ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಪಿಎಸ್‌ಜಿಗೆ ಸೇರಿಕೊಂಡ ವಿಶ್ವಕಪ್ ವಿಜೇತ ಮೆಸ್ಸಿಗೆ ತಂಡದಿಂದ ಗಾರ್ಡ್ ಆಫ್ ಹಾನರ್: ವಿಡಿಯೋ

Lionel Messi Receives Guard Of Honour from PSG teammates For World Cup-winning Campaign

ಫಿಫಾ ವಿಶ್ವಕಪ್ ವಿಜೇತ ಅರ್ಜೆಂಟಿನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಪ್ಯಾರಿಸ್ ಸೈಂಟ್- ಜರ್ಮನ್(PSG) ತಂಡಕ್ಕೆ ಮರಳಿದ್ದಾರೆ. ಕತಾರ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಸುದೀರ್ಘ ಕಾಲದ ಬಳಿಕ ಅರ್ಜೆಂಟಿನಾ ಪರವಾಗಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದ ಬಳಿಕ ಲಿಯೋನೆಲ್ ಮೆಸ್ಸಿ 10 ದಿನಗಳ ಬ್ರೇಕ್‌ನ ಬಳಿಕ ಕ್ಲಬ್ ಸೇರಿಕೊಂಡಿದ್ದಾರೆ.

ಕತಾರ್‌ನ ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅರ್ಜೆಂಟಿನಾ ಫ್ರಾನ್ಸ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಮೆಸ್ಸಿ ಎರಡು ಗೋಲು ಬಾರಿಸಿದ್ದಾರೆ. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದಲ್ಲಿ ಹೆಚ್ಚುವರಿ ಅವಧಿಯ ಮುಕ್ತಾಯದ ಬಳಿಕ 3-3 ಅಂತರದಿಂದ ಸಮಬಲ ಸಾಧಿಸಿದ್ದ ಕಾರಣ ಫೆನಾಲ್ಟಿ ಶೂಟೌಟ್‌ನಲ್ಲಿ ಫಲಿತಾಂಶ ನಿರ್ಧರಿಸಲಾಯಿತು. ಫೈನಾಲ್ಟಿ ಶೂಟೌಟ್‌ನಲ್ಲಿ ಮೆಸ್ಸಿ ಬಳಗ ಐತಿಹಾಸಿಕ ಗೆಲುವು ಸಾಧಿಸಿದೆ. ಇದೀಗ ಮತ್ತೆ ಪಿಎಸ್‌ಜಿ ಬಳಗವನ್ನು ಕೂಡಿಕೊಂಡಿರುವ ಮೆಸ್ಸಿ "ಕೂಪ್ ಡಿ ಫ್ರಾನ್ಸ್" ಟೂರ್ನಿಯಲ್ಲಿ ಮುಂದಿನ ಶುಕ್ರವಾರ ಚಟೌರೊಕ್ಸ್ ತಂಡದ ವಿರುದ್ಧ ಸೆಣೆಸಾಟ ನಡೆಸಲಿದೆ.

ಅಫ್ರಿದಿ ಹೊಸ ನಿಯಮ: ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್‌ಗೂ ಟಿ20 ತಂಡದಲ್ಲಿ ಅವಕಾಶ ಇಲ್ಲವಾ?ಅಫ್ರಿದಿ ಹೊಸ ನಿಯಮ: ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್‌ಗೂ ಟಿ20 ತಂಡದಲ್ಲಿ ಅವಕಾಶ ಇಲ್ಲವಾ?

ಪಿಎಸ್‌ಜಿಯ ತರಬೇತಿ ಕೇಂದ್ರಕ್ಕೆ ಆಗಮಿಸಿದ ನಂತರ ಮೆಸ್ಸಿ ತನ್ನ ತಂಡದ ಸಹ ಆಟಗಾರರಿಂದ 'ಗಾರ್ಡ್ ಆಫ್ ಹಾನರ್' ಗೌರವವನ್ನು ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ PSGಯ ಸಲಹೆಗಾರರಾದ ಲ್ಲುಯಿಸ್ ಕ್ಯಾಂಪೋಸ್ ಅವರು ವಿಶೇಷ ಸ್ಮರಣಿಕೆಯನ್ನು ಕೂಡ ಲಿಯೋನೆಲ್ ಮೆಸ್ಸಿಗೆ ನೀಡಿದ್ದಾರೆ. ಇದರ ವಿಡಿಯೋವನ್ನು ಪಿಎಸ್‌ಜಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಮೆಸ್ಸಿ ತನ್ನ ತವರು ರೊಸಾರಿಯೊದಲ್ಲಿ ಕಳೆದ ತಿಂಗಳು ವಿಶ್ವಕಪ್ ವಿಜಯವನ್ನು ಸಂಭ್ರಮಿಸಿದ್ದಾರೆ. ನಂತರ ಪತ್ನಿ ಆಂಟೋನೆಲ್ಲಾ ಮತ್ತು ಮಕ್ಕಳೊಂದಿಗೆ ಸೋಮವಾರ ತಡರಾತ್ರಿ ಖಾಸಗಿ ಜೆಟ್‌ನಲ್ಲಿ ಪ್ಯಾರಿಸ್‌ಗೆ ಪ್ರಯಾಣಿಸಿ ತಂಡವನ್ನು ಸೇರಿಕೊಂಡಿದ್ದಾರೆ.

ಇದಕ್ಕೂ ಮುನ್ನ ಪಿಎಸ್‌ಜಿ ಕೋಚ ಕ್ರಿಸ್ಟೋಫ್ ಗಾಲ್ಟಿಯರ್ ಕ್ರಿಸ್‌ಮಸ್ ಮತ್ತು ಹೊಸ ವರ್ಷವನ್ನು ಕುಟುಂಬದೊಂದಿಗೆ ತಮ್ಮ ಮನೆಯಲ್ಲಿ ಕಳೆದ ಬಳಿಕ ಮೆಸ್ಸಿ ಜನವರಿ 2 ಅಥವಾ 3 ರಂದು ಮರಳಬಹುದು ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದರು.

Story first published: Wednesday, January 4, 2023, 20:48 [IST]
Other articles published on Jan 4, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X