Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತುರ್ಕಮೆನಿಸ್ತಾನ್‌ನಲ್ಲಿ ಫುಟ್ಬಾಲ್ ಪಂದ್ಯ ವೀಕ್ಷಿಸಿದ 500 ಅಭಿಮಾನಿಗಳು

Turkmenistan Football Season Restarts With Crowds

ಅಶ್ಗಾಬತ್, ಏಪ್ರಿಲ್ 20: ಸೆಂಟ್ರಲ್ ಏಷ್ಯನ್ ರಾಷ್ಟ್ರದಲ್ಲಿ ತಾತ್ಕಾಲಿಕವಾಗಿ ರದ್ದಾಗಿದ್ದ ದೇಸಿ ಫುಟ್ಬಾಲ್‌ ಲೀಗ್‌ ಅನ್ನು ಪುನರಾರಂಭಿಸಿದೆ. ಹೀಗಾಗಿ ತುರ್ಕಮೆನಿಸ್ತಾನ್‌ನಲ್ಲಿ ನಡೆದ ಫುಟ್ಬಾಲ್‌ ಪಂದ್ಯವೊಂದನ್ನು ಸುಮಾರು 500 ಜನ ಅಭಿಮಾನಿಗಳು ಸ್ಟೇಡಿಯಂನಲ್ಲಿದ್ದು ವೀಕ್ಷಿಸಿದರು.

ತುರ್ಕಮೆನಿಸ್ತಾನ್‌ನ ಅಶ್ಗಾಬತ್‌ನಲ್ಲಿ ಭಾನುವಾರ ನಡೆದ ಆಲ್ಟಿನ್ ಅಸಿರ್ ಮತ್ತು ಕೊಪೆಟ್‌ಡಾಗ್ ನಡುವಿನ ಪಂದ್ಯದ ವೇಳೆ 500 ಪ್ರೇಕ್ಷಕರು ಉಪಸ್ಥಿತರಿದ್ದರು. ಅಶ್ಗಾಬತ್‌ನಲ್ಲಿರುವ ಈ ಸ್ಟೇಡಿಯಂನ ಸಾಮರ್ಥ್ಯ ನಿಜಕ್ಕೂ 20,000. ಆದರೆ ಕೊರೊನಾವೈರಸ್‌ನಿಂದ ರದ್ದಾಗ ಟೂರ್ನಿ ಪುನರಾರಂಭವಾಗಿದ್ದರಿಂದ ಭಾನುವಾರ 500 ಮಂದಿಯಷ್ಟೇ ಪಂದ್ಯ ವೀಕ್ಷಿಸಿದರು.

ತುರ್ಕಮೆನಿಸ್ತಾನ್‌ ದೇಸಿ ಫುಟ್ಬಾಲ್ ಟೂರ್ನಿಯಾದ ಯೋಕರಿ ಲಿಗಾ ಮಾರ್ಚ್ 24ರಂದು ನಿಲ್ಲಿಸಲ್ಪಟ್ಟಿತ್ತು. ಮಾರಕ ಕೊರೊನಾವೈರಸ್ ಸೋಂಕಿನ ಕಾರಣ ವಿಶ್ವದಾದ್ಯಂತ ಕ್ರೀಡಾಸ್ಪರ್ಧೆಗಳು ರದ್ದಾದಾಗ ಎಂಟು ತಂಡಗಳ ಲೀಗ್ ಯೋಕರಿ ಲಿಗಾ ಕೂಡ ರದ್ದಾಗಿತ್ತು.

ಇಂಥ ದೇಸಿ ಟೂರ್ನಿಗಳಿಗೆ ತುರ್ಕಮೆನಿಸ್ತಾನ್‌ ನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಸೇರುತ್ತಾರೆ. ಪ್ರವೇಶಾತಿ ಉಚಿತವಾಗಿರುವುದರಿಂದ ಸಹಜವಾಗೇ ದೊಡ್ಡ ಸಂಖ್ಯೆಯ ಅಭಿಮಾನಿಗಳು ನೆರೆಯುತ್ತಾರೆ. ಅಂದ್ಹಾಗೆ ಭಾನುವಾರದ ಪಂದ್ಯದಲ್ಲಿ ಆಲ್ಟಿನ್ ಅಸಿರ್ ಮತ್ತು ಕೊಪೆಟ್‌ಡಾಗ್ 1-1ರ ಸಮಬಲ ಸಾಧಿಸಿದ್ದವು.

Story first published: Monday, April 20, 2020, 12:18 [IST]
Other articles published on Apr 20, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+