ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಆಸ್ಟ್ರೇಲಿಯಾ ಪ್ರವಾಸಕ್ಕೆ 23 ಸದಸ್ಯರ ತಂಡವನ್ನು ಹೆಸರಿಸಿದ ಹಾಕಿ ಇಂಡಿಯಾ

Hockey India Announced Harmanpreet Singh Led 23 Member Mens Squad For Australia Tour

ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಹಾಕಿ ಇಂಡಿಯಾ ಅನುಭವಿ ಡ್ರ್ಯಾಗ್‌ಫ್ಲಿಕ್ಕರ್ ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದಲ್ಲಿ 23 ಸದಸ್ಯರ ತಂಡವನ್ನು ಹೆಸರಿಸಿದೆ. ಮುಂದಿನ ವರ್ಷದಲ್ಲಿ ನಡೆಯಲಿರುವ ಪುರುಷರ ಹಾಕಿ ವಿಶ್ವಕಪ್‌ಗೆ ಸಿದ್ಧತೆಯ ಭಾಗವಾಗಿ ಈ ಪ್ರವಾಸ ಕೈಗೊಳ್ಳಲಾಗುತ್ತಿದೆ.

ನವೆಂಬರ್ 26ರಿಂದ ಅಡಿಲೇಡ್‌ನಲ್ಲಿ 5 ಪಂದ್ಯಗಳ ಹಾಕಿ ಸರಣಿಯನ್ನು ಆಡಲಿದೆ. ಹಾಕಿ ವಿಶ್ವಕಪ್ ಟೂರ್ನಿ 2023ರ ಜನವರಿ 13 ರಿಂದ 29 ರವರೆಗೆ ನಡೆಯಲಿದೆ. ಭಾರತದ ಭುವನೇಶ್ವರ ಮತ್ತು ರೊರ್ಕೆಲಾದಲ್ಲಿ ಈ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗುತ್ತಿದೆ. ಹರ್ಮನ್‌ಪ್ರೀತ್ ಸಿಂಗ್ ಭಾರತದ ಪುರುಷರ ಹಾಕಿ ತಂಡಕ್ಕೆ ನಾಯಕನಾದರೆ, ಅಮಿತ್ ರೋಹಿದಾಸ್ ಉಪನಾಯಕರನ್ನಾಗಿ ನೇಮಿಸಲಾಗಿದೆ.

ಮುಂಬರುವ ವಿಶ್ವಕಪ್‌ನಲ್ಲಿ ಅಗ್ರ ತಂಡಗಳ ವಿರುದ್ಧ ನಮ್ಮ ಸಾಮರ್ಥ್ಯ ಪರೀಕ್ಷಿಸಿಕೊಳ್ಳಲು ಆಸ್ಟ್ರೇಲಿಯಾ ಪ್ರವಾಸ ನಮಗೆ ಉತ್ತಮ ಅವಕಾಶವಾಗಿದೆ ಎಂದು ಭಾರತ ಹಾಕಿ ತಂಡದ ಮುಖ್ಯ ಕೋಚ್ ಗ್ರಹಾಂ ರೀಡ್ ತಿಳಿಸಿದ್ದಾರೆ.

ICC ಟ್ರೋಫಿ ಗೆಲ್ಲಲು ಟೀಂ ಇಂಡಿಯಾ ಪದೇ ಪದೇ ವಿಫಲ: MS ಧೋನಿ ಮೊರೆ ಹೋದ ಬಿಸಿಸಿಐ: ವರದಿICC ಟ್ರೋಫಿ ಗೆಲ್ಲಲು ಟೀಂ ಇಂಡಿಯಾ ಪದೇ ಪದೇ ವಿಫಲ: MS ಧೋನಿ ಮೊರೆ ಹೋದ ಬಿಸಿಸಿಐ: ವರದಿ

"ನಿರೀಕ್ಷಿತ ಫಲಿತಾಂಶಗಳನ್ನು ಪಡೆಯಲು ನಾವು ವಿಶ್ವಾಸವಿಟ್ಟಿರುವ ಅನುಭವಿ ಆಟಗಾರರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡಿದ್ದೇವೆ. ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ಉತ್ತಮ ಸ್ಪರ್ಧೆ ನೀಡಲು, ನಮ್ಮ ತಂಡದ ಸಾಮರ್ಥ್ಯವನ್ನು ಪ್ರದರ್ಶಿಸಲು, ಯುವಕರು ಮತ್ತು ಹಿರಿಯ ಆಟಗಾರರು ಸಂಯೋಜನೆ ಮಾಡಿದ್ದೇವೆ" ಎಂದು ಅವರು ಹೇಳಿದ್ದಾರೆ.

Hockey India Announced Harmanpreet Singh Led 23 Member Mens Squad For Australia Tour

ತಂಡಕ್ಕೆ ಮರಳಿದ ವರುಣ್ ಕುಮಾರ್

ಫಾರ್ವರ್ಡ್ ಲೈನ್‌ನಲ್ಲಿ ಮನ್‌ದೀಪ್ ಸಿಂಗ್ ಜೊತೆಯಲ್ಲಿ ದಿಲ್‌ಪ್ರೀತ್ ಸಿಂಗ್, ಅಭಿಷೇಕ್ ಮತ್ತು ಸುಖಜೀತ್ ಸಿಂಗ್‌ರನ್ನು ಆಯ್ಕೆ ಮಾಡಲಾಗಿದೆ.

ಮಿಡ್‌ಫೀಲ್ಡ್ ವಿಭಾಗದಲ್ಲಿ ಗುರ್ಜಂತ್ ಸಿಂಗ್, ಆಕಾಶದೀಪ್ ಸಿಂಗ್, ಮೊಹಮ್ಮದ್ ರಹೀಲ್ ಮೌಸೀನ್, ರಾಜ್‌ಕುಮಾರ್ ಪಾಲ್, ನೀಲಕಂಠ ಶರ್ಮಾ, ಶಂಶೇರ್ ಸಿಂಗ್, ಹಾರ್ದಿಕ್ ಸಿಂಗ್, ಮನ್‌ಪ್ರೀತ್ ಸಿಂಗ್ ಮತ್ತು ಸುಮಿತ್ ಅವರನ್ನು ಆಯ್ಕೆ ಮಾಡಲಾಗಿದೆ. ರಕ್ಷಣಾ ವಿಭಾಗದಲ್ಲಿ ವರುಣ್ ಕುಮಾರ್ ತಂಡದಲ್ಲಿ ಮರಳಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದಲ್ಲಿ ಭಾರತ ತಂಡ ಇತ್ತೀಚೆಗೆ ನಡೆದ ಎಫ್‌ಐಎಚ್ ಪ್ರೊ ಲೀಗ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಸ್ಪೇನ್ ವಿರುದ್ಧ 1-1 ಅಂತರದಲ್ಲಿ ಡ್ರಾ ಮಾಡಿಕೊಂಡಿತು.

ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಹಾಕಿ ತಂಡ

ಗೋಲ್‌ಕೀಪರ್‌ಗಳು: ಕ್ರಿಶನ್ ಬಹದ್ದೂರ್ ಪಾಠಕ್, ಶ್ರೀಜೇಶ್ ಪರಟ್ಟು ರವೀಂದ್ರನ್.

ಡಿಫೆಂಡರ್‌ಗಳು: ಜರ್ಮನ್‌ಪ್ರೀತ್ ಸಿಂಗ್, ಸುರೇಂದರ್ ಕುಮಾರ್, ಹರ್ಮನ್‌ಪ್ರೀತ್ ಸಿಂಗ್ (ನಾಯಕ), ಅಮಿತ್ ರೋಹಿದಾಸ್ (ಉಪನಾಯಕ), ಜುಗರಾಜ್ ಸಿಂಗ್, ಮನ್‌ದೀಪ್ ಮೋರ್, ನಿಲಮ್ ಸಂಜೀಪ್ ಕ್ಸೆಸ್, ವರುಣ್ ಕುಮಾರ್

ಮಿಡ್‌ಫೀಲ್ಡರ್ಸ್: ಸುಮಿತ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ಶಂಶೇರ್ ಸಿಂಗ್, ನೀಲಕಂಠ ಶರ್ಮಾ, ರಾಜ್‌ಕುಮಾರ್ ಪಾಲ್, ಮೊಹಮ್ಮದ್ ರಹೀಲ್ ಮೌಸೀನ್, ಆಕಾಶದೀಪ್ ಸಿಂಗ್, ಗುರ್ಜಂತ್ ಸಿಂಗ್

ಫಾರ್ವರ್ಡ್ಸ್ ವಿಭಾಗ : ಮನ್‌ದೀಪ್ ಸಿಂಗ್, ಅಭಿಷೇಕ್, ದಿಲ್‌ಪ್ರೀತ್ ಸಿಂಗ್, ಸುಖಜೀತ್ ಸಿಂಗ್.

Story first published: Tuesday, November 15, 2022, 17:04 [IST]
Other articles published on Nov 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X