ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹಾಕಿ ವಿಶ್ವಕಪ್ 2023: ಭಾರತೀಯ ಆಟಗಾರ ಹಾರ್ದಿಕ್ ಸಿಂಗ್‌ಗೆ ಗಾಯ, ವೇಲ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯ ಸಾಧ್ಯತೆ

Hockey World Cup 2023: Indian player Hardik Singh injured likely to miss game against Wales

ಹಾಕಿ ವಿಶ್ವಕಪ್‌ನ ಮೊದಲ ಎರಡು ಪಂದ್ಯಗಳಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಮೊದಲ ಪಂದ್ಯದಲ್ಲಿ ಸ್ಪೇನ್ ವಿರುದ್ಧ 2-0 ಅಂತರದಿಂದ ಭರ್ಜರಿ ಗೆಲುಚು ಸಾಧಿಸಿದ್ದು ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಡ್ರಾ ಸಾಧಿಸಿದೆ. ಇಂಗ್ಲೆಂಡ್ ವಿರುದ್ಧ ಗೋಲು ಗಳಿಸಲು ಕೆಲ ಅವಕಾಶಗಳನ್ನು ಸೃಷ್ಟಿಸಿಕೊಂಡಿದ್ದರೂ ಅದನ್ನು ಗೋಲಾಗಿಸಲು ಯಶಸ್ವಿಯಾಗಿರಲಿಲ್ಲ. ಹೀಗಾಘಿ ಗೆಲುವು ಸಾಧಿಸಲು ಸಾಧ್ಯವಾಗದಿದ್ದರೂ ತಂಡದ ಪ್ರದರ್ಶನ ಗಮನಸೆಳೆದಿತ್ತು.

ಇದೀಗ ಭಾರತ ತಂಡ ಮೂರನೇ ಪಂದ್ಯವನ್ನಾಡಲು ಸಜ್ಜಾಗುತ್ತಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಭಾರತೀಯ ತಂಡಕ್ಕೆ ಹಿನ್ನಡೆಯೊಂದು ಎದುರಾಗಿದೆ. ತಂಡದ ಮಿಡ್‌ಫೀಲ್ಡರ್ ಹಾರ್ದಿಕ್ ಸಿಂಗ್ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದಾರೆ. ಹೀಗಾಗಿ ಭಾರತದ ಅಂತಿಮ ಗ್ರೂಪ್ ಹಂತದ ಪಂದ್ಯದಲ್ಲಿ ಹಾರ್ದಿಕ್ ಸಿಂಗ್ ಆಡುವುದು ಅನುಮಾನವಾಗಿದೆ.

IND vs NZ: ಇದೀಗ ರಿಕಿ ಪಾಂಟಿಂಗ್, ವೀರೇಂದ್ರ ಸೆಹ್ವಾಗ್ ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿIND vs NZ: ಇದೀಗ ರಿಕಿ ಪಾಂಟಿಂಗ್, ವೀರೇಂದ್ರ ಸೆಹ್ವಾಗ್ ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿ

ಹಾರ್ದಿಕ್ ಸಿಂಗ್ ಅವರ ಗಾಯದ ತೀವ್ರತೆ ಕಂಡುಕೊಳ್ಳುವ ನಿಟ್ಟಿನಲ್ಲಿ ಎಂಆರ್‌ಐ ಸ್ಕ್ಯಾನಿಂಗ್‌ಗೆ ಒಂಗಾಗಿದ್ದಾರೆ. ಹೀಗಾಗಿ ಸ್ಕ್ಯಾನಿಂಗ್ ವರದಿಯನ್ನು ಆಧರಿಸಿ ಲಭ್ಯತೆಯ ಬಗ್ಗೆ ಮ್ಯಾನೇಜ್‌ಮೆಂಟ್ ನಿರ್ಧರಿಸಲಿದೆ. ಹಾಕಿ ಇಂಡಿಯಾ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿದ್ದು "ಎಂಆರ್‌ಐ ವರದಿಯ ಆಧಾರದಲ್ಲಿ ಮ್ಯಾನೇಜ್‌ಮೆಂಟ್ ಗಾಯದ ಬಗ್ಗೆ ಸ್ಒಷ್ಟತೆ ಪಡೆದುಕೊಳ್ಳಲಿದೆ. ಆ ಬಳಿಕವೇ ವೇಲ್ಸ್ ವಿರುದ್ಧದ ಪಂದ್ಯಕ್ಕೆ ಹಾರ್ದಿಕ್ ಸಿಂಗ್ ಲಭ್ಯತೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಈವರೆಗೆ ಬದಲಿ ಆಟಗಾರನ ಬೇಡಿಕೆ ಬಂದಿಲ್ಲ" ಎಂದು ಹಾಕಿ ಇಂಡಿಯಾ ಅಧಿಕೃತ ಮಾಹಿತಿ ನೀಡಿದೆ.

ರೂರ್ಕೆಲಾದಲ್ಲಿ ಇಂಗ್ಲೆಂಡ್ ವಿರುದ್ಧ ಆಡುತ್ತಿದ್ದಾಗ ಸಂದರ್ಭದಲ್ಲಿ ಹಾರ್ದಿಕ್ ಗಾಯಗೊಂಡಿದ್ದರು. 24ರ ಹರೆಯದ ಹಾರ್ದಿಕ್ ಭಾರತ ತಂಡದ ಪರವಾಗಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಭಾರತದ ಪರವಾಗಿ ಹಾರ್ದಿಕ್ ಒಂದು ಗೋಲು ಸಿಡಿಸಿದ್ದರು. ಈ ಪಂದ್ಯವನ್ನು 2-0 ಅಂತರದಿಂದ ಭಾರತ ಗೆದ್ದುಕೊಂಡಿತ್ತು.

ಭಾರತವು ಪ್ರಸ್ತುತ ಪೂಲ್ 'ಡಿ' ಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದು ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ. ಎರಡೂ ತಂಡಗಳು ಕೂಡ ಆಡಿರುವ ಎರಡು ಪಂದ್ಯಗಳಿಂದ ತಲಾ ನಾಲ್ಕು ಅಂಕಗಳನ್ನು ಹೊಂದಿವೆ. ಆದರೆ ಇಂಗ್ಲೆಂಡ್ ಹೆಚ್ಚು ಗೋಲು ಗಳಿಸಿರುವ ಆಧಾರದಲ್ಲಿ ಅಂಕಪಟ್ಟಿಯಲ್ಲಿ ಮುನ್ನಡೆಯಲ್ಲಿದೆ. ಗುರುವಾರ ನಡೆಯಲಿರುವ ಅಂತಿಮ ಪೂಲ್ ಪಂದ್ಯದಲ್ಲಿ ಇಂಗ್ಲೆಂಡ್ ಸ್ಪೇನ್ ವಿರುದ್ಧ ಆಡಲಿದ್ದು ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೆ ವೇಲ್ಸ್ ವಿರುದ್ಧದ ಪಂದ್ಯ ಭಾರತಕ್ಕೆ ನಿರ್ಣಾಯಕವಾಗಲಿದೆ. ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ತಂಡವು ಪೂಲ್ ಟೇಬಲ್‌ನಲ್ಲಿ ಅಗ್ರಸ್ಥಾನ ಪಡೆಯಲು ವೇಲ್ಸ್ ಅನ್ನು ಹೆಚ್ಚಿನ ಅಂತರದಿಂದ ಮಣಿಸಬೇಕಿದೆ.

Story first published: Tuesday, January 17, 2023, 15:54 [IST]
Other articles published on Jan 17, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X