ಪ್ರೊ ಕಬಡ್ಡಿ ಫೈನಲ್: ಪ್ರಶಸ್ತಿಗಾಗಿ ಗುಜರಾತ್ v/s ಪಟ್ನಾ ಕಾದಾಟ

Posted By:

ಚೆನ್ನೈ, ಅಕ್ಟೋಬರ್ 28 : ಐದನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಟೂರ್ನಿ ಅಂತಿಮ ಘಟ್ಟ ತಲುಪಿದ್ದು, ಇಂದು (ಶನಿವಾರ) ಫೈನಲ್ ಪಂದ್ಯ ನಡೆಯಲಿದೆ.

ಇದೇ ಮೊದಲ ಬಾರಿಗೆ ಪ್ರೊ ಕಬಡ್ಡಿಗೆ ಪ್ರವೇಶಿಸಿರುವ ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡ, ಪಟ್ನಾ ಪೈರೆಟ್ಸ್ ಎದುರು ಫೈನಲ್ ಪಂದ್ಯದಲ್ಲಿ ಕಾದಾಡಲಿದೆ.

Pro Kabaddi 2017 final: Gujarat Fortunegiants defence vs Patna Pirates

ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್‌ ಜೈಂಟ್ಸ್ ಚೊಚ್ಚಲ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ.

ಇನ್ನು ಎರಡು ಬಾರಿಯ ಚಾಂಪಿಯನ್ ಆಗಿರುವ ಪಟ್ನಾ ಪೈರೆಟ್ಸ್ ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. ಇದರಿಂದ ಫೈನಲ್ ಪಂದ್ಯ ಭಾರೀ ಕುತೂಹಲ ಕೆರಳಿಸಿದೆ.

ಬೆಂಗಾಲ್ ವಾರಿಯರ್ಸ್ ವಿರುದ್ಧದ ಒಂದನೇ ಕ್ವಾಲಿಫೈಯರ್ ಪಂದ್ಯದಲ್ಲಿ 42-17ರಿಂದ ಗೆದ್ದು ಫೈನಲ್‌ಗೆ ಪ್ರವೇಶಿಸಿದ ಗುಜರಾತ್ ಫಾರ್ಚೂನ್‌ ಜೈಂಟ್ಸ್ ಡಿಫೆಂಡರ್ ರೈಡಿಂಗ್ ಸೇರಿದಂತೆ ಎಲ್ಲದರಲ್ಲೂ ಬಲಿಷ್ಠ ತಂಡವಾಗಿದೆ.

ಇನ್ನು ಹ್ಯಾಟ್ರಿಕ್ ಚಾಂಪಿಯನ್ ಕನಸಿನಲ್ಲಿರುವ ಪಟ್ನಾ ಪೈರೇಟ್ಸ್ ಸಹ ಬಲಿಷ್ಠವಾಗಿದೆ. ಪಟ್ನಾದ ಪ್ರದೀಪ್ ನರ್ವಾಲ್ ಅಪಯಕಾರಿಯಾಗಿದ್ದು, ಯಾವ ಸಂದರ್ಭದಲ್ಲೂ ಆಕ್ರಮಣಕಾರಿ ಆಟಕ್ಕೆ ಇಳಿಯಬಲ್ಲರು.

ಎರಡೂ ತಂಡಗಳು ಸಮಬಲದಿಂದ ಕೂಡಿದ್ದು, ಕಬಡ್ಡಿ ಪ್ರಿಯರಿಗೆ ಈ ಪಂದ್ಯ ರಸದೌತಣ ಬಡಿಸಲಿದೆ.

ಪಂದ್ಯ ನಡೆಯುವ ಸಮಯ ಶನಿವಾರ ರಾತ್ರಿ 8ಕ್ಕೆ

Story first published: Saturday, October 28, 2017, 10:47 [IST]
Other articles published on Oct 28, 2017
Please Wait while comments are loading...