ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ರಷ್ಯಾದ ಫುಟ್ಬಾಲ್ ನೆಲದಲ್ಲಿ ಬೆಂಗಳೂರು ಹುಡುಗನ ಮಿಂಚು

By ಅರವಿಂದ್ ಎಸ್.
Russia Tour Diary: Bengaluru boy Surya Varikuti shines in Football For Friendship Programme

ಸೋಚಿ, ಜೂನ್ 20: ಬೆಂಗಳೂರಿನಿಂದ ಮಾಸ್ಕೋದ ಪಯಣ ದೀರ್ಘಾವಧಿಯದ್ದು ಮತ್ತು ಆಯಾಸಕರವಾದದ್ದು. ಆದರೆ ಬೆಂಗಳೂರಿನ 12 ವರ್ಷದ ಬಾಲಕ ಸೂರ್ಯ ವಾರಿಕುಟಿಗೆ ಇದೇನೂ ಹೊಸತಲ್ಲ.

ರೂಟ್ಸ್ ಫುಟ್ಬಾಲ್ ಶಾಲೆ ತಂಡದ ಪರವಾಗಿ ಆಡುವ ಸೂರ್ಯ, ತನ್ನ ತರಬೇತಿಗಾಗಿ ನಿತ್ಯ 40 ಕಿ.ಮೀ. ಓಡಾಡುತ್ತಾನೆ. ಫುಟ್ಬಾಲ್ ಪ್ರಭಾವ ಅಷ್ಟಾಗಿರದ ಭಾರತವನ್ನು ಪ್ರತಿನಿಧಿಸುತ್ತಿರುವ ಈ ಬಾಲಕ ರಷ್ಯಾದ ಮಾಸ್ಕೋದಲ್ಲಿ ತನ್ನ ಕಲ್ಚಳಕ ತೋರಿಸಿ ಗಮನ ಸೆಳೆದಿದ್ದಾನೆ.

ಬ್ರೆಜಿಲ್-ಅರ್ಜೆಂಟಿನಾ ವಿವಾಹವಂತೆ!: ಫುಟ್ಬಾಲ್ ಪ್ರೇಮಿಗಳ ಮದುವೆ ಕಥೆ ಬ್ರೆಜಿಲ್-ಅರ್ಜೆಂಟಿನಾ ವಿವಾಹವಂತೆ!: ಫುಟ್ಬಾಲ್ ಪ್ರೇಮಿಗಳ ಮದುವೆ ಕಥೆ

ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಸಂಭ್ರಮ 32 ದೇಶಗಳ ಆಟಗಾರರು ಮತ್ತು ಅದಕ್ಕೂ ಹೆಚ್ಚಿನ ದೇಶಗಳ ಫುಟ್ಬಾಲ್ ಅಭಿಮಾನಿಗಳನ್ನು ಮಾತ್ರ ಒಂದುಗೂಡಿಸಿಲ್ಲ.

ಈ ನೆಪದಲ್ಲಿ ಮಾಸ್ಕೋದ ಗಾಜ್‌ಪ್ರೋಮ್ ಇಂಟರ್‌ನ್ಯಾಷನಲ್ ಫುಟ್ಬಾಲ್ ಫಾರ್ ಫ್ರೆಂಡ್‌ಷಿಪ್ ಚಿಲ್ಡ್ರನ್ ಫೋರಂ 211 ದೇಶಗಳ ಸುಮಾರು 1500 ಮಕ್ಕಳನ್ನು ಕಳೆದ ವಾರ ಒಂದೆಡೆ ಸೇರಿಸಿತ್ತು.

Russia Tour Diary: Bengaluru boy Surya Varikuti shines in Football For Friendship Programme

ಈ ವಿಶಿಷ್ಟ ಸಂಗಮದ ಕಾರ್ಯಕ್ರಮವನ್ನು ಒಕ್ಕೂಟ ಆಯೋಜಿಸಿದ್ದು ಜಗತ್ತಿಗೆ ಸಹಿಷ್ಣುತೆ, ಸ್ನೇಹ, ಸಮಾನತೆ ಮತ್ತು ಶಾಂತಿಯ ಸಂದೇಶವನ್ನು ಪ್ರಚುರಪಡಿಸುವ ಸಲುವಾಗಿ.

ಈ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸುವ ಸಲುವಾಗಿ ಅಖಿಲ ಭಾರತ ಫುಟ್ಬಾಲ್ ಸಂಸ್ಥೆ (ಎಐಎಫ್‌ಎಫ್) ಸೂರ್ಯನನ್ನು ಆಯ್ದುಕೊಂಡಿತ್ತು.

ವಿಶ್ವಕಪ್ ನಡುವೆಯಲ್ಲಿ ಟಾಪ್ 10 ದುಬಾರಿ ಗೋಲ್ ಕೀಪರ್ಸ್ವಿಶ್ವಕಪ್ ನಡುವೆಯಲ್ಲಿ ಟಾಪ್ 10 ದುಬಾರಿ ಗೋಲ್ ಕೀಪರ್ಸ್

ವಿವಿಧ ದೇಶಗಳಿಂದ ಬಂದ ಪ್ರತಿನಿಧಿ ಮಕ್ಕಳನ್ನು ಸೇರಿಸಿ ಹಲವು ತಂಡಗಳನ್ನು ರಚಿಸಲಾಗಿತ್ತು. ಅವುಗಳ ನಡುವೆ 'ಗೆಳೆತನಕ್ಕಾಗಿ ಫುಟ್ಬಾಲ್' ಧ್ಯೇಯದ ಸೌಹಾರ್ದ ಪಂದ್ಯಗಳು ನಡೆದವು.

ಡಿಫೆಂಡರ್ ಆಗಿ ಗುರುತಿಸಿಕೊಂಡಿರುವ ಸೂರ್ಯ ಆಡಿದ ತಂಡ ಗೆಲುವು ದಾಖಲಿಸದೆಯೇ ಇದ್ದರೂ, ಆತನ ಆಟ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಅದು ನಿಜಕ್ಕೂ ಖುಷಿ ನೀಡಿತು. ಅದ್ಭುತ ಅನುಭವ. ಅನೇಕ ಜನರನ್ನು ಭೇಟಿಯಾದೆ, ಸ್ನೇಹಿತರನ್ನಾಗಿಸಿಕೊಂಡೆ ಮತ್ತು ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡೆ. ಹೊಸ ಭಾಷೆಗಳನ್ನು ಕೇಳಿದೆ ಹಾಗೂ ಕೆಲವು ಪದಗಳನ್ನು ಕಲಿತೆ ಕೂಡ ಎಂದು ಸೂರ್ಯ ಹೇಳಿದ್ದಾನೆ.

ಈ ವರ್ಷ ವಿಶ್ವಕಪ್ ವಿಜೇತ, ಸ್ಪೇನ್‌ನ ಗೋಲ್‌ಕೀಪರ್ ಐಕರ್ ಕ್ಯಾಸಿಲ್ಲಾಸ್ ಮಕ್ಕಳಲ್ಲಿ ಫುಟ್ಬಾಲ್ ಮೂಲಕ ಶಾಂತಿ ಸಾರುವ ಉತ್ತೇಜನ ನೀಡಿದರು.

ಕ್ಯಾಸಿಲ್ಲಾಸ್ ಅವರ ಜತೆ ಸಿರಿಯಾದ ಫುಟ್ಬಾಲ್ ಆಟಗಾರ ಫಿರಾಸ್ ಅಲ್ ಖಾತಿಬ್, ಸೌದಿಯ ಫುಟ್ಬಾಲ್ ಸಂಸ್ಥೆ ಆಡಳಿತ ನಿರ್ದೇಶಕ ರಾಜಕುಮಾರ ಅಬ್ದುಲ್ ರಹಮಾನ್ ಬಿನ್ ಇಬ್ರಾಹಿಂ ಅಲ್ ಸಯ್ಯಾರ್ ವೇದಿಕೆ ಹಂಚಿಕೊಂಡಿದ್ದರು.

ಕ್ಯಾಸಿಲ್ಲಾಸ್ ಅವರನ್ನು ಭೇಟಿ ಮಾಡಿ ಮಾತನಾಡುವ ಅವಕಾಶ ಸಿಗದೆ ಇರುವುದು ಸೂರ್ಯನಿಗೆ ಬೇಸರ ಮೂಡಿಸಿದೆ. ಕ್ಯಾಸಿಲ್ಲಾಸ್ ಸುತ್ತಲೂ ಅನೇಕ ಮಕ್ಕಳು ಮತ್ತು ಬಾಡಿಗಾರ್ಡ್‌ಗಳು ಇದ್ದಿದ್ದರಿಂದ ಅವರ ಬಳಿ ಹೋಗಲು ಸಾಧ್ಯವಾಗಲಿಲ್ಲ ಎಂದು ಸೂರ್ಯ ಹೇಳಿದ್ದಾನೆ.

'ಅವರನ್ನು ಭೇಟಿ ಮಾಡಲು ಸಾಧ್ಯವಾಗಿದ್ದರೆ ಅವರ ವೃತ್ತಿ, ಇಲ್ಲಿಯವರೆಗೂ ಅವರು ಹೇಗೆ ಬೆಳೆದುಬಂದರು, ಅದಕ್ಕೆ ಬೇಕಾದ ಪರಿಶ್ರಮ ಮುಂತಾದವುಗಳ ಬಗ್ಗೆ ಕೇಳುತ್ತಿದ್ದೆ. ಅವರ ಆಟೊಗ್ರಾಫ್ ಕೂಡ ಪಡೆಯುತ್ತಿದ್ದೆ.

ಈ ಕಾರ್ಯಕ್ರಮ ದೇಶಗಳ ಪರಸ್ಪರ ಫುಟ್ಬಾಲ್ ಕುರಿತು, ಅವರು ಹೇಗೆ ಆಡುತ್ತಾರೆ, ಅವರ ರಾಷ್ಟ್ರೀಯ ತಂಡಗಳ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಹಮ್ಮಿಕೊಳ್ಳಲಾಗಿತ್ತು. ನಾನು ಆಟದ ಕೆಲವು ತಂತ್ರಗಳನ್ನು ಕಲಿತೆ' ಎಂದು ಎಂದು ಸೂರ್ಯ ತಿಳಿಸಿದ್ದಾನೆ.

Story first published: Wednesday, June 20, 2018, 18:43 [IST]
Other articles published on Jun 20, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X