ಜೂನ್ 23ರಂದು ಭಾರತ- ಪಾಕಿಸ್ತಾನ ಮುಖಾಮುಖಿ

Posted By:
India vs Pakistan in Champions Trophy opener

ನವದೆಹಲಿ, ಮಾರ್ಚ್ 15 : ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವೆ ಜೂನ್ 23ರಂದು ಪಂದ್ಯ ನಿಗದಿಯಾಗಿದೆ.

ನೆದರ್ಲೆಂಡ್ಸ್ ನ ಬ್ರೆಡಾದಲ್ಲಿ ಪುರುಷರ ಹಾಕಿ ಪಂದ್ಯ ನಡೆಯಲಿದೆ. ಜೂನ್ 23 ರಿಂದ ಜುಲೈ 1ರ ತನಕ ಟೂರ್ನಮೆಂಟ್ ಆಯೋಜನೆಗೊಂಡಿದೆ.

ಯುರೋಪಿಯನ್ ಚಾಂಪಿಯನ್ ನೆದರ್ಲೆಂಡ್ಸ್, ಒಲಿಂಪಿಕ್ ಚಿನ್ನದ ಪದಕ ವಿಜೇತ ಅರ್ಜೆಂಟೀನಾ, ವಿಶ್ವವಿಜೇತ ಆಸ್ಟ್ರೇಲಿಯಾ ತಂಡಗಳು ನೇರವಾಗಿ ಅರ್ಹತೆ ಪಡೆದುಕೊಂಡಿವೆ.

ಪಾಕಿಸ್ತಾನ ವಿರುದ್ಧದ ಪಂದ್ಯ ನಂತರ, ಭಾರತವು ಅರ್ಜೆಂಟೀನಾ ವಿರುದ್ಧ ಜೂನ್ 24ರಂದು ಸೆಣೆಸಲಿದೆ. ಜೂನ್ 27ರಂದು ಆಸ್ಟ್ರೇಲಿಯಾ ಹಾಗೂ ಜೂನ್ 28ರಂದು ಬೆಲ್ಜಿಯಂ ತಂಡವನ್ನು ಎದುರಿಸಲಿದೆ. ಜೂನ್ 25 ವಿಶ್ರಾಂತಿ ದಿನವಾಗಿದ್ದು, ಜುಲೈ 01ರಂದು ಫೈನಲ್ ನಿಗದಿಯಾಗಿದೆ.

Story first published: Thursday, March 15, 2018, 21:15 [IST]
Other articles published on Mar 15, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ