Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವ ಅಂಗ ಕಸಿ ಗೇಮ್ಸ್‌ನಲ್ಲಿ ಭಾರತಕ್ಕೆ ಹೆಮ್ಮೆ ತಂದ 14 ಅಥ್ಲೀಟ್‌ಗಳು

14 organ transplant athletes make India proud at World Transplant Games

ನ್ಯೂಕ್ಯಾಸಲ್, ಸೆಪ್ಟೆಂಬರ್ 24: ಇಂಗ್ಲೆಂಡ್‌ನ ನ್ಯೂಕ್ಯಾಸಲ್‌ನಲ್ಲಿ ನಡೆದ ವಿಶ್ವ ಅಂಗ ಕಸಿ ಗೇಮ್ಸ್‌2019ರಲ್ಲಿ ಭಾರತದ ಪುರುಷರ, ಮಹಿಳೆಯರ 14 ಜನರಿದ್ದ ತಂಡ ದೇಶಕ್ಕೆ ಹೆಮ್ಮೆ ತಂದಿದೆ. ಈ ಟೂರ್ನಿಯಲ್ಲಿ ಭಾರತಕ್ಕೆ 3 ಚಿನ್ನ ಮತ್ತು 3 ಬೆಳ್ಳಿ ಪದಕಗಳು ಲಭಿಸಿವೆ.

ಕ್ರೀಡಾಕೂಟದಲ್ಲಿ ಪಾಲ್ಗೊಂಡ ಅಥ್ಲೀಟ್‌ಗಳಿಗೆ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ (ಸಾಯ್) ಸಹಕಾರವಿರಲಿಲ್ಲ ಅನ್ನೋದು ದುರದೃಷ್ಟಕರ ಸಂಗತಿ. ಅಥ್ಲೀಟ್‌ಗಳು ಭಾರತದ ಕ್ರೀಡಾ ಪ್ರಾಧಿಕಾರದ ಸಹಾಯವಿಲ್ಲದೆ, ತಮ್ಮದೇ ಖರ್ಚಿನಲ್ಲಿ ಅಥವಾ ಸರ್ಕಾರೇತರ ಸಂಸ್ಥೆಗಳ ಸಹಕಾರ ಪಡೆದು ಪದಕ ಗೆದ್ದು ವಿಶ್ವದ ಗಮನವನ್ನು ಭಾರತದತ್ತ ಸೆಳೆದಿದ್ದಾರೆ.

ಟೂರ್ನಿಯಲ್ಲಿ ಪಾಲ್ಗೊಂಡವರಲ್ಲಿ 11 ಮಂದಿ ಅಂಗ ಸ್ವೀಕರಿಸಿದವರು ಇನ್ನು 3 ಮಂದಿ ಅಂಗ ದಾನಿಗಳು. ಸ್ಪರ್ಧಿ ಅಂಕಿತ್ ಶ್ರೀವತ್ಸವ್ ಲಾಂಗ್ ಜಂಪ್‌ ಮತ್ತು ಥ್ರೋ ಬಾಲ್‌ ನಲ್ಲಿ ಚಿನ್ನ, 100 ಮೀ. ರೇಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. 5000 ಮೀ. ವಾಕ್‌ರೇಸ್‌ನಲ್ಲಿ ಪಾಲ್ಗೊಂಡಿದ್ದ ವಿಷ್ಣು ನಾಯರ್ ಸ್ವಲ್ಪದರಲ್ಲಿ ಪದಕ ಕಳೆದುಕೊಂಡಿದ್ದಾರೆ.

ಇನ್ನು ಉತ್ತರ ಪ್ರದೇಶದ ಬಲ್‌ವೀರ್‌ ಸಿಂಗ್ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಬಲ್‌ವೀರ್‌ ಸಿಂಗ್‌ 2015 ಮತ್ತು 2017ರಲ್ಲೂ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು, ಕಳೆದಸಾರಿ ಬಂಗಾರ ಜಯಿಸಿದ್ದರು. ಅರ್ಜುನ್ ಶ್ರೀವತ್ಸವ್ ಗಾಲ್ಫ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ, ದಿಗ್ವಿಜಯ್ ಸಿಂಗ್ ಗುಜ್ರಾಲ್ ಸ್ಕ್ಯಾಷ್ ಸ್ಪರ್ಧೆಯಲ್ಲಿ ರಜತ ಪದಕ ಗೆದ್ದಿದ್ದಾರೆ.

Story first published: Tuesday, September 24, 2019, 17:00 [IST]
Other articles published on Sep 24, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+