16 ಮಂದಿ ಎನ್‌ಬಿಎ ಆಟಗಾರರಿಗೆ ಮಾರಕ ಕೊರೊನಾವೈರಸ್ ಸೋಂಕು

ನ್ಯೂಯಾರ್ಕ್: ನ್ಯಾಷನಲ್ ಬಾಸ್ಕೆಟ್ ಬಾಲ್ ಅಸೋಸಿಯೇಶನ್ (ಎನ್‌ಬಿಎ) ನಡೆಸಿದ 302 ಕೊರೊನಾವೈರಸ್ ಪರೀಕ್ಷೆಗಳಲ್ಲಿ 16 ಮಂದಿ ಆಟಗಾರರಿಗೆ ಸೋಂಕಿರುವುದು ಪತ್ತೆಯಾಗದೆ ಎಂದು ಲೀಗ್ ಆಯೋಜಕರು ಶುಕ್ರವಾರ (ಜೂನ್ 26) ಘೋಷಿಸಿದ್ದಾರೆ.
ಇಷ್ಟು ಆಟಗಾರರಿಗೆ ಕೊರೊನಾ ಸೋಂಕು ತಗುಲಿದ್ದರೂ 2019-20ರ ಸೀಸನ್ ಜುಲೈ 30ರಿಂದ ಫ್ಲೋರಿಡಾದ ಒರ್ಲ್ಯಾಂಡೋದಲ್ಲಿ ಆರಂಭಗೊಳ್ಳಲಿದೆ ಎಂದೂ ಎನ್‌ಬಿಎ ಮಾಹಿತಿ ನೀಡಿದೆ. ಸೋಂಕಿತ ಆಟಗಾರರ ಪಟ್ಟಿಯಲ್ಲಿ ಇಂಡಿಯಾನಾ ಪೇಸರ್ಸ್ ತಂಡದ ಮಾಲ್ಕಮ್ ಬ್ರೊಗ್ಡಾನ್, ಸ್ಯಾಕ್ರಮೆಂಟೊ ಕಿಂಗ್‌ನ ಅಲೆಕ್ಸ್ ಲೆನ್ ಮತ್ತು ಬಡ್ಡಿ ಹಿಲ್ಡ್ ಹೆಸರುಗಳು ಸೇರಿವೆ.
ಶುಕ್ರವಾರ ಪ್ರಟಿಸಲಾದ ಸೋಂಕಿತ ಆಟಗಾರರ ಪಟ್ಟಿಯಲ್ಲಿ ಚಿಕಾಗೋದಲ್ಲಿ ಪಾಸಿಟಿವ್ ಬಂದಿದ್ದ ಕಿಂಗ್ಸ್ ತಂಡದ ಜಬರಿ ಪಾರ್ಕರ್, ಸರ್ಬಿಯಾದ ನಿಕೋಲಾ ಜೋಕಿಕ್ ಹೆಸರುಗಳು ಇಲ್ಲ. ಆಟಗಾರರು ತರಬೇತಿಗಾಗಿ ವರದಿ ಮಾಡಲು ತಯಾರಾಗುತ್ತಿದ್ದಂತೆ ಎನ್‌ಬಿಎಯು ಮಂಗಳವಾರ ಕೊರೊನಾ ಪರೀಕ್ಷೆಗಳನ್ನು ನಡೆಸಿತ್ತು.
ಕೊರೊನಾವೈರಸ್ ಪಾಸಿಟಿವ್ ಬಂದ ಆಟಗಾರರು ಸದ್ಯ ಐಸೊಲೇಶನ್‌ನಲ್ಲಿದ್ದು ನಂತರ ಆರೋಗ್ಯಾಧಿಕಾರಿಗಳು ಈ ಆಟಗಾರರು ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ತಿಳಿಸಿದ ನಂತರವಷ್ಟೇ ಒರ್ಲ್ಯಾಂಡೊದಲ್ಲಿ ತಮ್ಮ ತಂಡದ ಸದಸ್ಯರನ್ನು ಸೇರಿಕೊಳ್ಳಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications