ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

PKL 2022: ಜಯದ ಓಟ ಮುಂದುವರೆಸುವ ವಿಶ್ವಾಸದಲ್ಲಿ ಬೆಂಗಳೂರು ಗೂಳಿಗಳು

ಪ್ರೊ ಕಬಡ್ಡಿ ಲೀಗ್ ಸೀಸನ್ 9 (ಪಿಕೆಎಲ್ 9) ಪಂದ್ಯ 33 ರಲ್ಲಿ ಯು ಮುಂಬಾ ಬೆಂಗಳೂರು ಬುಲ್ಸ್ ವಿರುದ್ಧ ಸೆಣಸಲಿದೆ. ಯು ಮುಂಬಾ ತನ್ನ ಕೊನೆಯ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ಧ ಸೋತಿದೆ ಮತ್ತು ಇದುವರೆಗಿನ ನಾಲ್ಕು ಪಂದ್ಯಗಳಿಂದ ಎರಡು ಸೋಲುಗಳು ಮತ್ತು ಜಯ ದಾಖಲಿಸಿದೆ. ಎರಡನೇ ಸೀಸನ್‌ ಚಾಂಪಿಯನ್‌ಗಳಾದ ಯು ಮುಂಬಾ ಈ ಬಾರಿ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.

ಏಷ್ಯಾಕಪ್ 2023: ಪಾಕ್‌ಗೆ ಪ್ರಯಾಣಿಸದ ಭಾರತದ ನಿಲುವಿನ ಬಗ್ಗೆ ರೋಹಿತ್ ಶರ್ಮಾ ಪ್ರತಿಕ್ರಿಯೆಏಷ್ಯಾಕಪ್ 2023: ಪಾಕ್‌ಗೆ ಪ್ರಯಾಣಿಸದ ಭಾರತದ ನಿಲುವಿನ ಬಗ್ಗೆ ರೋಹಿತ್ ಶರ್ಮಾ ಪ್ರತಿಕ್ರಿಯೆ

ಅವರ ಅತ್ಯುತ್ತಮ ರೈಡರ್ ಗುಮನ್ ಸಿಂಗ್ ನಾಲ್ಕು ಪಂದ್ಯಗಳ ನಂತರ 28 ರೇಡ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ, ಅವರೊಬ್ಬರೆ ಯು ಮುಂಬಾ ಪರವಾಗಿ ಸದ್ಯ ಉತ್ತಮ ಫಾರ್ಮ್‌ನಲ್ಲಿರುವ ಆಟಗಾರ.

ಆಶಿಶ್ ಮತ್ತು ಜೈ ಭಗವಾನ್ ಈ ಋತುವಿನಲ್ಲಿ ತಲಾ 20 ಪಾಯಿಂಟ್‌ಗಳೊಂದಿಗೆ ಮುಂದಿನ ಅತ್ಯುತ್ತಮ ರೈಡರ್‌ಗಳಾಗಿದ್ದಾರೆ. 12 ಟ್ಯಾಕಲ್ ಪಾಯಿಂಟ್‌ಗಳನ್ನು ಹೊಂದಿರುವ ರಿಂಕು ಅವರ ಅಗ್ರ ರಕ್ಷಕ ಟ್ಯಾಕ್ಲರ್ ಆಗಿರುವುದರಿಂದ ಯು ಮುಂಬಾ ರಕ್ಷಣಾತ್ಮಕವಾಗಿ ಹೆಜ್ಜೆ ಇಡಬೇಕಾಗಿದೆ. ಸುರೀಂದರ್ ಸಿಂಗ್ ಮತ್ತು ಕಿರಣ್ ಮಗರ್ ಕ್ರಮವಾಗಿ ಎಂಟು ಮತ್ತು ಆರು ಟ್ಯಾಕಲ್ ಪಾಯಿಂಟ್‌ಗಳೊಂದಿಗೆ ಯು ಮುಂಬಾ ತಂಡದ ಅತ್ಯುತ್ತಮ ಡಿಫೆಂಡರ್‌ಗಳಾಗಿದ್ದಾರೆ.

ಜಯದ ವಿಶ್ವಾಸದಲ್ಲಿ ಗೂಳಿಗಳು

ಜಯದ ವಿಶ್ವಾಸದಲ್ಲಿ ಗೂಳಿಗಳು

ಆತಿಥೇಯ ಬೆಂಗಳೂರು ಬುಲ್ಸ್ ಇದುವರೆಗೂ ಮೂರು ಪಂದ್ಯಗಳನ್ನು ಗೆದ್ದು ಇನ್ನೆರಡು ಪಂದ್ಯಗಳಲ್ಲಿ ಸೋತಿದ್ದು ಸದ್ಯ ಗೆಲುವಿನ ಓಟವನ್ನು ಮುಂದುವರೆಸುವ ವಿಶ್ವಾಸದಲ್ಲಿದೆ. ಬೆಂಗಳೂರು ಬುಲ್ಸ್ ಪರವಾಗಿ ವಿಕಾಶ್ ಕಂಡೋಲ ಮತ್ತು ಭರತ್ ಅವರು ಇಲ್ಲಿಯವರೆಗೆ ತಂಡದ ಅಸಾಧಾರಣ ರೈಡರ್‌ಗಳಾಗಿರುವುದರಿಂದ ಹೆಚ್ಚಿನ ಜವಾಬ್ದಾರಿ ಅವರ ಹೆಗಲ ಮೇಲೆ ಬೀಳುತ್ತದೆ.

ಭರತ್ ಅವರು 42 ರೇಡ್ ಪಾಯಿಂಟ್‌ಗಳೊಂದಿಗೆ ತಮ್ಮ ಅತ್ಯುತ್ತಮ ಆಟಗಾರರಾಗಿದ್ದಾರೆ, ಕಾಂಡೋಲಾ ಸೀಸನ್ 9 ರಲ್ಲಿ 46 ರೇಡ್ ಪಾಯಿಂಟ್‌ಗಳನ್ನು ನಿರ್ವಹಿಸಿದ್ದಾರೆ. ಡಿಫೆನ್ಸ್‌ಗೆ ವಿಭಾಗದಲ್ಲಿ, ಸೌರಭ್ ನಂದಲ್ 14 ಟ್ಯಾಕಲ್ ಪಾಯಿಂಟ್‌ಗಳೊಂದಿಗೆ ತಂಡದ ರಕ್ಷಣಾ ವಿಭಾಗದಲ್ಲಿ ಮುನ್ನಡೆ ಹೊಂದಿದ್ದಾರೆ. ಅಮನ್ (11 ಟ್ಯಾಕಲ್ ಪಾಯಿಂಟ್) ಮತ್ತು ಮಹೇಂದರ್ ಸಿಂಗ್ (10 ಟ್ಯಾಕಲ್ ಪಾಯಿಂಟ್) ಕೂಡ ಪ್ರಭಾವ ಬೀರಿದ್ದಾರೆ.

India vs Pakistan: ಮೆಲ್ಬೋರ್ನ್ ಪಿಚ್‌ ಮೇಲೆ ಕೋಚ್ ರಾಹುಲ್ ದ್ರಾವಿಡ್ ರಣತಂತ್ರ

ತಲೈವಾಸ್ ವಿರುದ್ಧ ಆರ್ಭಟಿಸಿದ್ದ ಬುಲ್ಸ್

ತಲೈವಾಸ್ ವಿರುದ್ಧ ಆರ್ಭಟಿಸಿದ್ದ ಬುಲ್ಸ್

ತಮ್ಮ ಕೊನೆಯ ಪಂದ್ಯದಲ್ಲಿ, ಬೆಂಗಳೂರು ಬುಲ್ಸ್ ಈ ಸೀಸನ್‌ನಲ್ಲಿ ಮೂರನೇ ಜಯವನ್ನು ದಾಖಲಿಸಿತು, ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ತಮಿಳ್ ತಲೈವಾಸ್ ಅನ್ನು 45-28 ಅಂಕಗಳಿಂದ ಸೋಲಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿತು.

ಭರತ್ (12 ಅಂಕ), ವಿಕಾಶ್ ಕಾಂಡೋಲ (7 ಅಂಕ) ಮತ್ತು ನೀರಜ್ ನರ್ವಾಲ್ (5 ಅಂಕ) ಅವರ ಅದ್ಭುತ ಪ್ರದರ್ಶನದ ಮೂಲಕ ಎರಡು ಸೋಲುಗಳ ಸರಪಳಿಯನ್ನು ಯಶಸ್ವಿಯಾಗಿ ಕಳಚಿತ್ತು.

ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ಇದುವರೆಗೆ ಒಟ್ಟು 16 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಅದರಲ್ಲಿ ಯು ಮುಂಬಾ 12 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಬೆಂಗಳೂರು ಬುಲ್ಸ್ 4 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಬುಲ್ಸ್, ಮುಂಬಾ ತಂಡಗಳ ಆಟಗಾರರ ವಿವರ

ಬುಲ್ಸ್, ಮುಂಬಾ ತಂಡಗಳ ಆಟಗಾರರ ವಿವರ

ಯು ಮುಂಬಾ

ರೈಡರ್ಸ್: ಆಶಿಶ್, ಗುಮಾನ್ ಸಿಂಗ್, ಜೈ ಭಗವಾನ್, ಹೈದರಾಲಿ ಎಕ್ರಮಿ, ಅಂಕುಶ್, ಕಮಲೇಶ್, ಶಿವಂ, ಪ್ರಣಯ್ ವಿನಯ್ ರಾಣೆ, ಸಚಿನ್, ರೂಪೇಶ್

ಡಿಫೆಂಡರ್‌ಗಳು: ಸುರಿಂದರ್ ಸಿಂಗ್, ರಿಂಕು, ಶಿವಾಂಶ್ ಠಾಕೂರ್, ರಾಹುಲ್, ಪ್ರಿನ್ಸ್, ಕಿರಣ್ ಲಕ್ಷ್ಮಣ್ ಮಗರ್, ಹರೇಂದ್ರ ಕುಮಾರ್, ಸತ್ಯವಾನ್, ಮೋಹಿತ್

ಆಲ್ ರೌಂಡರ್: ಘೋಲಮಬ್ಬಾಸ್ ಕೊರೌಕಿ

ಬೆಂಗಳೂರು ಬುಲ್ಸ್

ರೈಡರ್ಸ್: ವಿಕಾಶ್ ಕಾಂಡೋಲಾ, ಹರ್ಮನ್ಜಿತ್ ಸಿಂಗ್, ನಾಗೇಶೋರ್ ತಾರು, ಲಾಲ್ ಮೊಹರ್ ಯಾದವ್, ನೀರಜ್ ನರ್ವಾಲ್, ಮೋರ್ ಜಿ ಬಿ, ಭರತ್

ಡಿಫೆಂಡರ್‌ಗಳು: ಸೌರಭ್ ನಂದಲ್, ಮಹೇಂದರ್ ಸಿಂಗ್, ಅಮನ್, ರಜನೇಶ್, ಯಶ್ ಹೂಡಾ, ಮಯೂರ್ ಜಗನ್ನಾಥ್ ಕದಮ್, ವಿನೋದ್ ಲಚ್ಮಯ್ಯ ನಾಯಕ್, ರೋಹಿತ್ ಕುಮಾರ್

ಆಲ್ ರೌಂಡರ್ಸ್: ರಾಹುಲ್ ಖಟಿಕ್, ಸಚಿನ್ ನರ್ವಾಲ್

Story first published: Saturday, October 22, 2022, 15:39 [IST]
Other articles published on Oct 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X