ತವರಿಗೆ ಬಂದಿಳಿದ ಭಾರತ ಹಾಕಿ ತಂಡಕ್ಕೆ ಭವ್ಯ ಸ್ವಾಗತ

Posted By:

ನವದೆಹಲಿ, ಅಕ್ಟೋಬರ್ 23: ದಶಕದ ನಂತರ ಏಷ್ಯಾ ಕಪ್ ಹಾಕಿ ಟೂರ್ನಿಯ ಪ್ರಶಸ್ತಿ ಎತ್ತಿ ಹಿಡಿದ ಪುರುಷರ ಭಾರತ ಹಾಕಿ ತಂಡ ತವರಿಗೆ ಬಂದಿಳಿದಿದೆ.

ಭಾನುವಾರ ಸಂಜೆ ನಡೆದ ಫೈನಲ್ ಪಂದ್ಯದಲ್ಲಿ ಮನ್‌ಪ್ರೀತ್ ಸಿಂಗ್ ಬಳಗ ಮಲೇಷ್ಯಾವನ್ನು ಮಣಿಸಿ, ಸೋಮವಾರ ಢಾಕಾದಿಂದ ದೆಹಲಿಗೆ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಕ್ರೀಡಾ ಅಭಿಮಾನಿಗಳು ಭವ್ಯ ಸ್ವಾಗತ ಕೋರಿದರು.

ಹಾಕಿ: ಮೂರನೇ ಬಾರಿಗೆ ಏಷ್ಯಾ ಕಪ್ ಗೆದ್ದ ಭಾರತ ತಂಡ

ಆಟಗಾರರಿಗೆ ಹೂ ಮಾಲೆ ಹಾಕಿ ಭಾಜ ಭಜಂತ್ರಿಗಳ ಮೂಲಕ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.

Indian Hockey team arrives in Delhi after winning the Asia Cup Hockey

ಇದೇ ವೇಳೆ ಭಾರತ ತಂಡದ ಸರ್ದಾರ್‌ ಸಿಂಗ್‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, 'ಈ ಟೂರ್ನಿಯಲ್ಲಿ ನಮ್ಮ ತಂಡ ಅಮೋಘ ವಿಜಯ ಸಾಧಿಸಿದೆ. ಇದು ಆಟಗಾರರಿಗೆ ಪ್ರೇರಣೆ' ಎಂದು ಸಂತಸ ವ್ಯಕ್ತಪಡಿಸಿದರು.

Indian Hockey team arrives in Delhi after winning the Asia Cup Hockey

ಭಾರತ ಹುಡುಗರು ಮಾಡಿದ ಸಾಧನೆ ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿ, ಅಭಿನಂದಿಸಿದ್ದಾರೆ. ಟೂರ್ನಿಯ ಇತಿಹಾಸದಲ್ಲಿ ಭಾರತ ಗಳಿಸಿದ ಮೂರನೇ ಪ್ರಶಸ್ತಿ ಇದಾಗಿದ್ದು, 2007ರಲ್ಲಿ ಭಾರತ ಪ್ರಶಸ್ತಿ ಎತ್ತಿ ಹಿಡಿದಿತ್ತು.

Story first published: Monday, October 23, 2017, 19:13 [IST]
Other articles published on Oct 23, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ