ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹಾಕಿ ಇಂಡಿಯಾ ಲೀಗ್: ಭಾರತಕ್ಕೆ ಆಸೀಸ್ ಮೊದಲ ಎದುರಾಳಿ

ವರ್ಷಾಂತ್ಯಕ್ಕೆ ನಡೆಯಲಿರುವ ಹಾಕಿ ಇಂಡಿಯಾ ಲೀಗ್ ಪಂದ್ಯಾವಳಿಯಲ್ಲಿ ಭಾರತಕ್ಕೆ ಆಸೀಸ್ ಮೊದಲ ಎದುರಾಳಿ. ಡಿ. 1ರಿಂದ 10ರವರೆಗೆ ಒಡಿಶಾದ ಭುವನೇಶ್ವರದಲ್ಲಿ ನಡೆಯಲಿರುವ ಪ್ರತಿಷ್ಠಿತ ಟೂರ್ನಿ.

ನವದೆಹಲಿ, ಸೆಪ್ಟೆಂಬರ್ 7: ಇದೇ ವರ್ಷಾಂತ್ಯಕ್ಕೆ ನಡೆಯಲಿರುವ ವಿಶ್ವ ಹಾಕಿ ಲೀಗ್ ಫೈನಲ್ 2017ರ ಪಂದ್ಯಾವಳಿಯ ವೇಳಾಪಟ್ಟಿಯು ಗುರುವಾರ (ಸೆಪ್ಟೆಂಬರ್ 7) ಬಿಡುಗಡೆಯಾಗಿದ್ದು, ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಭಾರತದ ಹಾಕಿ ಕೋಚ್ ಸ್ಥಾನದಿಂದ ರೋಲಂಟ್ ಓಲ್ಟಮಸ್ ವಜಾಭಾರತದ ಹಾಕಿ ಕೋಚ್ ಸ್ಥಾನದಿಂದ ರೋಲಂಟ್ ಓಲ್ಟಮಸ್ ವಜಾ

ಈ ಟೂರ್ನಿಯನ್ನು ಗೆಲ್ಲುವ ಫೇವರಿಟ್ ತಂಡವಾಗಿ ಆಸ್ಟ್ರೇಲಿಯಾ ಹೊರಹೊಮ್ಮಿದೆ. ಆಸ್ಟ್ರೇಲಿಯಾ ತಂಡ ಬಿಟ್ಟರೆ, ಭಾರತ ತಂಡವೇ ಟೂರ್ನಿ ಗೆಲ್ಲುವ ಫೇವರಿಟ್ ತಂಡ ಎಂದೆನಿಸಿದೆ.

India face Australia in opener of Hockey World League final 2017 Odisha

ಟೂರ್ನಿಯಲ್ಲಿ ಎಂಟು ತಂಡಗಳು ಭಾಗಿಯಾಗಲಿದ್ದು, ಈ ಗುಂಪುಗಳನ್ನು 'ಎ' ಹಾಗೂ 'ಬಿ' ಎಂದು ವರ್ಗೀಕರಿಸಲಾಗಿದೆ. ಭಾರತ ತಂಡ, 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿದೆ.

'ಎ' ಗುಂಪಿನಲ್ಲಿ ಅರ್ಜೆಂಟೀನಾ (ಒಲಿಂಪಿಕ್ ವಿಜೇತ ತಂಡ), ಹಾಲೆಂಡ್ (ಯೂರೋಪಿಯನ್ ಟೂರ್ನಿ ಚಾಂಪಿಯನ್), ಬೆಲ್ಜಿಯಂ (ಒಲಿಂಪಿಕ್ ಕಂಚಿನ ಪದಕ ವಿಜೇತ ತಂಡ) ಹಾಗೂ ಸ್ಪೇನ್ ಇವೆ.

'ಬಿ' ಗುಂಪಿನಲ್ಲಿ ಆಸ್ಟ್ರೇಲಿಯಾ (ವಿಶ್ವ ಚಾಂಪಿಯನ್), ಭಾರತ, ಜರ್ಮನಿ ಹಾಗೂ ಇಂಗ್ಲೆಂಡ್ ತಂಡಗಳಿವೆ.

ಭಾರತ ತಂಡ ಇರುವ ಗುಂಪಿನ ಪಂದ್ಯಗಳು ಹಾಗೂ ನಿರ್ಣಾಯಕ ಪಂದ್ಯಗಳ ವೇಳಾಪಟ್ಟಿ ಹೀಗಿದೆ:

ದಿನಾಂಕ ಪಂದ್ಯ ಸಮಯ
ಡಿ. 1 ಭಾರತ ಮತ್ತು ಆಸ್ಟ್ರೇಲಿಯಾ ಸಂಜೆ 7:30ಕ್ಕೆ
ಡಿ. 2 ಭಾರತ ಮತ್ತು ಇಂಗ್ಲೆಂಡ್ ಸಂಜೆ 7:30ಕ್ಕೆ
ಡಿ. 4 ಭಾರತ ಮತ್ತು ಜರ್ಮನಿ ಸಂಜೆ 7:30ಕ್ಕೆ
ಡಿ. 6, 7 ಕ್ವಾರ್ಟರ್ ಫೈನಲ್
ಡಿ. 8, 9 ಸೆಮಿಫೈನಲ್
ಡಿ. 10 ಫೈನಲ್

Story first published: Wednesday, January 3, 2018, 10:15 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X