣಗೊಳಿಸಬೇಕೆಂಬುದು ಒಡಿಶಾದ ಗುರಿಯಾದರೆ, ಜಯ ಗಳಿಸಿ ಲೀಗ್ ಚಾಂಪಿಯನ್ ಪಟ್ಟಕ್ಕಾಗಿ ಅಗ್ರ ಸ್ಥಾನಕ್ಕೇರುವ ಗುರಿ ಮುಂಬೈ ತಂಡಕ್ಕೆ. ಒಡಿಶಾದ ಡಿಫೆನ್ಸ್ ವಿಭಾಗ ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸದ ಕಾರಣ ಒಡಿಶಾ ಸೋಲಿನ ಮೇಲೆ ಸೋಲನುಭವಿಸಿತು. ಈಗ ತಂಡ ಕೇವಲ ಗೌರವಕ್ಕಾಗಿ ಆಡುವಂತಾಗಿದೆ. ಹಿಂದಿನ ಪಂದ್ಯದಲ್ಲಿ ಇತ್ತಂಡಗಳು ಮುಖಾಮುಖಿಯಾದಾಗ ಒಡಿಶಾ ಸೋಲನುಭವಿಸಿತ್ತು. ಆ ಸೋಲಿನ ಸೇಡನ್ನು ತೀರಿಸಕೊಂಡು ಮುಂಬೈ ಮುನ್ನಡೆಗೆ ಅಡ್ಡಿ ಮಾಡಲು ಒಡಿಶಾಕ್ಕೆ ಇದು ಉತ್ತಮ ಅವಕಾಶ. ಸರ್ಗಿಯೋ ಲೊಬೆರಾ ಪಡೆ ಇತ್ತೀಚಿನ ಆರು ಪಂದ್ಯಗಳಲ್ಲಿ ಗೆದ್ದಿರುವುದು ಒಂದು ಪಂದ್ಯದಲ್ಲಿ ಮಾತ್ರ. ಅರಂಭದಿಂದಲೂ ಅಗ್ರ ಸ್ಥಾನ ಕಾಯ್ದುಕೊಂಡಿದ್ದ ಮುಂಬೈ ಈಗ ಇದ್ದಕ್ಕಿದ್ದಂತೆ ಕುಸಿಯತೊಡಗಿತು.

For Quick Alerts
ALLOW NOTIFICATIONS
For Daily Alerts
Story first published: Wednesday, February 24, 2021, 23:08 [IST]
Other articles published on Feb 24, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X