ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2020: ಅಗ್ರ ಸ್ಥಾನಕ್ಕೆ ಎಫ್‌ಸಿ ಬೆಂಗಳೂರು ಟಾರ್ಗೆಟ್

By Isl Media
ISL 2020: Bengaluru look to maintain pace for top spot

ಬೆಂಗಳೂರು, ಜನವರಿ 30: ಗುರುವಾರ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಬಲಿಷ್ಠ ಬೆಂಗಳೂರು ಎಫ್ ಸಿ ತಂಡ ಈಗಾಗಲೇ ಪ್ಲೇ ಆಫ್ ಸ್ಪರ್ಧೆಯಿಂದ ಹೊರಗುಳಿದಿರುವ ಹೈದರಾಬಾದ್ ಎಫ್ ಸಿ ವಿರುದ್ಧ ಗೆದ್ದು ಅಗ್ರ ಸ್ಥಾನಕ್ಕೇರುವ ಗುರಿ ಹೊಂದಿದೆ.

ಮನೆಯಂಗಣದಲ್ಲಿ ಗೆಲ್ಲುವ ಮೂಲಕ ಬೆಂಗಳೂರು ಒಂದು ಅಂಕ ಮೇಲುಗೈ ಸಾಧಿಸಿ ಅಗ್ರ ಸ್ಥಾವ ತಲುಪಲಿದೆ. ಗೋವಾ ಮತ್ತು ಎಟಿಕೆ ಉಳಿದೆರಡು ಸ್ಥಾನದಲ್ಲಿವೆ. ಮನೆಯಂಗಣದಲ್ಲಿಯ ಪಂದ್ಯಗಳಲ್ಲಿ ತೋರಿದ ಸಾಧನೆಯನ್ನು ಗಮನಿಸಿದರೆ ಬೆಂಗಳೂರು ಗೆಲ್ಲುವ ಫೇವರಿಟ್ ಎನಿಸಿದೆ. ಕಳೆದ ಮೂರು ಪಂದ್ಯಗಳಲ್ಲಿ ಜಯ ಗಳಿಸಿರುವ ಬೆಂಗಳೂರು ಎದುರಾಳಿ ತಂಡಕ್ಕೆ ನೀಡಿದ್ದು ಬರೇ ನಾಲ್ಕು ಗೋಲುಗಳು.

1
2026496

''ನಮಗೆ ಈಗ ಒತ್ತಡದ ಅರಿವಾಗುತ್ತಿಲ್ಲ. ನಮಗೆ ಎಷ್ಟು ಅಂಕಗಳನ್ನು ಗಳಿಸಲು ಸಾಧ್ಯವೋ ಅಷ್ಟು ಅಂಕಗಳನ್ನು ಗಳಿಸುವೆವು. ಗೋವಾ ಮತ್ತು ಎಟಿಕೆ ನಮಗಿಂತ ಮುಂದೆ ಹೋಗಲಿವೆ. ಅವರು ಎಲ್ಲ ಮೂರೂ ಪಂದ್ಯಗಳನ್ನು ಗೆದ್ದರೂ ನಮಗೆ ಯಾವುದೇ ರೀತಿಯ ಒತ್ತಡ ಆಗದು,'' ಎಂದು ಬೆಂಗಳೂರು ತಂಡದ ಪ್ರಧಾನ ಕೋಚ್ ಕಾರ್ಲಸ್ ಕ್ವಾಡ್ರಾಟ್ ಹೇಳಿದ್ದಾರೆ.

ISL 2020: Bengaluru look to maintain pace for top spot

ಒಡಿಶಾ ಎಫ್ ಸಿ ವಿರುದ್ಧ ನಡೆದ ಪಂದ್ಯದಲ್ಲಿ 3-0 ಅಂತರದಲ್ಲಿ ಜಯ ಗಳಿಸಿದ ಬೆಂಗೂರು ತಂಡ ಅತ್ಯಂತ ಆತ್ಮವಿಶ್ವಾಸದೊಂದಿಗೆ ನಾಳೆಯ ಪಂದ್ಯಕ್ಕೆ ಸಜ್ಜಾಯಿತು.ತಂಡವನ್ನು ಹೊಸದಾಗಿ ಸೇರಿಕೊಂಡ ಸ್ಟಾರ್ ಸ್ಟ್ರೈಕರ್ ದೆಶಾರ್ನ್ ಬ್ರೌನ್ ಉತ್ತಮ ರೀತಿಯಲ್ಲಿ ಆರಂಭ ಕಂಡಿದ್ದಾರೆ. ಈ ಋತುವಿನಲ್ಲಿ ಇದುವರೆಗೂ ಕ್ಲೀನ್ ಶೀಟ್ ಸಾಧನೆ ಮಾಡಿರದ ಹೈದರಾಬಾದ್ ವಿರುದ್ಧವೂ ಬ್ರೌನ್ ಗೋಲು ಗಳಿಸುವ ತವಕದಲ್ಲಿದ್ದಾರೆ. ಸುನಿಲ್ ಛೆಟ್ರಿ ಹಾಗೂ ಬ್ರೌನ್ ನಡುವೆ ಉತ್ತಮ ರೀತಿಯಲ್ಲಿ ಹೊಂದಾಣಿಕೆಯಾದರೆ ಹೈದರಾಬಾದ್ ತಂಡ ಸಂಕಷ್ಟಕ್ಕೆ ಸಿಲುಕುವುದು ಸ್ಪಷ್ಟ.

''ಹೈದರಾಬಾದ್ ತಂಡ ವಿಭಿನ್ನ ರೀತಿಯಲ್ಲಿ ಆಡುತ್ತಿದೆ. ತಂಡ ವಿಭಿನ್ನ ರೀತಿಯಲ್ಲಿ ರಣ ತಂತ್ರವನ್ನು ರೂಪಿಸುತ್ತಿವೆ. ನಾಳೆ ನಮಗೆ ಅತ್ಯಂತ ಅಪಾಯವಾಗಿ ಕಾಣುವುದು ಆ ತಂಡದ ಕೋಚ್ ಹಾಗೂ ಆಟಗಾರರು. ಮುಂದಿನ ಋತುವಿನಲ್ಲಿ ನಮ್ಮದು ಉತ್ತಮ ತಂಡವಾಗಿ ಮೂಡಿಬರಲಿದೆ ಎಂಬುದನ್ನು ಅವರರು ತೋರಿಸಲಿದ್ದಾರೆ,'' ಎಂದು ಕ್ವಾಡ್ರಟ್ ಹೇಳಿದ್ದಾರೆ.

ಮನೆಯಿಂದ ಹೊರಗಡೆ ಆಡಿದ ಪಂದ್ಯಗಳಲ್ಲಿ ಇನ್ನೂ ಜಯ ಗಳಿಸದಿರುವ ಹೈದರಾಬಾದ್ ಈ ಹಿಂದಿನ ಪಂದ್ಯದಲ್ಲಿ ಮುಂಬೈ ಸಿಟಿ ತಂಡದ ವಿರುದ್ಧ 1-1 ಗೋಲಿನಿಂದ ಡ್ರಾ ಸಾಧಿಸಿತ್ತು. '' ತಂಡ ಉತ್ತಮ ರೀತಿಯಲ್ಲಿ ಸುಧಾರಣೆಗೊಳ್ಳುತ್ತಿದೆ, ಯುವ ಆಟಗಾರರು ನಮ್ಮ ತತ್ವವನ್ನು ಆಳವಡಿಕಸಿಕೊಳ್ಳುತ್ತಿದ್ದಾರೆ, ನಾವು ತಂಡವಾಗಿ ಆಡಡು್ತಿದ್ದೇವೆ. ನಾವು ಬೆಂಗಳೂರಿನಲ್ಲಿ ಜಯ ಗಳಿಸಲು ಯತ್ನಿಸುತ್ತೇವೆ,'' ಎಂದು ಲೊಪೆಜ್ ಹೇಳಿದ್ದಾರೆ.

Story first published: Thursday, January 30, 2020, 12:20 [IST]
Other articles published on Jan 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X