ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

2020ರಲ್ಲಿ 24ನೇ ಕೊಡವ ಕೌಟುಂಬಿಕ ಹಾಕಿ ಉತ್ಸವ

By ನಮ್ಮ ಪ್ರತಿನಿಧಿ
Kodava Hockey 2019 24th edition Kodava families

ಮಡಿಕೇರಿ, ಅಕ್ಟೋಬರ್ 28: 2020ರಲ್ಲಿ ನಡೆಯಲಿರುವ 24 ನೇ ಕೊಡವ ಕೌಟುಂಬಿಕ ಹಾಕಿ ಉತ್ಸವದ ಸಾರಥ್ಯವನ್ನು ಈ ಬಾರಿ ಅಪ್ಪಚೆಟ್ಟೋಳಂಡ ಕುಟುಂಬ ವಹಿಸಲಿದೆ. ಜಿಲ್ಲೆಯಲ್ಲಿ ಪ್ರತೀ ವರ್ಷ ನಡೆಯುವ ಕೊಡವ ಕೌಟುಂಬಿಕ ಹಾಕಿ ಕ್ರೀಡಾಕೂಟ ಹೆಸರುವಾಸಿ ಆಗಿದ್ದು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ನೂರಾರು ಕೊಡವ ಕ್ರೀಡಾ ಪಟುಗಳು ಹೊರಜಿಲ್ಲೆಗಳಿಂದಲೂ ಆಗಮಿಸುತ್ತಾರೆ.

2018 ರಲ್ಲಿ ನಡೆದಿದ್ದ ಈ ಕೌಟುಂಬಿಕ ಕ್ರೀಡಾಕೂಟದಲ್ಲಿ 317 ತಂಡಗಳು ಭಾಗವಹಿಸಿದ್ದು ಒಂದು ದಾಖಲೆಯೇ ಆಗಿತ್ತು. 1997 ರಲ್ಲಿ ಪಾಂಡಂಡ ಕುಟ್ಟಪ್ಪ ಅವರಿಂದ ಆರಂಭಗೊಂಡ ಈ ಕ್ರೀಡಾ ಕೂಟವು ಪ್ರತೀ ವರ್ಷವೂ ತಪ್ಪದೇ ನಡೆದಿದ್ದು ಕಳೆದ ವರ್ಷ ಭೀಕರ ಮಳೆ ಹಾಗೂ ಭುಕುಸಿತದ ಕಾರಣದಿಂದಾಗಿ ಸರಳವಾಗಿ ನಡೆಯಿತು.

Kodava Hockey 2019 24th edition Kodava families

ಇತ್ತೀಚೆಗೆ ಬೆಂಗಳೂರಿನ ಕಾವೇರಿಹಾಲ್‍ನಲ್ಲಿ ನಡೆದ ಅಪ್ಪಚೆಟ್ಟೋಳಂಡ ಕುಟುಂಬದ ಸಭೆಯಲ್ಲಿ 24 ನೇ ಹಾಕಿ ಉತ್ಸವದ ರೂಪುರೇಷಗಳ ಬಗ್ಗೆ ಚರ್ಚಿಸಲಾಗಿದ್ದು ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ನಿರ್ಧರಿಸಲಾಯಿತು. ಹಾಕಿ ಉತ್ಸವದ ಯಶಸ್ಸಿಗಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಸಹ ಸಂಚಾಲಕರಾಗಿ ಎ.ಕೆ.ನಾಚಪ್ಪ ಅವರು ನೇಮಕಗೊಂಡರು.

ಅಪ್ಪಚೆಟ್ಟೋಳಂಡ ಚರ್ಮಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಟುಂಬದ ಪ್ರಮುಖ ಮನುಮುತ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಕಿ ಹಬ್ಬದ ಯಶಸ್ಸಿಗೆ ಸರ್ವರ ಸಹಕಾರ ಅಗತ್ಯವೆಂದರು.

ಕೊಡಗಿನಲ್ಲಿ ಪ್ರತೀ ವರ್ಷ ಏಪ್ರಿಲ್‌ ಮೇ ತಿಂಗಳಿನಲ್ಲಿ ನಡೆಯುವ ಈ ಕೌಟುಂಬಿಕ ಹಾಕಿ ಉತ್ಸವ ಸಾವಿರಾರು ಜನರನ್ನು ಆಕರ್ಷಿಸುತ್ತಿದೆ ಅಷ್ಟೇ ಅಲ್ಲ ಲಿಮ್ಕ ಬುಕ್‌ ಆಫ್‌ ರೆಕಾರ್ಡ್ಸ್‌ ನಲ್ಲೂ ಸ್ಥಾನ ಪಡೆದಿದೆ. ಸುಮಾರು 40 ರಿಂದ 50 ದಿನಗಳ ಕಾಲ ನಡೆಯುವ ಈ ಕ್ರೀಡಾ ಕೂಟ ಸಾವಿರಾರು ಕ್ರೀಡಾ ಪ್ರೇಮಿಗಳಿಗೆ ರಸದೌತಣ ನೀಡುತ್ತಿದೆ.

Story first published: Monday, October 28, 2019, 11:42 [IST]
Other articles published on Oct 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X