ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಸಲಾ ಕಮಾಲ್! ಚಾಂಪಿಯನ್ಸ್ ಲೀಗ್ ಟ್ರೋಫಿ ಗೆದ್ದ ಲಿವರ್ ಪೂಲ್

Tottenham 0 Liverpool 2: Salah on the spot as Reds seal Champions League glory

ಮ್ಯಾಡ್ರಿಡ್, ಜೂನ್ 02: ಕಳೆದ ಸೀಸನ್ ನ ಕಹಿಯನ್ನು ಮರೆತು ಸ್ಟಾರ್ ಆಟಗಾರ ಮೊಹಮ್ಮದ್ ಸಲಾ ಈ ಬಾರಿ ಗಳಿಸಿದ ಗೋಲು, ಲಿವರ್ ಪೂಲ್ ಗೆ ಚಾಂಪಿಯನ್ಸ್ ಲೀಗ್ ಟ್ರೋಫಿ ಗೆಲ್ಲುವಂತೆ ಮಾಡಿದೆ.

ಮೆಟ್ರೊಪಾಲಿಟನೊ ಸ್ಟೇಡಿಯಂನಲ್ಲಿ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಟೊಟ್ಟೆನ್‌ಹ್ಯಾಮ್ ಹಾಟ್‌ಸ್ಪರ್ ತಂಡವನ್ನು ಲಿವರ್ ಪೂಲ್ 0-2 ಗೋಲುಗಳಿಂದ ಸೋಲಿಸುವ ಮೂಲಕ 6ನೇ ಬಾರಿಗೆ ಚಾಂಪಿಯನ್ಸ್ ಲೀಗ್ ಟ್ರೋಫಿ ಎತ್ತಿ ಹಿಡಿದಿದೆ.

ನೆರವಿಗೆ ಬಂದ ಪೆನಾಲ್ಟಿ : ಪಂದ್ಯದ ಆರಂಭದ ಎರಡನೇ ನಿಮಿಷದಲ್ಲೇ ಟೊಟ್ಟೆನ್ ಹ್ಯಾಮ್ ನ ಆಟಗಾರ ಮೌಸ್ಸಾ ಸಿಸೋಕೊ 'ಹ್ಯಾಂಡ್ ಬಾಲ್' ಮಾಡಿದ್ದರಿಂದ ಲಿವರ್ ಪೂಲ್ ಗೆ ಪೆನಾಲ್ಟಿ ಅವಕಾಶ ಸಿಕ್ಕಿತು. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಪ್ರೀಮಿಯರ್ ಲೀಗ್ ಗೋಲ್ಡನ್ ಬೂಟ್ ವಿಜೇತ ಸಲಾ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದಿತ್ತರು.

Tottenham 0 Liverpool 2: Salah on the spot as Reds seal Champions League glory

ಪಂದ್ಯದ 87ನೇ ನಿಮಿಷದಲ್ಲಿ ಬದಲಿ ಆಟಗಾರ ಒರಿಗಿ ಅವರು ಗಳಿಸಿದ ಗೋಲಿನಿಂದ ಲಿವರ್ ಪೂಲ್ 2-0 ಅಂತರ ಮುನ್ನಡೆ ಪಡೆದು, ಕೊನೆಗೆ ಅದೇ ಅಂತರದಲ್ಲಿ ಗೆದ್ದು ಕುಣಿದು ಕುಪ್ಪಳಿಸಿತು.

ಕಳೆದ ವರ್ಷದ ಅಂತಿಮ ಹಣಾಹಣಿಯಲ್ಲಿ ರಿಯಲ್ ಮ್ಯಾಡ್ರಿಡ್ ವಿರುದ್ಧ ಮತ್ತು ಪ್ರಿಮಿಯರ್ ಲೀಗ್ ಪ್ರಶಸ್ತಿ ಸುತ್ತಿನಲ್ಲಿ ಮ್ಯಾಂಚೆಸ್ಟರ್ ಸಿಟಿ ವಿರುದ್ಧ ಲಿವರ್ ಪೂಲ್ ಸೋಲು ಕಂಡಿತ್ತು. ಆದರೆ. ಈ ಬಾರಿ ಗೆಲುವಿನ ಮೂಲಕ ಜಾರ್ಗನ್ ಕ್ಲೋಪ್ ನೇತೃತ್ವದ ಲಿವರ್ ಪೂಲ್ ದಾಖಲೆ ಬರೆದಿದೆ.



1977, 1978, 1981, 1984 ಹಾಗೂ 2005ರಲ್ಲಿ ಲಿವರ್‌ಪೂಲ್ ತಂಡವು ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಗೆದ್ದಿದೆ. 6ನೇ ಬಾರಿ ಕಪ್ ಎತ್ತಿ ಹಿಡಿದ ಲಿವರ್ ಪೂಲ್ ತಂಡಕ್ಕೆ ಅಭಿಮಾನಿಗಳು ಸಂಭ್ರಮದಿಂದ ಶುಭ ಹಾರೈಸಿದ್ದಾರೆ. ಇನ್ನು ಸ್ಟಾರ್ ಆಟಗಾರ ಸಲಾ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.

Story first published: Sunday, June 2, 2019, 12:18 [IST]
Other articles published on Jun 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X