ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

Hockey World Cup 2023: ಹಾಕಿ ವಿಶ್ವಕಪ್ ಪಂದ್ಯಾವಳಿಗೆ ಅದ್ಧೂರಿ ಚಾಲನೆ

Hockey World Cup 2023: Bollywood Star And K-Pop Band Blackswan Shines In Opening Ceremony

ಹಾಕಿ ವಿಶ್ವಕಪ್ 2023 ಪಂದ್ಯಾವಳಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಕಟಕ್‌ನ ಬಾರಾಬತಿ ಸ್ಟೇಡಿಯಂನಲ್ಲಿ ನೆರೆದಿದ್ದ 40 ಸಾವಿರ ಹಾಕಿ ಅಭಿಮಾನಿಗಳನ್ನು, ಬಾಲಿವುಡ್ ಸೂಪರ್ ಸ್ಟಾರ್ ಗಳು, ಕೆ-ಪಾಪ್ ಬ್ಯಾಂಡ್ ಬ್ಲ್ಯಾಕ್‌ಸ್ವಾನ್‌, ನಟಿ ದಿಶಾ ಪಟಾಣಿ ಸೇರಿದಂತೆ ಹಲವರು ರಂಜಿಸಿದರು.

ಇದು ಎರಡನೇ ಬಾರಿಗೆ ಭಾರತ ಹಾಕಿ ವಿಶ್ವಕಪ್‌ನ ಆತಿಥ್ಯ ವಹಿಸುತ್ತಿದೆ. 2023ರ ಹಾಕಿ ವಿಶ್ವಕಪ್‌ ಅನ್ನು ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಿದೆ. ಬಾಲಿವುಡ್ ಸೂಪರ್ ಸ್ಟಾರ್ ರಣವೀರ್ ಸಿಂಗ್ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು.

ಗಾಯಕ ಪ್ರೀತಮ್ ತನ್ನ ಸಹ ಕಲಾವಿದರೊಂದಿಗೆ ಕಟಕ್‌ನ ಬಾರಾಬತಿ ಸ್ಟೇಡಿಯಂನಲ್ಲಿ ಪ್ರದರ್ಶನ ನೀಡಿದರು. ಬಾಲಿವುಡ್ ನಟಿ ದಿಶಾ ಪಟಾಣಿ ಕೂಡ ನೃತ್ಯ ಪ್ರದರ್ಶನ ನೀಡಿದರು. ಇದಲ್ಲದೆ ಕೊರಿಯಾದ ಖ್ಯಾತ ಪಾಪ್ ಬ್ಯಾಂಡ್ ಬ್ಲ್ಯಾಕ್‌ಸ್ವಾನ್‌ ಉದ್ಘಾಟನಾ ಸಮಾರಂಭದ ಪ್ರಮುಖ ಆಕರ್ಷಣೆಯಾಗಿತ್ತು.

Hockey World Cup 2023: Bollywood Star And K-Pop Band Blackswan Shines In Opening Ceremony

2023 ರ ಹಾಕಿ ವಿಶ್ವಕಪ್‌ನ ಅಧಿಕೃತ ಗೀತೆಯನ್ನು ಲೈವ್ ಮಾಡಲಾಗಿದೆ. ಗಾಯಕರಾದ ಬೆನ್ನಿ ದಯಾಳ್, ನೀತಿ ಮೋಹನ್, ಲೀಸಾ ಮಿಶ್ರಾ, ನಕಾಶ್ ಅಜಿ ಇತರ ಸದಸ್ಯರ ಜೊತೆ ಹಾಡಿನ ಬರಹಗಾರ ಮತ್ತು ಸಂಯೋಜಕ ಪ್ರೀತಮ್ ಈ ಗೀತೆಯನ್ನು ಪ್ರಸ್ತುತ ಪಡಿಸಿದರು.

ಇಡೀ ಹಾಕಿ ವಿಶ್ವಕಪ್ ಪಂದ್ಯಾವಳಿ ಭುವನೇಶ್ವರದ ಕಳಿಂಗ ಸ್ಟೇಡಿಯಂ ಮತ್ತು ವಿಶ್ವದ ದೊಡ್ಡ ಹಾಕಿ ಕ್ರೀಡಾಂಗಣ ರೂರ್ಕೆಲಾದ ಬಿರ್ಸಾ ಮುಂಡಾ ಅಂತರಾಷ್ಟ್ರೀಯ ಹಾಕಿ ಸ್ಟೇಡಿಯಂನಲ್ಲಿ ನಡೆಯಲಿವೆ. ವಿಶ್ವಕಪ್ ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸಲಿವೆ. ಜನವರಿ 13ರಿಂದ ಗುಂಪು ಹಂತದ ಪಂದ್ಯಗಳು ನಡೆಯಲಿವೆ. ಜನವರಿ 29 ರಂದು ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.

Hockey World Cup 2023: Bollywood Star And K-Pop Band Blackswan Shines In Opening Ceremony

16 ತಂಡಗಳು ವಿಶ್ವಕಪ್‌ನಲ್ಲಿ ಭಾಗಿ

ಅರ್ಜೆಂಟೀನಾ, ಆಸ್ಟ್ರೇಲಿಯಾ, ಬೆಲ್ಜಿಯಂ, ಚಿಲಿ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಭಾರತ, ಜಪಾನ್, ಕೊರಿಯಾ, ಮಲೇಷ್ಯಾ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಸ್ಪೇನ್ ಮತ್ತು ವೇಲ್ಸ್ 16 ತಂಡಗಳ ಪಟ್ಟಿಗೆ ಸೇರಿದ್ದು, ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುತ್ತಿವೆ.

ನಾಲ್ಕು ಗುಂಪುಗಳಲ್ಲಿ 16 ತಂಡಗಳನ್ನು ವಿಂಗಡಿಸಲಾಗಿದೆ. ಪೂಲ್ ಎ- ಅರ್ಜೆಂಟೀನಾ, ಆಸ್ಟ್ರೇಲಿಯಾ, ಫ್ರಾನ್ಸ್, ದಕ್ಷಿಣ ಆಫ್ರಿಕಾ. ಪೂಲ್ ಬಿ -ಬೆಲ್ಜಿಯಂ, ಜರ್ಮನಿ, ಜಪಾನ್, ಕೊರಿಯಾ, ಪೂಲ್ ಸಿ -
ಚಿಲಿ, ಮಲೇಷ್ಯಾ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ಪೂಲ್ ಡಿ - ಇಂಗ್ಲೆಂಡ್, ಭಾರತ, ಸ್ಪೇನ್, ವೇಲ್ಸ್ ತಂಡಗಳು ಸ್ಪರ್ಧಿಸಲಿವೆ.

ಡಿಡಿ ಸ್ಪೋರ್ಟ್ಸ್, ಹಾಟ್ ಸ್ಟಾರ್ ನಲ್ಲಿ ಲೈವ್

ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆ, ಮಧ್ಯಾಹ್ನ 3 ಗಂಟೆ, ಸಂಜೆ 5 ಮತ್ತು ಸಂಜೆ 7 ಗಂಟೆಗೆ ಪಂದ್ಯಗಳು ಆರಂಭವಾಗಲಿವೆ. 2023 ರ ಹಾಕಿ ವಿಶ್ವಕಪ್‌ ಪಂದ್ಯಗಳನ್ನು ಡಿಡಿ ಸ್ಪೋರ್ಟ್ಸ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ. ಟಿವಿಯಲ್ಲಿ ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ವೀಕ್ಷಿಸಬಹುದು ಮತ್ತು ಡಿಸ್ನಿ ಹಾಟ್‌ಸ್ಟಾರ್ ನಲ್ಲಿ ಕೂಡ ನೇರಪ್ರಸಾರ ವೀಕ್ಷಿಸಬಹುದಾಗಿದೆ.

Story first published: Wednesday, January 11, 2023, 22:08 [IST]
Other articles published on Jan 11, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X