ಮ್ಯಾಂಚೆಸ್ಟರ್ ಯುನೈಟೆಡ್‌ನಿಂದ ಹೊರಬಿದ್ದ ಕ್ರಿಶ್ಚಿಯಾನೋ ರೊನಾಲ್ಡೋ

ಫುಟ್ಬಾಲ್ ವಿಶ್ವಕಪ್ ನಡೆಯುತ್ತಿರುವ ಈ ಸಂದರ್ಭದಲ್ಲಿ ಜಗತ್ತಿನ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್‌ಗಳಲ್ಲಿ ಒಂದಾಗಿರುವ ಮ್ಯಾಂಚೆಸ್ಟರ್ ಯುನೈಟೆಡ್ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಮ್ಯಾಂಚೆಸ್ಟರ್ ಯುನೈಟೆಡ್‌ನ ಸ್ಟಾರ್ ಆಟಗಾರ ಜಗತ್ತಿನ ಶ್ರೇಷ್ಠ ಫುಟ್ಬಾಲರ್ ಕ್ರಿಶ್ಚಿಯಾನೋ ರೊನಾಲ್ಡೋ ಜೊತೆಗಿನ ಒಪ್ಪಂದವನ್ನು ಮುರಿದುಕೊಂಡಿರುವುದಾಗಿ ಘೋಷಣೆ ಮಾಡಿದೆ.

ಮ್ಯಾಂಚೆಸ್ಟರ್ ಯುನೈಟೆಡ್ ಪ್ರಾಂಚೈಸಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. "ಪರಸ್ಪರ ಒಪ್ಪಂದದ ಮೂಲಕ ಕ್ರಿಶ್ಚಿಯಾನೋ ರಿನಾಲ್ಡೋ ತಕ್ಷಣದಿಂದಲೇ ಅನ್ವಯವಾಗುವಂತೆ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ಬನ್ನು ತೊರೆಯಲಿದ್ದಾರೆ. ಓಲ್ಡ್ ಟ್ರಾಫಾರ್ಡ್‌ನಲ್ಲಿ ನಮ್ಮ ತಂಡಕ್ಕಾಗಿ ಅವರು ನೀಡಿರುವ ಕೊಡುಗೆಗೆ ಕ್ಲಬ್ ಧನ್ಯವಾದವನ್ನು ಸಲ್ಲಿಸುತ್ತದೆ" ಎಂದು ಮ್ಯಾಂಚೆಸ್ಟರ್ ಯುನೈಟೆಡ್ ಟ್ವೀಟ್ ಮಾಡಿದೆ.

IPL 2023: ಈ ಆಟಗಾರನಿಗೆ ನಾಯಕತ್ವ ನೀಡಲು ಮುಂದಾದ ಸನ್‌ರೈಸರ್ಸ್ ಹೈದರಾಬಾದ್IPL 2023: ಈ ಆಟಗಾರನಿಗೆ ನಾಯಕತ್ವ ನೀಡಲು ಮುಂದಾದ ಸನ್‌ರೈಸರ್ಸ್ ಹೈದರಾಬಾದ್

ಈ ಬೆಳವಣಿಗೆಗೆ ಮ್ಯಾಂಚೆಸ್ಟರ್ ಯುನೈಟೆಡ್ ಕಾರಣವೇನೆಂದು ಬಹಿರಂಗವಾಗಿ ಹೇಳಿಲ್ಲವಾದರೂ ಇತ್ತೀಚೆಗಷ್ಟೇ ಕ್ರಿಶ್ಚಿಯಾನೋ ರೊನಾಲ್ಡೋ ಸಂದರ್ಶನವೊಂದರಲ್ಲಿ ಭಾಗಿಯಾಗಿ ಆಡಿದ ಮಾತುಗಳು ಸಾಕಷ್ಟು ವಿವಾದದ ಸ್ವರೂಪವನ್ನು ಪಡೆದುಕೊಂಡಿತ್ತು. ಈ ಸಂದರ್ಭದಲ್ಲಿ ಅವರು ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ತೊರೆಯುವ ಇಂಗಿತವನ್ನು ಕೂಡ ವ್ಯಕ್ತಪಡಿಸಿದ್ದರು. ಇದೀಗ ಮ್ಯಾಂಚೆಸ್ಟರ್ ಯುನೈಟೆಡ್ ವಿಚಾರವಾಗಿ ಅಧಿಕೃತ ಘೋಷಣೆ ಮಾಡಿದೆ.

ಬ್ರಿಟಿಷ್ ಪತ್ರಕರ್ತ ಪೈರ್ಸ್ ಮೋರ್ಗನ್ ಅವರಿಗೆ ನೀಡಿದ್ದ ಸಂದರ್ಶನದಲ್ಲಿ ರೊನಾಲ್ಡೊ ಹಲವಾರು ವಿಷಯಗಳನ್ನು ಉಲ್ಲೇಖಿಸಿ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಅನ್ನು ಟೀಕಿಸಿದ್ದರು. ಕ್ಲಬ್‌ನ ಕೆಲ ಪ್ರಮುಖರು ತನ್ನನ್ನು ಬಲವಂತವಾಗಿ ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಕೂಡ ಅವರು ಆರೋಪಿಸಿದ್ದರು. ಈ ಸ್ಪೋಟಕ ಸಂದರ್ಶನ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಮೂಲಕ ರೊನಾಲ್ಡೋ ಮ್ಯಂಚೆಸ್ಟರ್ ಯುನೈಟೆಡ್‌ನಿಂದ ದೂರ ಸರಿಯಲಿದ್ದಾರೆ ಎಂಬ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಇದೀಗ ಮ್ಯಾಂಚೆಸ್ಟರ್ ಯುನೈಟೆಡ್ ಈ ಬಗ್ಗೆ ತನ್ನ ನಿರ್ಧಾರವನ್ನು ತೆಗೆದುಕೊಂಡಿದೆ. ರೊನಾಲ್ಡೋ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಪರವಾಗಿ 346 ಪಂದ್ಯಗಳನ್ನು ಆಡಿದ್ದು 145 ಗೋಲುಗಳನ್ನು ದಾಖಲಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
ಫಿಫಾ ವಿಶ್ವಕಪ್ ಪೂರ್ವಭಾವಿಗಳು
VS
Story first published: Tuesday, November 22, 2022, 23:43 [IST]
Other articles published on Nov 22, 2022
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X