ಏಷ್ಯಾ ಕಪ್ ಹಾಕಿ: ಜಪಾನ್ ತಂಡವನ್ನು ಮಣಿಸಿದ ಭಾರತ

Posted By:

ಢಾಕಾ, ಅಕ್ಟೋಬರ್ 12 : ಪುರುಷರ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಜಪಾನ್ ವಿರುದ್ಧ ಭರ್ಜರಿ ಜಯಗಳಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

10ನೇ ಆವೃತ್ತಿಯ ಎ ಗುಂಪಿನ ಲೀಗ್ ನ ಮೊದಲ ಪಂದ್ಯದಲ್ಲಿ ಬುಧವಾರ ಜಪಾನ್ ತಂಡವನ್ನು ಭಾರತ 5-1 ಗೋಲ್ ಗಳಿಂದ ಮಣಿಸಿ ಟೂರ್ನಿಯಲ್ಲಿ ಜಯದ ನಗೆ ಬೀರಿತು.

India thrash Japan to start Asia Cup hockey campaign with a bang

ಭಾರತ ಪರ ಕೊಡಗಿನ ವೀರ ಎಸ್ ವಿ ಸುನೀಲ್, ಲಲಿತ್ ಉಪಾಧ್ಯಾಯ, ರಮಣ್ ದೀಪ್ ಸಿಂಗ್ ಮತ್ತು ಹರ್ಮನ್ ಪ್ರೀತ್ ಸಿಂಗ್ ಗೋಲು ಬಾರಿಸಿ ತಂಡದ ಗೆಲುವಿಗೆ ಕಾರಣರಾದರು.

ಇನ್ನು ಭಾರತ ತನ್ನ 2ನೇ ಪಂದ್ಯವನ್ನು ಆತಿಥೇಯ ಬಾಂಗ್ಲಾದೇಶ ವಿರುದ್ಧ ಅಕ್ಟೋಬರ್ 13ರಂದು ಆಡಲಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನದ ನಡುವಿನ ಬಹುನಿರೀಕ್ಷಿತ ಪಂದ್ಯ ಅಕ್ಟೋಬರ್ 15ರಂದು ನಡೆಯಲಿದೆ.

Story first published: Thursday, October 12, 2017, 8:49 [IST]
Other articles published on Oct 12, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ