ಪ್ರೊ ಕಬಡ್ಡಿ: ಇಂದಿನಿಂದ ಪ್ಲೇ ಆಫ್ ಪಂದ್ಯಗಳು ಆರಂಭ

Posted By:

ಬೆಂಗಳೂರು, ಅಕ್ಟೋಬರ್ 23: ಐದನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಟೂರ್ನಿಯು ನಿರ್ಣಾಯಕ ಹಂತಕ್ಕೆ ಬಂದು ತಲುಪಿದ್ದು, ಇಂದಿನಿಂದ (ಅಕ್ಟೋಬರ್ 23) ಪ್ಲೇ-ಆಫ್ ಹಂತದ ಪಂದ್ಯಗಳು ಆರಂಭವಾಗಲಿವೆ.

ಸೋಮವಾರ ಮುಂಬೈನಲ್ಲಿ ಮೊದಲೆರಡು ಎಲಿಮಿನೇಟರ್ ಪಂದ್ಯಗಳು ನಡೆಯಲಿದ್ದು, ಮೊದಲ ಎಲಿಮಿನೇಟರ್ ನಲ್ಲಿ ಪುಣೇರಿ ಪಲ್ಟಾನ್ ಹಾಗೂ ಯುಪಿ ಯೋಧಾ ಸೆಣಸಾಡಿದರೆ, ಎರಡನೇ ಎಲಿಮಿನೇಟರ್ ನಲ್ಲಿ ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಹಾಗೂ ಹರ್ಯಾಣ ಸ್ಟೀಲರ್ಸ್ ಮುಖಾಮುಖಿಯಾಗಲಿವೆ.

Pro Kabaddi Season 5, playoffs match starts from on Monday

ಪ್ಲೇ-ಆಫ್ ಮತ್ತು ಕ್ವಾಲಿಫೈಯರ್ ಪಂದ್ಯಗಳ ವೇಳಾಪಟ್ಟಿ
* ಅಕ್ಟೋಬರ್ 23- ಮೊದಲನೇ ಎಲಿಮಿನೇಟರ್: ಪುಣೇರಿ ಪಲ್ಟಾನ್ v/s ಯುಪಿ ಯೋಧಾ. (ರಾತ್ರಿ 8ಕ್ಕೆ)
* ಅಕ್ಟೋಬರ್ 23- 2ನೇ ಎಲಿಮಿನೇಟರ್: ಪಾಟ್ನಾ ಪೈರೇಟ್ಸ್ v/s ಹರ್ಯಾಣ ಸ್ಟೀಲರ್ಸ್. (ರಾತ್ರಿ 9ಕ್ಕೆ)
* ಅಕ್ಟೋಬರ್ 24- 3ನೇ ಎಲಿಮಿನೇಟರ್:ಮೊದಲನೇ ಎಲಿಮಿನೇಟರ್ ಗೆದ್ದ ತಂಡ ಹಾಗೂ 2ನೇ ಎಲಿನಿನೇಟರ್ ನಲ್ಲಿ ಗೆದ್ದ ತಂಡ ಸೆಣಸಲಿವೆ.(ರಾತ್ರಿ 9ಕ್ಕೆ)
* ಅಕ್ಟೋಬರ್ 24- ಮೊದಲನೇ ಕ್ವಾಲಿಫೈಯರ್: ಗುಜರಾಥ್ v/s ಬೆಂಗಾಲ್ ವಾರಿಯರ್ಸ್ (ರಾತ್ರಿ 8ಕ್ಕೆ).
* ಅಕ್ಟೋಬರ್ 26- 2ನೇ ಕ್ವಾಲಿಫೈಯರ್: ಮೊದಲನೇ ಕ್ವಾಲಿಫೈಯರ್ ನಲ್ಲಿ ಸೋತ ತಂಡ ಹಾಗೂ 3ನೇ ಎಲಿಮಿನೇಟರ್ ಗೆದ್ದ ತಂಡ (ರಾತ್ರಿ 8ಕ್ಕೆ).
* ಅಕ್ಟೋಬರ್ 28- ಫೈನಲ್ ಪಂದ್ಯದಲ್ಲಿ ಮೊದಲನೇ ಕ್ವಾಲಿಫೈಯರ್ ಹಾಗೂ 2ನೇ ಕ್ವಾಲಿಫೈಯರ್ ತಂಡ ಆಡಲಿವೆ.

Story first published: Monday, October 23, 2017, 18:16 [IST]
Other articles published on Oct 23, 2017
Please Wait while comments are loading...