ಟೂರ್ ಆಫ್ ನೀಲಗಿರೀಸ್ : 950 ಕಿ. ಮೀ ಪ್ರಯಾಣ ಮುಗಿಸಿದ ಸೈಕ್ಲಿಸ್ಟ್

110 cyclists pedal 950+ kms to finish epic tour of TfN 2018 at Mysuru

ಮೈಸೂರು, ಡಿಸೆಂಬರ್ 17: ರೈಡ್ ಎ ಸೈಕಲ್ ಪ್ರತಿಷ್ಠಾನದ (ಆರ್‍ಎಸಿ ಎಫ್) ವತಿಯಿಂದ ಪ್ರತಿ ವರ್ಷ ನಡೆಯುವ ಟೂರ್ ಆಫ್ ನೀಲಗಿರೀಸ್, ಭಾನುವಾರ ಸಂಜೆ ಯಶಸ್ವಿಯಾಗಿ ಮುಕ್ತಾಯವಾಗಿದೆ. ಸೈಕ್ಲಿಸ್ಟ್‍ಗಳು ಕಲ್ಪೆಟ್ಟ ಮಾರ್ಗವಾಗಿ ಪುಲ್‍ಪಲ್ಲಿ, ಪಾಯಂಪಲ್ಲಿ ಹಾಗೂ ಎಚ್‍ಡಿ ಕೋಟೆ ಮಾರ್ಗವಾಗಿ 133 ಕಿಲೋಮೀಟರ್ ಪೆಡಲ್ ಮಾಡಿದರು.

ಈ ಐತಿಹಾಸಿಕ ಪ್ರಯಾಣದಲ್ಲಿ 110 ಸೈಕ್ಲಿಸ್ಟ್ ಗಳು 950 ಕಿ.ಮೀ ಅಧಿಕ ಕಿಲೋಮೀಟರನ್ನು ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲಿ ವ್ಯಾಪಿಸಿರುವ ನೀಲಗಿರೀಸ್ ಬಯೋಸ್ಪೇರ್ ರಿಸರ್ವ್‍ನಲ್ಲಿ ಪ್ರಯಾಣ ಮಾಡಿದರು.

ವಿಭಿನ್ನ ವೇಷದಲ್ಲಿ ಮ್ಯಾರಥಾನ್ ಓಡೋ ರಕ್ಷಿತ್‌ಗೆ 18ನೇ ಗಿನ್ನಿಸ್ ದಾಖಲೆಯ ಗರಿ

2018ರ ಟೂರ್ ಆಫ್ ನೀಲಗಿರೀಸ್‍ನ ಪ್ರಮುಖವಾದ ಅಂಶವೆಂದರೆ ದಾಖಲೆ ಎನಿಸುವಂಥ ವಿದೇಶಿ ಹಾಗೂ ಮಹಿಳಾ ಸೈಕ್ಲಿಸ್ಟ್‍ಗಳು ಸ್ಪರ್ಧೆ ಮಾಡಿದ್ದು, ವಿದೇಶದಿಂದ ಒಟ್ಟಾರೆ 29 ಹಾಗೂ 18 ಮಹಿಳಾ ರೈಡರ್ ಗಳು ಈ ಬಾರಿಯ ಟಿಎಫ್‍ಎನ್‍ನಲ್ಲಿ ಕಣಕ್ಕಿಳಿದಿದ್ದರು.

ಟಿಎಫ್‍ಎನ್ ಇತಿಹಾಸದಲ್ಲೇ ಹಿಂದೆಂದೂ ನೋಡಿಲ್ಲದಂತ ಹಾಸನ ಹಾಗೂ ಕುಶಾಲನಗರದ ಮಾರ್ಗದಲ್ಲಿನ ಬೆಟ್ಟ ಗುಡ್ಡಗಳ ಹೊಸ ದಾರಿಯನ್ನು 11ನೇ ಆವೃತ್ತಿಯಲ್ಲಿ ಪರಿಚಯಿಸಲಾಯಿತು.

ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ ಭಾರತದ ಆರ್ಚರ್‌ ದೀಪಿಕಾ ಕುಮಾರಿ

ಇನ್ನೊಂದು ಪ್ರಮುಖವಾದ ಅಂಶವೆಂದರೆ, ಸೈಕ್ಲಿಸ್ಟ್‍ಗಳಿಗೆ ಸ್ಮರಣೀಯ ಎನಿಸುವಂಥ ಕಲ್ಹಟಿ ಘಾಟ್‍ಅನ್ನು ಏರಬೇಕಾದ ಸಂದರ್ಭ ಒದಗಿ ಬಂದಿರುವುದು ಪ್ರಮುಖವಾದ ಅಂಶ. ಕಲ್ಹಟಿಯನ್ನು ಏರುವುದು ಸೈಕ್ಲಿಸ್ಟ್ ಗಳ ಪಾಲಿಗೆ ಹಾರ್ಸ್ ಕೆಟಗರಿ ಏರಿದಷ್ಟೇ ಸಮ. ಫ್ರೆಂಚ್ ಸೈಕ್ಲಿಂಗ್‍ನ ವಾಖ್ಯಾನದ ಪ್ರಕಾರ ತಮ್ಮ ಸಾಮರ್ಥ್ಯಕ್ಕಿಂತ ಮಿಗಿಲಾದ ಸಾಹಸಕ್ಕೆ ಇಳಿಯುವ ಪ್ರಕ್ರಿಯೆ ಇದು ಎನ್ನಲಾಗುತ್ತದೆ. ಸಾಹಸಕ್ಕೆ ಸಾಧ್ಯವಾಗುವಂಥ ಕಠಿಣ ಘಾಟ್‍ಗಳಲ್ಲಿ ಇದೂ ಒಂದು..

ಅತ್ಯಂತ ಕಷ್ಟಕರ ಹಾಗೂ ಅತಿದೊಡ್ಡ ಸೈಕ್ಲಿಂಗ್ ಟೂರ್

ಅತ್ಯಂತ ಕಷ್ಟಕರ ಹಾಗೂ ಅತಿದೊಡ್ಡ ಸೈಕ್ಲಿಂಗ್ ಟೂರ್

ಕಲ್ಹಟಿ ಘಾಟ್‍ನ ಆರೋಹಣದಿಂದ 1200ಮೀಟರ್ ಗಳಷ್ಟು ಪ್ರಯಾಣ 13 ಕಿಲೋಮೀಟರ್‍ಗೆ ಇಳಿಯುತ್ತದೆ. ಅದರೊಂದಿಗೆ ಸುಮಾರು 10%ನಷ್ಟು ಎತ್ತರದ ಲಾಭವನ್ನು ನೀಡುತ್ತದೆ. ಅದಲ್ಲದೆ, ಕೆಲವೊಂದು ಕಡೆಯ ಮಾರ್ಗಗಳು 15% ಹಾಗೂ ಅದಕ್ಕಿಂತಲೂ ಹೆಚ್ಚಿನ ಚಾಚುವಿಕೆ ಹೊಂದಿರುತ್ತದೆ.

ಟೂರ್ ಆಫ್ ನೀಲಗಿರೀಸ್ ಇಂದು ಭಾರತದ ಅತ್ಯಂತ ಕಷ್ಟಕರ ಹಾಗೂ ಅತಿದೊಡ್ಡ ಸೈಕ್ಲಿಂಗ್ ಟೂರ್ ಎನ್ನುವ ಗೌರವ ಪಡೆದುಕೊಂಡಿದೆ. ಸವಾಲು, ಅಡೆತಡೆ ಹಾಗೂ ಸಹಿಷ್ಟುತೆಗಳನ್ನು ಪರೀಕ್ಷಿಸಿ ಸೈಕ್ಲಿಂಗ್‍ನ ಪ್ರತಿಭೆಗಳಿಗೆ ಹೊಸ ಅವಕಾಶಗಳಿಗೆ ದಾರಿ ಮಾಡಿಕೊಡುತ್ತಿದೆ ಎಂದು ಟೂರ್ ಆಫ್ ನೀಲಗಿರೀಸ್‍ನ ಟೂರ್ ನಿದೇರ್ಶಕ ಸತೀಶ್ ಬೆಳವಾಡಿ ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ಮಟ್ಟದಲ್ಲಿ ಹಲವಾರು ಸೈಕ್ಲಿಸ್ಟ್ ಗಳು ಟೂರ್ ಆಫ್ ನೀಲಗಿರೀಸ್ ಬಗ್ಗೆ ಸಾಕಷ್ಟು ಆಸಕ್ತಿ ತೋರಿದ್ದಾರೆ. ಪ್ರತಿ ವರ್ಷ ಕಳೆದಂತೆ ಈ ಟೂರ್ನಿ ಇನ್ನಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.

ಆರ್‍ಎಸಿ ಎಫ್‍ನ ಸಹ ಸಂಸ್ಥಾಪಕ ದೀಪಕ್ ಮಾಜಿಪಾಟೀಲ್

ಆರ್‍ಎಸಿ ಎಫ್‍ನ ಸಹ ಸಂಸ್ಥಾಪಕ ದೀಪಕ್ ಮಾಜಿಪಾಟೀಲ್

2018ರ ಟಿಎಫ್‍ಎನ್ ಮುಗಿಯುತ್ತಿದ್ದಂತೆ, 2019ರಲ್ಲಿ ನಡೆಯಲಿರುವ 12ನೇ ಆವೃತ್ತಿಯ ಟಿಎಫ್‍ಎನ್ ಮಾರ್ಗದ ಕುರಿತಾಗಿ ಸೈಕ್ಲಿಸ್ಟ್ ಗಳಲ್ಲಿ ಕುತೂಹಲ ಆರಂಭಗೊಂಡಿದೆ ಎಂದು ಆರ್‍ಎಸಿ ಎಫ್‍ನ ಸಹ ಸಂಸ್ಥಾಪಕ ದೀಪಕ್ ಮಾಜಿಪಾಟೀಲ್ ತಿಳಿಸಿದರು. ಆರ್‍ಎಸಿ ಎಫ್‍ನ ಅನುಭವಿಗಳ ತಂಡ ಮುಂದಿನ ಎರಡು ತಿಂಗಳಿನಲ್ಲಿ ಸಭೆ ಸೇರಲಿದ್ದು, ಮುಂದಿನ ಆವೃತ್ತಿಗಳ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಿದೆ. 2019ರ ಟಿಎಫ್‍ಎನ್‍ನ ನೋಂದಣಿ ಕಾರ್ಯ 2019ರ ಮೇ 1 ರಂದು ಆರಂಭಗೊಳ್ಳಲಿದೆ. ವಿಶ್ವಮಟ್ಟದ ಸೈಕ್ಲಿಂಗ್‍ನ ಅಗಾಧ ಪ್ರತಿಭೆಗಳನ್ನು ಆಕರ್ಷಿಸಲಿದ್ದೇವೆ ಎನ್ನುವ ಅಚಲ ವಿಶ್ವಾಸ ನಮ್ಮಲ್ಲಿದೆ ಎಂದು ತಿಳಿಸಿದರು.

ವಿವಿಧ ವಿಭಾಗಗಳಲ್ಲಿ ಗೆದ್ದವರು

ವಿವಿಧ ವಿಭಾಗಗಳಲ್ಲಿ ಗೆದ್ದವರು

ವಿವಿಧ ವಿಭಾಗಗಳಲ್ಲಿ ಪುರುಷ, ಮಹಿಳಾ ಹಾಗೂ ಮಾಸ್ಟರ್ಸ್ (35 ವರ್ಷಕ್ಕಿಂತ ಮೇಲ್ಪಟ್ಟವರು) ಮತ್ತು ಹಿರಿಯರ (45 ವರ್ಷಕ್ಕಿಂತ ಮೇಲ್ಪಟ್ಟವರು) ಕ್ರಮವಾಗಿ ನವೀನ್ ಜಾನ್ (ಭಾರತ); ಕಟ್ಜಾ-ಲಿಲ್ ಜೆನ್ಸನ್ (ಡೆನ್ಮಾರ್ಕ್); ಕ್ರಿಸ್ ಗನ್ಸ್ (ಬೆಲ್ಜಿಯಂ) ಮತ್ತು ಪಾಲ್ ಸ್ಟುವರ್ಟ್ ರೈಟ್ (ಗ್ರೇಟ್ ಬ್ರಿಟನ್) ಇವರಾಗಿದ್ದಾರೆ.

ದಾಖಲೆಯ 1 ಗಂಟೆ 7 ನಿಮಿಷ ಹಾಗೂ 36 ಸೆಕೆಂಡ್‍ನಲ್ಲಿ ಕಲ್ಹಟ್ಟಿ ಘಾಟ್‍ಅನ್ನು ಏರಿದ ಕಾರಣಕ್ಕಾಗಿ ಕಿರಣ್ ಕುಮಾರ್ ರಾಜು ಅವರಿಗೆ ಕಿಂಗ್ ಆಫ್ ಕಲ್ಹಟ್ಟಿ, 1 ಗಂಟೆ 26 ನಿಮಿಷ 35 ಸೆಕೆಂಡ್‍ನಲ್ಲಿ ಏರಿದ ಕಾರಣಕ್ಕಾಗಿ ಡೆನ್ಮಾರ್ಕ್‍ನ ಕಾಟ್ಜಾ ಲಿಲ್ ಜಾನ್‍ಸೆನ್‍ಗೆ ಕ್ವೀನ್ ಆಫ್ ಕಲ್ಹಟ್ಟ್ಟಿ ಗೌರವ ನೀಡಲಾಗಿದೆ.

ಆರ್ ಎಸಿ ಎಫ್ ಲಾಭ ಬಯಸದ ಸಂಸ್ಥೆ

ಆರ್ ಎಸಿ ಎಫ್ ಲಾಭ ಬಯಸದ ಸಂಸ್ಥೆ

ಆರ್‍ಎಸಿ-ಎಫ್ ಲಾಭಗಳಿಸುವ ಉದ್ದೇಶ ಹೊಂದಿರುವ ಸಂಸ್ಥೆಯಲ್ಲ. ಸೈಕ್ಲಿಂಗ್ ಜನಪ್ರಿಯಗೊಳಿಸುವ ಆರಾಮವಾಗಿ ಸಾಮಾಜಿಕ ಬದಲಾವಣೆ, ಬಯಸುತ್ತಿರುವ ಸಂಸ್ಥೆ ರಾಷ್ಟ್ರದಲ್ಲಿ ಸೈಕಲ್ ಕ್ರಾಂತಿ ಪರಿಚಯಿಸುವ ಮೂಲಕ ದೈನಂದಿನ ಸಾಗಣೆ, ಸವಾರಿಗೆ, ಅದನ್ನು ಜನಪ್ರಿಯ ಮಾಡುವುದಾಗಿದೆ. ಆರ್‍ಎಸಿ-ಎಫ್ ಸೈಕಲ್ ಪ್ರೇಮಿಗಳು, ಸೈಕಲ್ ತಯಾರಕರು, ಸೈಕ್ಲಿಂಗ್ ಸಮುದಾಯ ಹಾಗೂ ಸರ್ಕಾರದ ಸಂಘಟನೆಗಳ ಜೊತೆಗೆ ಸಂಪರ್ಕ ಹೊಂದಿದೆ. ಅನೇಕ ವರ್ಷಗಳಿಂದ ಪ್ರತಿಷ್ಠಾನ ಟೂರ್ ಆಫ್ ನೀಲಗಿರೀಸ್, ನಮ್ಮ ಸೈಕಲ್, ಸೈಕಲ್ ರೀಸೈಕಲ್, ಸಹಾಯಕ ಚಟುವಟಿಕೆಗಳಲ್ಲಿ ತೊಡಗಿದೆ.

For Quick Alerts
ALLOW NOTIFICATIONS
For Daily Alerts

Story first published: Monday, December 17, 2018, 18:30 [IST]
Other articles published on Dec 17, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more