ವನಿತಾ ಹಾಕಿ: ಚೀನಾ ವಿರುದ್ಧ ಭಾರತಕ್ಕೆ 3-1ರ ಗೆಲುವು

Posted By: Sadashiva
India beat China 3-1, remain unbeaten in womens Asian Champions Trophy

ಡೊಂಘೇ ಸಿಟಿ (ದಕ್ಷಿಣ ಕೊರಿಯಾ), ಮೇ 16: ಕೊರಿಯಾದಲ್ಲಿ ಬುಧವಾರ ನಡೆದ ವನಿತಾ ಹಾಕಿ 'ಏಷ್ಯನ್ ಚಾಂಪಿಯನ್ಸ್ ಟ್ರೋಫಿ' ಪಂದ್ಯಾವಳಿಯಲ್ಲಿ ಭಾರತ ತಂಡ ಚೀನಾ ತಂಡವನ್ನು 3-1 ಅಂತರದಿಂದ ಸೋಲಿಸಿ ಮುನ್ನಡೆ ಸಾಧಿಸಿದೆ.

ವಂದನಾ ಕಟಾರಿಯಾ 4 ಮತ್ತು 11ನೇ ನಿಮಿಷದಲ್ಲಿ ಸಿಡಿಸಿದ ಗೋಲು ಮತ್ತು ಗುರ್ಜಿತ್ ಕೌರ್ ಪೆನಾಲ್ಟಿ ಕಾರ್ನರ್ ನಲ್ಲಿ ಬಾರಿಸಿದ ಗೋಲ್ ನೆರವಿನಿಂದ ಹಾಕಿ ಅಗ್ರ ಸ್ಥಾನಿ ಚೀನಾವನ್ನು ಭಾರತ ಬಗ್ಗುಬಡಿಯಿತು.

ಈ ಜಯದೊಂದಿಗೆ ಭಾರತ ರ್ಯಾಂಕಿಂಗ್ ನಲ್ಲಿ ಕೊಂಚ ಮೇಲಕ್ಕೆ ಜಿಗಿಯುವ ನಿರೀಕ್ಷೆ ಮೂಡಿಸಿದೆ. ಆಡಿರುವ ಕೆಲವು ಪಂದ್ಯಗಳಲ್ಲಿ ಭಾರತ ಎರಡು ಗೆಲುವುಗಳನ್ನು ದಾಖಲಿಸಿದೆ. ಸದ್ಯ ವಿಶ್ವ ನಂ. 10ರಲ್ಲಿ ಭಾರತ ವನಿತಾ ಹಾಕಿ ತಂಡವಿದೆ.

ಗುರುವಾರ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಭಾರತ ಮಲೇಷ್ಯಾ ಎದುರು ಸೆಣಸಾಡಲಿದೆ. ಇನ್ನೊಂದು ಪಂದ್ಯದಲ್ಲಿ ಮಲೇಷ್ಯಾ ತಂಡವು ಜಪಾನ್ ತಂಡವನ್ನು 3-2 ಅಂತರದಿಂದ ಸೋಲಿಸಿ ಮುನ್ನಡೆ ಸಾಧಿಸಿದೆ.

ಚೀನಾ ಎದುರಿನ ಗೆಲುವಿಗೂ ಮುನ್ನ ಭಾರತ ತಂಡ ಜಪಾನ್ ತಂಡವನ್ನು 4-1 ಅಂತರದಿಂದ ಸೋಲಿಸಿ ಮುಂದುವರೆದಿದತ್ತು. ಈ ಪಂದ್ಯ ಪಂದ್ಯಾವಳಿಯ ಆರಂಭಿಕ ಪಂದ್ಯವಾಗಿತ್ತು.

Story first published: Wednesday, May 16, 2018, 17:40 [IST]
Other articles published on May 16, 2018
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ