ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

PKL 2022: ಯು ಮುಂಬಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಯುಪಿ ಯೋಧಾಸ್

PKL 2022: UP Yoddhas Beat U Mumba By 38-28 Points In Vivo Pro Kabaddi Season 9

ಪ್ರೊ ಕಬಡ್ಡಿ ಲೀಗ್ ಸೀಸನ್ 9 ರಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರೆಸಿರುವ ಯುಪಿ ಯೋಧಾಸ್ ಯು ಮುಂಬಾ ತಂಡವನ್ನು 38-28 ಅಂಕಗಳಿಂದ ಸೋಲಿಸಿದೆ. ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಯುಪಿ ಯೋಧಾಸ್‌ನ ಪ್ರದೀಪ್ ನರ್ವಾಲ್ ಅತ್ಯುತ್ತಮ ಆಟ ಪ್ರದರ್ಶಿಸಿದರು.

ಆರಂಭದ ಕೆಲ ನಿಮಿಷಗಳಲ್ಲಿ ಉತ್ತಮವಾಗಿ ಆಡುವ ಮೂಲಕ ಯು ಮುಂಬಾ ಪಾಯಿಂಟ್‌ಗಳನ್ನು ಗಳಿಸಿಕೊಂಡಿತು. ಗುಮನ್ ಸಿಂಗ್‌ ಆರಂಭದಲ್ಲೇ ಯಶಸ್ವೀ ರೈಡ್ ಮಾಡುವ ಮೂಲಕ ತಂಡಕ್ಕೆ ಪಾಯಿಂಟ್ ತಂದುಕೊಟ್ಟರು. ಆದರೆ, ಯುಪಿ ಯೋಧಾಸ್‌ನ ಪ್ರದೀಪ್ ನರ್ವಾಲ್ ಉತ್ತಮವಾಗಿ ರೈಡ್ ಮಾಡುವ ಮೂಲಕ ಅಂಕಗಳನ್ನು ಗಳಿಸಿದರು.

ಪ್ರದೀಪ್ ನರ್ವಾಲ್ ಒಬ್ಬರೇ ಆರಂಭದಲ್ಲಿ ಏಕಾಂಗಿಯಾಗಿ ಹೋರಾಡಿದರು. ಸಹ ರೈಡರ್ ಗಳಾದ ತೋಮರ್ ಮತ್ತು ಸಂದೀಪ್ ನರ್ವಾಲ್ ಉತ್ತಮ ಪ್ರದರ್ಶನ ನೀಡಲಿಲ್ಲ. ಆದದೂ, ಆಟ ಆರಂಭವಾದ 9ನೇ ನಿಮಿಷದಲ್ಲಿ ಯುಪಿ ಯೋಧಾಸ್ ಅಂಕಗಳನ್ನು ಸಮಗೊಳಿಸುವಲ್ಲಿ ಯಶಸ್ವಿಯಾಯಿತು.

ನಂತರ ಎರಡೂ ತಂಡಗಳು ಸಮಬಲದಲ್ಲಿ ಕಾದಾಡಿದವು. ಉಭಯ ತಂಡಗಳು ಪಾಯಿಂಟ್‌ ಪಟ್ಟಿಯಲ್ಲಿ ಹೆಚ್ಚಿನ ಅಂತರವಾಗದಂತೆ ನೋಡೊಕೊಂಡವು. ಎರಡೂ ತಂಡಗಳು ಸತತವಾಗಿ ರನ್ ಗಳಿಸುವ ಮೂಲಕ ನೋಡುಗರಿಗೆ ಮನರಂಜನೆ ನೀಡಿದರು. ಮೊದಲಾರ್ಧದ ಅಂತ್ಯಕ್ಕೆ ಕೆಲವು ನಿಮಿಷಗಳಿರುವಾಗ ಯುಪಿ ಯೋಧಾಸ್‌ನ ಪರ್ದೀಪ್ ನರ್ವಾಲ್ ಸೂಪರ್ ರೈಡ್ ಮಾಡುವ ಮೂಲಕ ಮುನ್ನಡೆ ಸಾಧಿಸಿದರು.

PKL 2022: UP Yoddhas Beat U Mumba By 38-28 Points In Vivo Pro Kabaddi Season 9

ಎರಡೂ ತಂಡಗಳ ರೋಚಕ ಹೋರಾಟ

ನಿತೇಶ್ ಕುಮಾರ್ ಅತ್ಯುತ್ತಮ ಟ್ಯಾಕಲ್ ಮಾಡುವ ಮೂಲಕ ಮುನ್ನಡೆಯನ್ನು ಹೆಚ್ಚಿಸಿದರು. ಯುಪಿ ಯೋಧಾಸ್ ಮುನ್ನಡೆ ಸಾಧಿಸಿದ ಕೆಲವೇ ಕ್ಷಣಗಳಲ್ಲಿ ಯು ಮುಂಬಾ ತಂಡವನ್ನು ಆಲ್‌ ಔಟ್ ಮಾಡುವ ಮೂಲಕ 19-14ರಲ್ಲಿ ಮುನ್ನಡೆ ಸಾಧಿಸಿದರು.

ಗುಮಾನ್ ಅವರಿಗೆ ಸುರೀಂದರ್ ಸಿಂಗ್ ಮತ್ತು ಹೈದರಾಲಿ ಎಕ್ರಮಿ ಉತ್ತಮ ಬೆಂಬಲವನ್ನು ನೀಡಿದರು, ದ್ವಿತೀಯಾರ್ಧದ ಆರಂಭದಲ್ಲಿ ಯುಪಿ ಯೋಧಾಸ್‌ನ ಮುನ್ನಡೆಯನ್ನು ಕಡಿಮೆ ಮಾಡಿದರು. ಆದರೆ ಯು ಮುಂಬಾ ಕೂಡ ಉತ್ತಮವಾಗಿ ಹೋರಾಡುವ ಮೂಲಕ ಅಂಕಗಳ ನಡುವಿನ ಅಂತರವನ್ನು 22-20ಕ್ಕೆ ಕಡಿಮೆ ಮಾಡಿದರು. ತಿರುಗೇಟು ನೀಡುವ ಮೂಲಕ ಯು ಮುಂಬಾ ಯುಪಿ ಯೋಧಾಸ್ ಮೇಲೆ ಸಾಕಷ್ಟು ಒತ್ತಡ ಹೇರಿತು.

ಆದರೆ, ಸುಮಿತ್‌ ಅಮೋಘವಾದ ಟ್ಯಾಕಲ್ ಮಾಡುವ ಮೂಲಕ ಯುಪಿ ಯೋಧಾಸ್‌ಗೆ ಮುನ್ನಡೆಯನ್ನು ಸ್ವಲ್ಪ ಹೆಚ್ಚಿಸಿದರು. ಪರ್ದೀಪ್ ನರ್ವಾಲ್ ನಿರ್ಣಾಯಕ ರೈಡಿಂಗ್ ಅಂಕಗಳನ್ನು ಗಳಿಸುವ ಮೂಲಕ ಯುಪಿ ಯೋಧಾಸ್‌ ಮುನ್ನಡೆಯನ್ನು 10 ಅಂಕಗಳಿಗೆ ಹೆಚ್ಚು ಮಾಡಿದರು.

ಅಂತಿಮ ಕ್ಷಣದವರೆಗೂ ಯು ಮುಂಬಾ 10 ಅಂಕಗಳ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗುವ ಮೂಲಕ ಗೆಲುವಿನ ಓಟವನ್ನು ಮುಂದುವರೆಸಿದೆ.

Story first published: Friday, December 2, 2022, 23:06 [IST]
Other articles published on Dec 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X