ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಮಾಜಿ ತಂಡವನ್ನು ಸೋಲಿಸಲು ಶೆಟೋರಿ ರಣತಂತ್ರ

By Isl Media
ISL: Schattorie contemplates new strategy with an eye to topple former team

ಕೊಚ್ಚಿ, ಡಿಸೆಂಬರ್ 28: ಶನಿವಾರ ಇಲ್ಲಿನ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ಗೆ ಆತಿಥ್ಯ ನೀಡಲಿರುವ ಕೇರಳ ಬ್ಲಾಸ್ಟರ್ಸ್ ತಂಡ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಋತುವಿನ ಆರಂಭದಲ್ಲಿ ಎಟಿಕೆ ವಿರುದ್ಧ ಗೆದ್ದ ನಂತರ ಕೇರಳ ಬ್ಲಾಸ್ಟರ್ಸ್ ಜಯ ಕಂಡಿಲ್ಲ. ಕೇರಳ ತಂಡ ಮನೆಯಂಗಣದಲ್ಲಿ ಆಡಿದ 14 ಪಂದ್ಯಗಳಲ್ಲಿ ಕೇವಲ 14 ಅಂಕಗಳನ್ನು ಗಳಿಸಿ ಹತಾಶೆಗೊಳಗಾಗಿದೆ. ಇದು ತಂಡದ ಮುನ್ನಡೆಯ ಮೇಲೆ ಕೆಟ್ಟ ಪರಿಣಾಮ ಬೀಳಲಿದೆ. ಈ ಋತುವಿನಲ್ಲಿ ಆಡಿರುವ ಒಂಬತ್ತು ಪಂದ್ಯಗಳಲ್ಲಿ ಕೇರಳ ಗಳಿಸಿರುವುದು ಕೇವಲ ಏಳು ಅಂಕ, ಇಲ್ಲಿಂದ ಯಾವುದೇ ರೀತಿಯಲ್ಲಿ ಅಂಕವನ್ನು ಕಳೆದುಕೊಳ್ಳದೆ ಸ್ಪರ್ಧೆಯಲ್ಲಿ ಉಳಿದುಕೊಳ್ಳಲು ತಂಡ ತೀರ್ಮಾನಿಸಿದೆ . ಮನೆಯಂಗಣದಲ್ಲಿ ಪ್ರೇಕ್ಷಕರ ಬೆಂಬಲ ಉತ್ತಮವಾಗಿದ್ದರೂ ಎಲ್ಕೋ ಷೆಟ್ಟೋರಿ ಪಡೆ ಅದಕ್ಕೆ ಪೂರಕವಾದ ಪ್ರದರ್ಶನವನ್ನು ತೋರಿಲ್ಲ. ಇಲ್ಲಿ ಆಡಿದ ಕಳೆದ ಮೂರು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿದೆ.

ಚೆನ್ನೈಯಿನ್ ಎಫ್ ಸಿ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಸೋಲನುಭವಿಸಿದ್ದ ಷೆಟೋರಿಗೆ ತನ್ನ ಮಾಜಿ ತಂಡದ ವಿರುದ್ಧ ಜಯ ಗಳಿಸುವ ತವಕದಲ್ಲಿದ್ದಾರೆ. ಅದೇ ರೀತಿ ಕಳೆದ ಋತುವಿನಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ಪರ ಅತಿ ಹೆಚ್ಚು ಗೋಲು ಗಳಿಸಿದ್ದ ಬಾರ್ತಲೋಮ್ಯೋ ಓಗ್ಬಚೆ ಈ ಬಾರಿ ಕೇರಳ ತಂಡದಲ್ಲಿರುವದು ವಿಶೇಷವೆನಿಸಿದೆ. ಮಾಜಿ ತಂಡದ ದೌರ್ಬಲ್ಯಗಳನ್ನು ಅರಿತು ಆಡಿದರೆ ಕೇರಳಕ್ಕೆ ಇಲ್ಲೊಂದು ಜಯ ಸಿಗಬಹುದು. ಆದರೆ ಓಗ್ಬಚೆ ಕಳೆದ ಋತುವಿನಲ್ಲಿ ತೋರಿದ ಪ್ರದರ್ಶನವನ್ನು ಈ ಬಾರಿ ನೀಡಿಲ್ಲ ಎಂಬುದು ಗಮನಾರ್ಹ.

ಕೇರಳದ ಡಿಫೆನ್ಸ್ ವಿಭಾಗ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ತಂಡ ಕೇವಲ ಒಡಿಶಾ ವಿರುದ್ಧ ಕ್ಲೀನ್ ಶೀಟ್ ಕಾಯ್ದುಕೊಂಡಿತ್ತು. ಮಿಡ್ ಫೀಲ್ಡ್ ವಿಭಾಗದಲ್ಲಿ ತಂಡ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ತೋರಿಲ್ಲ. ತಂಡದ ಪ್ರದರ್ಶನದಲ್ಲೂ ಸ್ಥಿರತೆ ಕಾಣುತತ್ತಿಲ್ಲ. ಪ್ರಮುಖ ಆಟಗಾರ ಸರ್ಗಿಯೋ ಸಿಡೋಂಚಾ ಕೂಡ ತಂಡಕ್ಕೆ ಉತ್ತಮ ರೀತಿಯಲ್ಲಿ ನೆರವಾಗುತ್ತಿಲ್ಲ. ಯುವ ಪ್ರತಿಭಾವಂಥ ಆಟಗಾರ ಸಹಾಲ್ ಅಬ್ದುಲ್ ಸಮದ್ ಅಚ್ಚರಿಯೆಂಬಂತೆ ತಮ್ಮ ನೈಜ ಪ್ರದರ್ಶನ ತೋರಿಲ್ಲ. ಮಾರಿಯೋ ಆರ್ಕ್ವೇಸ್ ಈಗ ಸಂಘಟಿತ ಹೋರಾಟ ನೀಡಬೇಕಾಗಿದೆ.

''ನೀವು ನಿಮ್ಮ ಮಾಜಿ ಕ್ಲಬ್ ವಿರುದ್ಧ ಆಡುವಾಗ ಆಲ್ಲಿ ಸಹಜವಾದ ಲೆಕ್ಕಾಚಾರ ಇರುತ್ತದೆ. ಆದರೆ ನಾನು ನನ್ನ ಈಗಿನ ತಂಡದ ಬಗ್ಗೆ ಯೋಚಿಸುತ್ತೇನೆ. ಕಳೆದ ಪದ್ಯದಿಂದ ಪಡೆದ ಸ್ಫೂರ್ತಿಯನ್ನು ನಾವು ಮುಂದುವರಿಸಿಕೊಂಡು ಹೋಗಬೇಕಾಗಿದೆ. ಮತ್ತೆ ಪುಟಿದೇಳುವ ಬಗ್ಗೆ ಗಮನ ಹರಿಸಬೇಕು. ನಾರ್ಥಈಸ್ಟ್ ವಿರುದ್ಧದ ಪಂದ್ಯ ನಮಗೆ ಒಂದು ರೀತಿಯಲ್ಲಿ ಪ್ಲಸ್ ಪಾಯಿಂಟ್, ಎಲ್ಲಕ್ಕಿಂತ ಮುಖ್ಯವಾಗಿ ನಾವು ಮನೆಯಂಗಣದಲ್ಲಿ ಆಡುತ್ತಿದ್ದೇವೆ. ಆ ತಂಡ ಗೆದ್ದಿರುವ ಕೆಲವು ಪಂದ್ಯಗಳನ್ನು ಗಮನಿಸಿದಾಗ ಅಲ್ಲಿ ಅದೃಷ್ಟ ಇದ್ದಿರುವುದು ಸ್ಪಷ್ಟ,'' ಎಂದು ಷೆಟ್ಟೋರಿ ಹೇಳಿದ್ದಾರೆ.

ಈ ಋತುವಿನಲ್ಲಿ ಉತ್ತಮ ಆರಂಭ ಕಂಡ ನಾರ್ಥ್ ಈಸ್ಟ್ ಯುನೈಟೆಡ್ ಬಳಿಕ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು. ಕಳೆದ ನಾಲ್ಕು ಪಂದ್ಯಗಳಲ್ಲಿ ಜಯ ಕಾಣದಿರುವುದು ತಂಡವನ್ನು ಆರನೇ ಸ್ಥಾನಕ್ಕೆ ತಳ್ಳಿದೆ. ಈಗ ತಂಡದ ಒಟ್ಟು ಅಂಕ 10. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅಸಮೋಹ ಗ್ಯಾನ್ ಅವರ ಅನುಪಸ್ಥಿತಿಯೂ ತಂಡದ ಹಿನ್ನಡೆಗೆ ಕಾರಣವಾಗಿತ್ತು. ತಂಡ ಇದುವರೆಗೂ ಗಳಿಸಿದ್ದು ಕೇವಲ ಎಂಟು ಗೋಲುಗಳು. ಕಳೆದ ನಾಲ್ಕು ಪಂದ್ಯಗಳಲ್ಲಿ ಗಳಿಸಿದಗದು ಕೇವಲ ಒಂದು ಗೋಲು. ಫೆದ್ರಿಕೋ ಗಲ್ಲೆಗೋ ಅವರು ತಂಡಕ್ಕೆ ಮರಳಿರುವುದು ತಂಡದ ಬಲವನ್ನು ಹೆಚ್ಚಿಸಿದೆ.

''ಉತ್ತಮ ರೀತಿಯ ಆಟದ ಶೈಲಿಯನ್ನು ಹೊಂದಿರುವ ಮೂರು ತಂಡಗಳಿವೆ. ಆದರೆ ಅವು ಫಲಿತಾಂಶ ಗಳಿಸುವಲ್ಲಿ ವಿಫಲವಾಗಿವೆ. ಫುಟ್ಬಾಲ್ ಋತು ಮುಗಿಯುತ್ತಿದ್ದಂತೆ ಯಾರೂ ಶೈಲಿಯನ್ನು ನೆನಪಿಟ್ಟುಕೊಳ್ಳುವುದಿಲ್ಲ. ಏನಿದ್ದರೂ ಪಾಯಿಂಟ್ ಗಳು ಮಾತ್ರ ಪರಿಣಾಚ ಬೀರುತ್ತವೆ,'' ಎಂದು ನಾರ್ಥ ಈಸ್ಟ್ ಯುನೈಟೆಡ್ ಕೋಚ್ ರಾಬರ್ಟ್ ಜರ್ನಿ ಹೇಳಿದ್ದಾರೆ.

Story first published: Saturday, December 28, 2019, 0:05 [IST]
Other articles published on Dec 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X