ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಲೀಗ್ ಪಂದ್ಯಗಳು ನಾಗ್ಪುರಕ್ಕೆ ಸ್ಥಳಾಂತರ

ಬೆಂಗಳೂರು, ಜುಲೈ 19 : ಪ್ರೊ ಕಬಡ್ಡಿ ಲೀಗ್‌ ಐದನೇ ಆವೃತ್ತಿಯ ಬೆಂಗಳೂರು ಬುಲ್ಸ್ ತಂಡದ ಪಂದ್ಯಗಳನ್ನು ಬೆಂಗಳೂರಿನಿಂದ ನಾಗ್ಪುರಕ್ಕೆ ಶಿಫ್ಟ್ ಮಾಡಲಾಗಿದೆ.

5ನೇ ಆವೃತ್ತಿಯ ಪ್ರೊ ಕಬಡ್ಡಿಗೆ ಬೆಂಗಳೂರು ಬುಲ್ಸ್ ತಂಡ ಪ್ರಕಟ5ನೇ ಆವೃತ್ತಿಯ ಪ್ರೊ ಕಬಡ್ಡಿಗೆ ಬೆಂಗಳೂರು ಬುಲ್ಸ್ ತಂಡ ಪ್ರಕಟ

ಆಗಸ್ಟ್‌ 4ರಿಂದ 10ರವರೆಗೆ ಕಂಠೀರವದಲ್ಲಿ ಪಂದ್ಯಗಳು ಆಯೋಜನೆಗೆ ಫ್ರಾಂಚೈಸ್, ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಅನುಮತಿ ಕೋರಿ ಹಲವು ದಿನಗಳ ಪತ್ರ ಬರೆದಿತ್ತು. ಆದರೆ, ಇದುವರೆಗೂ ಡಿವೈಇಎಸ್ ನಿಂದ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ ಅನಿವಾರ್ಯವಾಗಿ ಪಂದ್ಯಗಳನ್ನು ನಾಗ್ಪುರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಬೆಂಗಳೂರು ಬುಲ್ಸ್ ಫ್ರಾಂಚೈಸ್ ಮಂಗಳವಾರ ಪ್ರಕಟಿಸಿದೆ.

Pro Kabaddi: Bengaluru Bulls shift home matches to Nagpur

ಬುಲ್ಸ್ ತಂಡದ ಹಿಂದಿನ ನಾಲ್ಕು ಆವೃತ್ತಿಗಳ ಪಂದ್ಯಗಳು ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದವು. ಈ ಬಾರಿಯೂ ಕಂಠೀರವದಲ್ಲೇ ಪಂದ್ಯಗಳನ್ನು ನಡೆಸಲು ನಿಶ್ಚಯಿಸಲಾಗಿತ್ತು.

ಕಬಡ್ಡಿ ಲೀಗ್‌ನ ಐದನೇ ಆವೃತ್ತಿಗೆ ಜುಲೈ 28ರಂದು ಚಾಲನೆ ಸಿಗಲಿದ್ದು, ಬೆಂಗಳೂರು ತಂಡದ ತವರಿನ ಪಂದ್ಯಗಳು ಆಗಸ್ಟ್‌ 4 ರಿಂದ 10ರವರೆಗೆ ನಿಗದಿಯಾಗಿದ್ದವು. ಇದೀಗ ಈ ಪಂದ್ಯಗಳು ನಾಗ್ಪುರದ ಮಣಕಪುರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿವೆ.

'ಈ ಬಾರಿ ಬೆಂಗಳೂರು ಬುಲ್ಸ್ ತಂಡ ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯ ಗಳನ್ನು ಆಡುವುದಿಲ್ಲ. ಈ ವಿಷಯವನ್ನು ತಿಳಿಸಲು ತುಂಬಾ ಬೇಸರವಾಗುತ್ತಿದೆ. ಉದ್ಯಾನನಗರಿಯಲ್ಲಿ ಪಂದ್ಯಗಳನ್ನು ನಡೆಸಲು ಸಾಕಷ್ಟು ಪ್ರಯತ್ನಿಸಲಾಯಿತು.

ಆದರೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಅನುಮತಿ ಸಿಗಲಿಲ್ಲ. ಈ ಕಾರಣದಿಂದಾಗಿ ಪಂದ್ಯಗಳನ್ನು ಸ್ಥಳಾಂತರಿಸಲಾಗಿದೆ'ಎಂದು ಡಬ್ಲ್ಯುಎಲ್ ಸ್ಪೋರ್ಟ್ಸ್ ಲೀಗ್‌ನ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಉದಯ್‌ ಸಿನ್ಹಾ ವಾಲಾ ಬೇಸರ ವ್ಯಕ್ತಪಡಿಸಿದರು.

Story first published: Wednesday, January 3, 2018, 10:15 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X