ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ಮಿಂಚಿದ ಕೊಡಗಿನ ನಿಕ್ಕಿನ್ ತಿಮ್ಮಯ್ಯ

Nammura Pratibhe: Indian Hockey player Nikkin Thimmaiah life story and her achivement

ಹಾಕಿ ಕ್ರೀಡೆಗೆ ಕರ್ನಾಟಕ ಹಲವಾರ ಆಟಗಾರರನ್ನು ನೀಡಿದೆ. ರಾಷ್ಟ್ರೀಯ ತಂಡದ ಪರವಾಗಿ ಹಲವಾರು ಕನ್ನಡಿಗರು ಆಡಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ಅದರಲ್ಲೂ ಬಹುತೇಕರು ಕೊಡಗು ಮೂಲದವರು ಎಂಬುದು ಗಮನಾರ್ಹ. ತನ್ನ ಅದ್ಭುತ ಕೌಶಲ್ಯದ ಮೂಲಕ ಅದ್ಭುತ ಪ್ರದರ್ಶನದ ಮೂಲಕ ರಾಷ್ಟ್ರೀಯ ತಂಡದಲ್ಲಿ ಮಿಂಚಿದ ಕೊಡಗಿನ ಮತ್ತೋರ್ವ ಆಟಗಾರ ನಿಕ್ಕಿನ್ ತಿಮ್ಮಯ್ಯ.

ಕೊಡಗಿನ ಸಾಂಪ್ರದಾಯಿಕ ಟೂರ್ನಿಯಲ್ಲಿ ಆಡುತ್ತಾ ಬೆಳೆದ ನಿಕ್ಕಿನ್ ತಿಮ್ಮಯ್ಯ ನಂತರ ರಾಜ್ಯ ತಂಡದ ಪರವಾಗಿ ಆಡುತ್ತಾ ಮಿಂಚಿದರು. ನಂತರ ಭಾರತದ ರಾಷ್ಟ್ರೀಯ ತಂಡದ ಪರವಾಗಿಯೂ ಆಡುವ ಅವಕಾಶ ಗಳಿಸಿಕೊಂಡು ಮಿಂಚಿದ್ದಾರೆ ನಿಕ್ಕಿನ್. ಕನ್ನಡಿಗ ಈ ಹಾಕಿ ಆಟಗಾರ ನಡೆದು ಬಂದ ಹಾದಿ ಹೇಗಿತ್ತು? ಮುಂದೆ ಓದಿ..

ನಮ್ಮೂರ ಪ್ರತಿಭೆ: ಪಿಟಿ ಉಷಾ ದಾಖಲೆ ಮುರಿದು ಸಾಧನೆ ಮಾಡಿರುವ ವಿಶೇಷ ಪ್ರತಿಭೆ ಶರತ್ ಗಾಯಕ್ವಾಡ್ನಮ್ಮೂರ ಪ್ರತಿಭೆ: ಪಿಟಿ ಉಷಾ ದಾಖಲೆ ಮುರಿದು ಸಾಧನೆ ಮಾಡಿರುವ ವಿಶೇಷ ಪ್ರತಿಭೆ ಶರತ್ ಗಾಯಕ್ವಾಡ್

ಅಣ್ಣ ತಮ್ಮ ಇಬ್ಬರೂ ಹಾಕಿ ಆಟಗಾರರು

ಅಣ್ಣ ತಮ್ಮ ಇಬ್ಬರೂ ಹಾಕಿ ಆಟಗಾರರು

ನಿಕ್ಕಿನ್ ತಿಮ್ಮಯ್ಯ ಮಾತ್ರವಲ್ಲ ಅವರ ಸೋದರ ನಿತಿನ್ ತಿಮ್ಮಯ್ಯ ಕೂಡ ಹಾಕಿ ಕ್ರೀಡಾಪಟು. ಈ ಇಬ್ಬರಿಗೂ ಹಾಕಿ ಕೇವಲ ಕ್ರೀಡೆಯಾಲ್ಲ. ಕುಟುಂಬದ ಭಾಗವಾಗಿದ್ದ ಹಾಕಿ ರಕ್ತದಲ್ಲೇ ಬಂದಿತ್ತು. ಬಾಲ್ಯದಿಂದಲೇ ಜೊತೆಯಾಗಿ ಆಡಿಕೊಂಡು ಬಂದಿದ್ದ ಈ ಆಟಗಾರರು ಭರವಸೆ ಮುಡಿಸಿದ್ದರು. ಅದರಲ್ಲೂ ನಿಕ್ಕಿನ್ ತಮ್ಮ ಕೌಶಲ್ಯದಿಂದಾಗಿ ಭಾರತ ತಂಡದ ಒರವಾಗಿಯೂ ಆಡುವ ಅವಕಾಶ ಗಳಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ವಿದ್ಯಾಭ್ಯಾಸ, ಅಥ್ಲೀಟ್ ಆಗಿ ಮಿಂಚಿದ ನಿಕ್ಕಿನ್

ಬೆಂಗಳೂರಿನಲ್ಲಿ ವಿದ್ಯಾಭ್ಯಾಸ, ಅಥ್ಲೀಟ್ ಆಗಿ ಮಿಂಚಿದ ನಿಕ್ಕಿನ್

ನಿಕ್ಕಿನ್ ತಿಮ್ಮಯ್ಯ ತಮ್ಮ ಪದವಿಯನ್ನು ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಪಡೆದರು. ಹಾಕಿ ಆಟಗಾರನಾಗಿ ಸಾಧನೆ ಮಾಡುವ ಮೊದಲು ನಿಕ್ಕಿನ್ ಅಥ್ಲೀಟ್ ಆಗಿ ಮಿಂಚಿದ್ದಾರೆ. 400 ಮೀಟರ್ ಜೂನಿಯರ್ ಓಪನ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿ ಪದಕ ಗೆದೊದ್ದಾರೆ ನಿಕ್ಕಿನ್. ನಿಕ್ಕಿನ್ ಅವರ ತಂದೆ ಚೆಂಡಾಂಡ ಅಯ್ಯಣ್ಣ ಆರ್ಮಿ ಸರ್ವಿಸ್ ಕಾಪ್ಸ್ ತಂಡದ ಆಟಗಾರರಾಗಿದ್ದರು.

ಒಲಿಂಪಿಕ್ಸ್‌ನಲ್ಲಿ ಭಾರತದ ಪರ ಆಡಿರುವ ನಿಕ್ಕಿನ್

ಒಲಿಂಪಿಕ್ಸ್‌ನಲ್ಲಿ ಭಾರತದ ಪರ ಆಡಿರುವ ನಿಕ್ಕಿನ್

ಹಾಕಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುವ ನಿಕ್ಕಿನ್ ನಂತರ ಭಾರತ ತಂಡದಲ್ಲಿಯೂ ಸ್ಥಾನವನ್ನು ಪಡೆದುಕೊಂಡಿದ್ದಾರೆ. 2016ರಲ್ಲಿ ಭಾರತ ತಂಡವನ್ನು ರಿಯೋ ಒಲಿಂಪಿಕ್ಸ್ ಟೂರ್ನಿಯಲ್ಲಿ ಪ್ರತಿನಿಧಿಸಿದ್ದಾರೆ. ಇದಕ್ಕೂ ಮುನ್ನ 2014ರಲ್ಲಿ ಏಷ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿಯೂ ಪ್ರತಿನಿಧಿಸಿದ್ದಾರೆ. 2018ರಲ್ಲಿ ಹಾಕಿ ಕ್ರೀಡೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರ್ಕಾರ ನಿಕ್ಕಿನ್ ತಿಮ್ಮಯ್ಯ ಅವರಿಗೆ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

Story first published: Saturday, July 9, 2022, 21:58 [IST]
Other articles published on Jul 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X