ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ: ಹರ್ಯಾಣ ಸ್ಟೀಲರ್ಸ್ vs ಗುಜರಾತ್ ಜೈಂಟ್ಸ್ ಪಂದ್ಯದ ಪ್ರಿವ್ಯೂ ಹಾಗೂ ಇತರ ಮಾಹಿತಿ

Pro Kabaddi match 35: Haryana Steelers vs Gujarat Giants preview and Other details

ಪ್ರೋ ಕಬಡ್ಡಿಯಲ್ಲಿ ಇಂದಿನ ಮೂರನೇ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗುತ್ತಿದೆ. ಕಳೆದ ಪಂದ್ಯದಲ್ಲಿ ಯು ಮುಂಬಾ ವಿರುದ್ಧದ ಸೋಲು ಅನುಭವಿಸಿದ ಹರಿಯಾಣ ಸ್ಟೀಲರ್ಸ್ ಈ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ. ಜೋಗಿಂದರ್ ನರ್ವಾಲ್ ನೇತೃತ್ವದ ಹರ್ಯಾಣ ಸ್ಟೀಲರ್ಸ್ ಎರಡು ಗೆಲುವು ಮತ್ತು ಮೂರು ಸೋಲುಗಳನ್ನು ಕಂಡಿದ್ದು ಅಂಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.

ಮತ್ತೊಂದೆಡೆ ಯುಪಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಗುಜರಾತ್ ಜೈಂಟ್ಸ್ ಗೆಲುವಿನ ಆತ್ಮವಿಶ್ವಾಸದೊಂದಿಗೆ ಈ ಪಂದ್ಯದ ಕಣಕ್ಕಿಳಿಯುತ್ತಿದೆ. ಈ ಆವೃತ್ತಿಯಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ಗುಜರಾತ್ ಜೈಂಟ್ಸ್ ತಂಡ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಯಾಕೆಂದರೆ ಒಂದು ಪಂದ್ಯದಲ್ಲಿ ಟೈ ಫಲಿತಾಂಶ ಪಡೆದುಕೊಂಡಿದ್ದರೆ ಎರಡು ಪಂದ್ಯಗಳಲ್ಲಿ ಗೆಲುವು ಮತ್ತು ಎರಡು ಸೋಲುಗಳನ್ನು ಅನುಭವಿಸಿದೆ. ರೈಡರ್ ಆಗಿ ರಾಕೇಶ್ ಅದ್ಭುತ ಪ್ರದರ್ಶನ ನೀಡಿದ್ದು 60 ರೇಡ್ ಪಾಯಿಂಟ್‌ಗಳೊಂದಿಗೆ ಪ್ರಮುಖ ಆಟಗಾರನಾಗಿದ್ದಾರೆ.

ಟಿ20 ವಿಶ್ವಕಪ್ 2022: ಭಾರತೀಯ ಕ್ರಿಕೆಟ್ ಬೆಳವಣಿಗೆ ಶ್ಲಾಘಿಸಿದ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ಟಿ20 ವಿಶ್ವಕಪ್ 2022: ಭಾರತೀಯ ಕ್ರಿಕೆಟ್ ಬೆಳವಣಿಗೆ ಶ್ಲಾಘಿಸಿದ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್

ಇನ್ನು ಸ್ಟೀಲರ್ಸ್ ತಂಡದಲ್ಲಿ ಮಂಜೀತ್ 39 ರೇಡ್ ಪಾಯಿಂಟ್‌ಗಳೊಂದಿಗೆ ಅತ್ಯುತ್ತಮ ರೈಡರ್ ಎನಿಸಿಕೊಂಡಿದ್ದಾರೆ. ಮತ್ತೋರ್ವ ರೈಡರ್ಸ್ ಮೀತೂ 29 ರೇಡ್ ಪಾಯಿಂಟ್‌ಗಳೊಂದಿಗೆ ಮಂಜೀತ್‌ಗೆ ಉತ್ತಮ ಬೆಂಬಲ ನೀಡಿದ್ದಾರೆ. ಇತ್ತ ಡಿಫೆನ್ಸ್‌ನಲ್ಲಿ ಮೋಹಿತ್ ನಂದಲ್ ಮತ್ತು ಜೈದೀಪ್ ದಹಿಯಾ ಕ್ರಮವಾಗಿ 14 ಮತ್ತು 12 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸುವ ಮೂಲಕ ಹರ್ಯಾಣ ತಂಡದ ಬಲವಾಗಿದ್ದರೆ, ನಿತಿನ್ ರಾವಲ್ ಒಂಬತ್ತು ಟ್ಯಾಕಲ್ ಪಾಯಿಂಟ್‌ಗಳೊಂದಿಗೆ ತಂಡದ ಮೂರನೇ ಅತ್ಯುತ್ತಮ ಡಿಫೆಂಡರ್ ಎನಿಸಿಕೊಂಡಿದ್ದಾರೆ.

ಹರ್ಯಾಣ ತಂಡದ ಫಲಿತಾಂಶ ಹೀಗಿದೆ
ಬೆಂಗಾಲ್ ವಾರಿಯರ್ಸ್ ವಿರುದ್ಧ 41-33 ಅಂತರದ ಗೆಲುವು
ತಮಿಳ್ ತಲೈವಾಸ್ ವಿರುದ್ಧ 27-22 ಅಂತರದ ಗೆಲುವು
ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 31-44 ಅಂತರದ ಸೋಲು
ದಬಾಂಗ್ ಡೆಲ್ಲಿ ವಿರುದ್ಧ 36-38 ಅಂತರದ ಸೋಲು
ಯು ಮುಂಬಾ ವಿರುದ್ಧ 32-31 ಅಂತರದಲ್ಲಿ ಸೋಲು

ಗುಜರಾಥ್ ಜೈಂಟ್ಸ್ ತಂಡದ ಈವರೆಗಿನ ಫಲಿತಾಂಶ
ತಮಿಳ್ ತಲೈವಾಸ್ ವಿರುದ್ಧ 31-31ರಿಂದ ಡ್ರಾ
ದಬಾಂಗ್ ಡೆಲ್ಲಿ ವಿರುದ್ಧ 53-33 ಅಂತರದ ಸೋಲು
ಪುಣೇರಿ ಪಲ್ಟಾನ್ ವಿರುದ್ಧ 47-37 ಅಂತರದಿಂದ ಗೆಲುವು
ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 18-25 ಅಂತರದಿಂದ ಸೋಲು
ಯುಪಿ ಯೋಧಾಸ್ ವಿರುದ್ಧ 51-45 ಅಂತರದ ಗೆಲುವು

ಹೊಸ ಅವತಾರದಲ್ಲಿ ಕಾಣಿಸಿಕೊಂಡ ರಿಷಭ್ ಪಂತ್: ವಿಶ್ವಕಪ್‌ನಲ್ಲಿ ಆಡೋದು ಬಿಟ್ಟು, ಇದೇನಿದು?ಹೊಸ ಅವತಾರದಲ್ಲಿ ಕಾಣಿಸಿಕೊಂಡ ರಿಷಭ್ ಪಂತ್: ವಿಶ್ವಕಪ್‌ನಲ್ಲಿ ಆಡೋದು ಬಿಟ್ಟು, ಇದೇನಿದು?

ಹರಿಯಾಣ ಸ್ಟೀಲರ್ಸ್ ಸ್ಕ್ವಾಡ್ ಹೀಗಿದೆ
ರೈಡರ್ಸ್: ಮಂಜೀತ್, ಮೀಟೂ, ಕೆ. ಪ್ರಪಂಜನ್, ಮೊಹಮ್ಮದ್ ಎಸ್ಮಾಯಿಲ್ ಮಗ್ಸೌದ್ಲೌ ಮಹಲ್ಲಿ, ರಾಕೇಶ್ ನರ್ವಾಲ್, ವಿನಯ್, ಸುಶೀಲ್, ಮನೀಶ್ ಗುಲಿಯಾ, ಲವ್ಪ್ರೀತ್ ಸಿಂಗ್, ಲವ್ಪ್ರೀತ್ ಸಿಂಗ್
ಡಿಫೆಂಡರ್‌ಗಳು: ಜೈದೀಪ್ ದಹಿಯಾ, ಜೋಗಿಂದರ್ ಸಿಂಗ್ ನರ್ವಾಲ್, ಅಮಿರ್‌ಹೋಸೇನ್ ಬಸ್ತಾಮಿ, ನವೀನ್, ಸನ್ನಿ, ಮೋನು, ಹರ್ಷ್, ಅಂಕಿತ್, ಮೋಹಿತ್
ಆಲ್ ರೌಂಡರ್ಸ್: ನಿತಿನ್ ರಾವಲ್

ಗುಜರಾತ್ ಜೈಂಟ್ಸ್ ಸ್ಕ್ವಾಡ್ ಹೀಗಿದೆ
ರೈಡರ್ಸ್: ಡಾಂಗ್ ಜಿಯೋನ್ ಲೀ, ಚಂದ್ರನ್ ರಂಜಿತ್, ಪರ್ದೀಪ್ ಕುಮಾರ್, ರಾಕೇಶ್, ಮಹೇಂದ್ರ ಗಣೇಶ್ ರಜಪೂತ್, ರೋಹಿತ್ ಕುಮಾರ್, ಪೂರ್ಣ ಸಿಂಗ್, ಸವಿನ್, ಸೋನು, ಗೌರವ್ ಚಿಕಾರಾ, ಪಾರ್ತೀಕ್ ಧೈಯಾ, ಸೋಹಿತ್, ಸೋನು ಸಿಂಗ್, ಮೊಹಮ್ಮದ್ ಘೋರ್ಬಾನಿ
ಡಿಫೆಂಡರ್ಸ್: ರಿಂಕು ನರ್ವಾಲ್, ಸಂದೀಪ್ ಕಾಂಡೋಲಾ, ಬಲದೇವ್ ಸಿಂಗ್, ಉಜ್ವಲ್ ಸಿಂಗ್, ಕಪಿಲ್, ಸೌರವ್ ಗುಲಿಯಾ, ಮನುಜ್, ವಿಜಯ್ ತಂಗದುರೈ,
ಆಲ್‌ರೌಂಡರ್‌ಗಳು: ಶಂಕರ್ ಗಡಾಯಿ, ಅರ್ಕಮ್ ಶೇಖ್, ರೋಹನ್ ಸಿಂಗ್, ಪಾರ್ತೀಕ್ ಧೈಯಾ

Story first published: Saturday, October 22, 2022, 17:18 [IST]
Other articles published on Oct 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X