ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ 2019: ಸ್ಟೀಲರ್ಸ್‌ಗೆ ಶಾಕ್‌ ನೀಡಿ ಜಯದ ಹಾದಿ ಹಿಡಿದ ಟೈಟನ್ಸ್‌

Telugu Titans vs Haryana Steelers 2019

ಚೆನ್ನೈ, ಆಗಸ್ಟ್‌ 18: ಕೊನೆಗೂ ಮಿಂಚಿದ ಸ್ಟಾರ್‌ ರೇಡರ್‌ ಸಿದ್ಧಾರ್ಥ್‌ ದೇಸಾಯಿ, ತಮ್ಮ ಅದ್ಭುತ ರೇಡ್‌ಗಳ ಮೂಲಕ ತೆಲುಗು ಟೈಟನ್ಸ್‌ ತಂಡಕ್ಕೆ ಬಲಿಷ್ಠ ಹರಿಯಾಣ ಸ್ಟೀಲರ್ಸ್‌ ವಿರುದ್ಧ ಜಯ ತಂದುಕೊಡುವ ಮೂಲಕ ಪ್ರಸಕ್ತ ಸಾಲಿನ ಪ್ರೊ ಕಬಡ್ಡಿ ಲೀಗ್‌ನಲ್ಲಿ ಟೈಟನ್ಸ್‌ ಜಯದ ಹಾದಿ ಹಿಡಿಯುವಂತೆ ಮಾಡಿದರು.

ಪ್ರೊ ಕಬಡ್ಡಿ 2019: ಪಂದ್ಯಗಳು / ಫಲಿತಾಂಶ / ಅಂಕಪಟ್ಟಿ / ಹೆಚ್ಚಿನ ಮಾಹಿತಿ

ಕಳೆದ ವರ್ಷ ಯು ಮುಂಬಾ ತಂಡದ ಪರ ಅತ್ಯಧಿಯ ಅಂಕಗಳನ್ನು ಗಳಿಸಿದ ರೇಡರ್‌ ಆಗಿದ್ದ ಸಿದ್ದಾರ್ಥ್‌ ದೇಸಾಯಿ, ಈ ಬಾರಿ ಟೈಟನ್ಸ್‌ ಪರ ಆಡುತ್ತಿದ್ದು ಭಾನುವಾರ ನಡೆದ ಪಂದ್ಯದಲ್ಲಿ ಅಕ್ಷರಶಃ ಪ್ರಾಬಲ್ಯ ಮೆರೆದು ಏಕಾಂಗಿಯಾಗಿ 18 ಅಂಕಗಳಿಸಿ ಸ್ಟೀಲರ್ಸ್‌ ಎದುರು ಟೈಟನ್ಸ್‌ಗೆ 40-29 ಅಂಕಗಳ ಜಯ ತಂದುಕೊಟ್ಟರು.

ಪ್ರೊ ಕಬಡ್ಡಿ: ತಮಿಳ್ ತಲೈವಾಸ್ ವಿರುದ್ಧ ಬೆಂಗಳೂರು ಬುಲ್ಸ್‌ ಜಯಭೇರಿಪ್ರೊ ಕಬಡ್ಡಿ: ತಮಿಳ್ ತಲೈವಾಸ್ ವಿರುದ್ಧ ಬೆಂಗಳೂರು ಬುಲ್ಸ್‌ ಜಯಭೇರಿ

ಇದರೊಂದಿಗೆ ಆಡಿದ 9 ಪಂದ್ಯಗಳಲ್ಲಿ ಎರಡನೇ ಜಯ ದಾಖಲಿಸಿದ ತೆಲುಗು ಟೈಟನ್ಸ್‌ ತಂಡ 5 ಸೋಲು ಮತ್ತು 2 ಡ್ರಾ ಫಲಿತಾಂಶದೊಂದಿಗೆ ಒಟ್ಟು 18 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ 11ರಿಂದ 9ನೇ ಸ್ಥಾನಕ್ಕೆ ಜಿಗಿದಿದೆ.

ಮತ್ತೊಂದೆಡೆ ಆಡಿದ ಎಂಟನೇ ಪಂದ್ಯದಲ್ಲಿ ಮುಗ್ಗರಿಸಿದ ಸ್ಟೀಲರ್ಸ್‌ ಪಡೆ ತಲಾ ನಾಲ್ಕು ಸೋಲು ಮತ್ತು ಗೆಲುವಿನೊಂದಿಗೆ 21 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲೇ ಭದ್ರವಾಗಿ ಉಳಿದಿದೆ.

ಪ್ರೊ ಕಬಡ್ಡಿಗೆ ಧ್ವನಿ ಸೇರಿಸಿದ ಕ್ರಿಕೆಟರ್ ದಿನೇಶ್ ಕಾರ್ತಿಕ್, ನಟ ವ್ರಜೇಶ್ಪ್ರೊ ಕಬಡ್ಡಿಗೆ ಧ್ವನಿ ಸೇರಿಸಿದ ಕ್ರಿಕೆಟರ್ ದಿನೇಶ್ ಕಾರ್ತಿಕ್, ನಟ ವ್ರಜೇಶ್

ಇಲ್ಲಿನ ಜವಾಹರ್‌ ಲಾಲ್‌ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟೈಟನ್ಸ್‌ ಪರ ಅದ್ಭುತ ಆಟವಾಡಿದ ಸಿದ್ಧಾರ್ಥ್‌ ದೇಸಾಯಿ, 16 ರೇಡ್‌ ಅಂಕಗಳು ಮತ್ತು 2 ಬೋನಸ್‌ ಅಂಕಗಳೊಂದಿಗೆ ಒಟ್ಟು 18 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ಅವರಿಗೆ ಮತ್ತೊಬ್ಬ ರೇಡರ್‌ ಸೂರಜ್‌ ದೇಸಾಯಿ (6) ಉತ್ತಮ ಸಾಥ್‌ ನೀಡಿದರು. ಇನ್ನು ಡಿಫೆನ್ಸ್‌ನಲ್ಲೂ ಅಬೋಝರ್‌ ಮಿಘಾನಿ (3) ಮತ್ತು ವಿಶಾಲ್‌ ಭಾರಧ್ವಜ್‌ (3) ಮಿಂಚುವ ಮೂಲಕ ಗೆಲುವಿಗೆ ಬಲವಾದರು.

ಪ್ರೊ ಕಬಡ್ಡಿ 2019: ಯು ಮುಂಬಾದ ಹೆಡೆಮುರಿ ಕಟ್ಟಿದ ಬೆಂಗಳೂರು ಬುಲ್ಸ್‌ಪ್ರೊ ಕಬಡ್ಡಿ 2019: ಯು ಮುಂಬಾದ ಹೆಡೆಮುರಿ ಕಟ್ಟಿದ ಬೆಂಗಳೂರು ಬುಲ್ಸ್‌

ಮತ್ತೊಂದೆಡೆ ಸ್ಟಾರ್‌ ಡಿಫೆಂಡರ್‌ ಧರ್ಮರಾಜ್‌ ಚೇರಲಾಥನ್‌ ಸಾರಥ್ಯದ ಸ್ಟೀಲರ್ಸ್‌ ತಂಡದ ಪರ ರೇಡರ್‌ ವಿಕಾಸ್‌ ಖಂಡೊಲಾ (9) ಗಮನ ಸೆಳೆದರೆ, ನವೀನ್‌ 6 ಅಂಕಗಳ ಕೊಡುಗೆ ನೀಡಿದರು. ಆದರೆ, ಡಿಫೆನ್ಸ್‌ ವಿಭಾಗದ ವೈಫಲ್ಯವೇ ಸ್ಟೀಲರ್ಸ್‌ ಸೋಲಿಗೆ ಮುಖ್ಯ ಕಾರಣವಾಯಿತು.

ಸ್ಟೀಲರ್ಸ್‌ ಸೋಮವಾರ ಮರಳಿ ಕಣಕ್ಕಿಳಿಯಲಿದ್ದು ಬಲಿಷ್ಠ ಯು ಮುಂಬಾ ತಂಡದ ಸವಾಲನ್ನು ಎದುರಿಸಲಿದೆ. ಮತ್ತೊಂದೆಡೆ ತೆಲುಗು ಟೈಟನ್ಸ್‌ ತನ್ನ ಮುಂದಿನ ಪಂದ್ಯ ಸಲುವಾಗಿ ಬಾರುವ ಶನಿವಾರದ ವರೆಗೆ ಕಾಯುವಂತಾಗಿದ್ದು ಚೊಚ್ಚಲ ಆವೃತ್ತಿಯ ಚಾಂಪಿಯನ್ಸ್‌ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಸವಾಲನ್ನು ಎದುರಿಸಲಿದೆ.

Story first published: Sunday, August 18, 2019, 21:00 [IST]
Other articles published on Aug 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X