PKL 2022: ತವರಿನ ಕೊನೆಯ ಪಂದ್ಯದಲ್ಲಿ ಆರ್ಭಟಿಸಲು ಸಜ್ಜಾದ ಬೆಂಗಳೂರು ಗೂಳಿಗಳು

ಪ್ರೊ ಕಬಡ್ಡಿ ಲೀಗ್ ಸೀಸನ್ 9 (ಪಿಕೆಎಲ್ 9) ನಲ್ಲಿ ಭಾನುವಾರ ಎರಡು ಪಂದ್ಯಗಳು ನಡೆಯಲಿವೆ. ಯಶಸ್ವಿಯಾಗಿ ಗೆಲುವಿನ ಓಟವನ್ನು ಮುಂದುವರೆಸಿರುವ ಬೆಂಗಳೂರು ಗೂಳಿಗಳು ಪಾಟ್ನಾ ಪೈರೇಟ್ಸ್ ತಂಡವನ್ನು ಎದುರಿಸಲಿವೆ. ಬೆಂಗಳೂರು ಬುಲ್ಸ್‌ಗೆ ಇದು ತವರಿನಲ್ಲಿ ಕೊನೆಯ ಪಂದ್ಯವಾಗಲಿದೆ. ಅಕ್ಟೋಬರ್ 26ರ ನಂತರ ಪಂದ್ಯಗಳು ಪುಣೆಯಲ್ಲಿ ನಡೆಯಲಿವೆ.

ಅಕ್ಟೋಬರ್ 23 ರಂದು ಎಲ್ಲಾ ಪಂದ್ಯಗಳು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸಂಜೆ 7:30 ರಿಂದ ಆರಂಭವಾಗಲಿವೆ. ಎರಡನೇ ಸ್ಪರ್ಧೆಯಲ್ಲಿ ಯುಪಿ ಯೋಧಾಸ್ ತಮಿಳು ತಲೈವಾಸ್ ವಿರುದ್ಧ ಸೆಣಸಲಿದೆ.

IND vs PAK: ಸರಿಯಾಗಿ 364 ದಿನಗಳ ಬಳಿಕ ಭಾರತ ವಿರುದ್ಧ ಮಂಕಾದ ದುಬೈ ಹೀರೋಗಳುIND vs PAK: ಸರಿಯಾಗಿ 364 ದಿನಗಳ ಬಳಿಕ ಭಾರತ ವಿರುದ್ಧ ಮಂಕಾದ ದುಬೈ ಹೀರೋಗಳು

ಕಳೆದ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಮೊದಲು ಹಿನ್ನಡೆ ಸಾಧಿಸಿದ್ದರೂ ದ್ವಿತೀಯಾರ್ಧದಲ್ಲಿ ತಿರುಗಿಬೀಳುವ ಮೂಲಕ ರೋಚಕವಾಗಿ ಪಂದ್ಯವನ್ನು ಗೆದ್ದಿದ್ದರು. ಸತತವಾಗಿ ಎರಡು ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಬೆಂಗಳೂರು ಗೂಳಿಗಳು ಅಂಕಪಟ್ಟಿಯಲ್ಲಿ ಜಿಗಿತ ಕಂಡಿದ್ದಾರೆ, ಸದ್ಯ 6 ಪಂದ್ಯಗಳಲ್ಲಿ ನಾಲ್ಕು ಜಯಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಕಳೆದ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಜಯಗಳಿಸಿದ ನಂತರ ಬೆಂಗಳೂರು ಬುಲ್ಸ್ ಸಹಜವಾಗಿಯೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಬುಲ್ಸ್ ಪರವಾಗಿ ಭರತ್ ಅತ್ಯದ್ಭುತ ಪ್ರದರ್ಶನ ನೀಡುತ್ತಿರುವುದು ತಂಡದ ಪ್ಲಸ್ ಪಾಯಿಂಟ್ ಆಗಿದೆ.

ಮತ್ತೊಂದೆಡೆ, ಕಳೆದ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ದಬಾಂಗ್ ಡೆಲ್ಲಿ ತಂಡವನ್ನು ಸೋಲಿಸುವ ಮೂಲಕ ಪಾಟ್ನಾ ಪೈರೇಟ್ಸ್ ತಮ್ಮ ಜಯದ ಖಾತೆಯನ್ನು ತರೆದಿದ್ದಾರೆ. ಆದರೂ, ಪಾಟ್ನಾ ಇದುವರೆಗೂ 6 ಪಂದ್ಯಗಳನ್ನು ಆಡಿದ್ದು, ಕೇವಲ ಒಂದು ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ.

ಬೆಂಗಳೂರು ಬುಲ್ಸ್ ಮತ್ತು ಪಾಟ್ನಾ ಪೈರೇಟ್ಸ್ ನಡುವೆ ಇದುವರೆಗೂ 19 ಪಂದ್ಯಗಳು ನಡೆದಿದ್ದು, 12 ಪಂದ್ಯಗಳಲ್ಲಿ ಜಯ ಸಾಧಿಸಿರುವ ಪಾಟ್ನಾ ಪೈರೇಟ್ಸ್ ಉತ್ತಮ ದಾಖಲೆ ಹೊಂದಿದೆ. ಬೆಂಗಳೂರು 5 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಎರಡು ಪಂದ್ಯಗಳು ಟೈನಲ್ಲಿ ಅಂತ್ಯಗೊಂಡಿದ್ದವು.

ಉಭಯ ತಂಡಗಳ ಆಟಗಾರರ ಪಟ್ಟಿ

ಬೆಂಗಳೂರು ಬುಲ್ಸ್

ರೈಡರ್ಸ್: ವಿಕಾಶ್ ಕಾಂಡೋಲಾ, ಹರ್ಮನ್ಜಿತ್ ಸಿಂಗ್, ನಾಗೇಶೋರ್ ತಾರು, ಲಾಲ್ ಮೊಹರ್ ಯಾದವ್, ನೀರಜ್ ನರ್ವಾಲ್, ಮೋರೆ ಜಿ ಬಿ, ಭರತ್

ಡಿಫೆಂಡರ್‌ಗಳು: ಸೌರಭ್ ನಂದಲ್, ಮಹೇಂದರ್ ಸಿಂಗ್, ಅಮನ್, ರಜನೇಶ್, ಯಶ್ ಹೂಡಾ, ಮಯೂರ್ ಜಗನ್ನಾಥ್ ಕದಮ್, ವಿನೋದ್ ಲಚ್ಮಯ್ಯ ನಾಯಕ್, ರೋಹಿತ್ ಕುಮಾರ್

ಆಲ್ ರೌಂಡರ್ಸ್: ರಾಹುಲ್ ಖಟಿಕ್, ಸಚಿನ್ ನರ್ವಾಲ್

ಪಾಟ್ನಾ ಪೈರೇಟ್ಸ್

ರೈಡರ್ - ಸಚಿನ್, ಅನುಜ್ ಕುಮಾರ್, ಮೋನು, ರಂಜಿತ್ ನಾಯಕ್, ರೋಹಿತ್, ಆನಂದ್ ತೋಮರ್, ಸುಶೀಲ್ ಗುಲಿಯಾ, ವಿಶ್ವಾಸ್ ಎಸ್

ಆಲ್ ರೌಂಡರ್ - ರೋಹಿತ್ ಗುಲಿಯಾ, ಮೊಹಮ್ಮದ್ರೇಜಾ ಚಿಯಾನೆ, ಸಜಿನ್ ಚಂದ್ರಶೇಖರ್, ಡೇನಿಯಲ್ ಒಡಿಯಾಂಬೊ, ಅಬ್ದುಲ್ ಎಸ್, ಸಾಗರ್ ಕುಮಾರ್, ಸಾಗರ್ ಕುಮಾರ್

ಡಿಫೆಂಡರ್ - ಸುನಿಲ್, ಮನೀಶ್, ನವೀನ್ ಶರ್ಮಾ, ನೀರಜ್ ಕುಮಾರ್, ಟಿ ಯುವರಾಜ್, ಶಿವಂ ಚೌಧರಿ

For Quick Alerts
ALLOW NOTIFICATIONS
For Daily Alerts
Story first published: Sunday, October 23, 2022, 15:48 [IST]
Other articles published on Oct 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X