ಐಎಸ್ಎಲ್ : ದೆಹಲಿ ಬಗ್ಗುಬಡಿದು ಅಗ್ರಸ್ಥಾನಕ್ಕೇರಿದ ಬೆಂಗಳೂರು

Posted By:

ಬೆಂಗಳೂರು, ನವೆಂಬರ್ 27: ಇಲ್ಲಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಇಂಡಿಯನ್ ಸೂಪರ್‌ ಲೀಗ್‌(ಐಎಸ್ಎಲ್) ಪಂದ್ಯದಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ ಸಿ) ತಂಡ ಭರ್ಜರಿ ಜಯ ದಾಖಲಿಸಿತು.

ಬಿಎಫ್ ಸಿ ವಿರುದ್ಧ ಡೆಲ್ಲಿ ಡೈನಾಮೊಸ್ 4-1 ಅಂತರದ ಸೋಲು ಕಂಡಿದೆ. ಈ ಗೆಲುವಿನ ಮೂಲಕ ಬಿಎಫ್ ಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ISL

ಇದೇ ಮೊದಲ ಬಾರಿಗೆ ಐಎಸ್ಎಲ್ ನಲ್ಲಿ ಆಡುತ್ತಿರುವ ಬಿಎಫ್ಸಿ ಪರ ಎರಿಕ್‌ ಪರ್ತಾಲು (24, 45ನೇ ನಿಮಿಷ), ಲೆನಿ ರಾಡ್ರಿಗಸ್‌ (57ನೇ ನಿ) ಮತ್ತು ಮಿಕು (867ನೇ ನಿ) ಬಿಎಫ್‌ಸಿ ಪರ ಗೋಲು ಗಳಿಸಿದರು. ಡೆಲ್ಲಿ ಪರ ಕಲು ಉಚೆ (86ನೇ ನಿ) ಏಕೈಕ ಗೋಲು ಬಾರಿಸಿದರು.

ಎರಡು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬಿಎಫ್ಸಿ ತನ್ನ ಮುಂದಿನ ಪಂದ್ಯವನ್ನು ನಾಲ್ಕು ದಿನಗಳ ನಂತರ ಎಫ್ ಸಿ ಗೋವಾ ವಿರುದ್ಧ ಆಡಲಿದೆ. ಡೈನಾಮೋಸ್ ತಂಡವು ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧ ಡಿಸೆಂಬರ್ 02ರಂದು ಆಡಲಿದೆ.

ಬೆಂಗಳೂರು ಎಫ್ ಸಿ ತಂಡ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಎಫ್ ಸಿ ವಿರುದ್ಧ 3-0 ಅಂತರದ ಭರ್ಜರಿ ಗೆಲುವು ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Story first published: Monday, November 27, 2017, 6:23 [IST]
Other articles published on Nov 27, 2017
+ ಇನ್ನಷ್ಟು
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ