ವಿಡಿಯೋ ಗೇಮ್ಸ್‌ಗಳ ಮೇಲೆ ಮಾಲ್ವೇರ್ ದಾಳಿ: ಅಪಾಯದಲ್ಲಿ 3.80 ಲಕ್ಷ ಆಟಗಾರರ ಫಿನಾನ್ಶಿಯಲ್ ಡೇಟಾ!

By ಪ್ರತಿನಿಧಿ

ಆನ್‌ಲೈನ್ ಗೇಮ್ಸ್ ಪ್ರಿಯರು ಬೆಚ್ಚಿ ಬೀಳಿಸುವಂತಾ ಆಘಾತಕಾರಿ ಮಾಹಿತಿಯೊಂದು ಬಹಿರಂಗವಾಗಿದೆ. 2021ರ ಜುಲೈ ತಿಂಗಳಿನಿಂದ ಈ ವರ್ಷದ ಜೂನ್ ತಿಂಗಳ ಅವಧಿಯಲ್ಲಿ ಮಾಲ್‌ವೇರ್‌ನಿಂದ ಕೆಲ ಜನಪ್ರಿಯ ಗೇಮ್ಸ್‌ಗಳು ಸೇರಿದಂತೆ ಒಟ್ಟು 28 ಗೇಮ್ಸ್‌ಗಳ ಬಳಕೆದಾರರಿಗೆ ಕೆಟ್ಟ ಪರಿಣಾಮಗಳು ಉಂಟಾಗಿದೆ ಎಂದು ಬಹಿರಂಗವಾಗಿದೆ. ರೊಬ್‌ಲಾಕ್ಸ್, ಫೀಫಾ, ಪಬ್‌ಜಿ ಮತ್ತು ಮಿನೆಕ್ರಾಫ್ಟ್‌ನಂತಾ ಜನಪ್ರಿಯ ಗೇಮ್ಸ್‌ಗಳು ಕೂಡ ಈ ಪಟ್ಟಿಯಲ್ಲಿ ಸೇರಿದೆ. ಇದು ಸುಮಾರು 92,000 ದುರುದ್ದೇಶಪೂರಿತ ಫೈಲ್‌ಗಳ ಮೂಲಕ 384,000 ಕ್ಕೂ ಹೆಚ್ಚು ಬಳಕೆದಾರಿಗೆ ಇದರ ಪರಿಣಾಮವುಂಟಾಗಿದೆ ಎಂದು ವರದಿಯಾಗಿದೆ.

ಕ್ಯಾಸ್ಪರ್ಸ್ಕೈ ಸಂಶೋಧಕರು ಬಹಿರಂಗಪಡಿಸಿರುವ ಮಾಹಿತಿಯ ಪ್ರಕಾರ ಕಳೆದ ವರ್ಷದಲ್ಲಿ ಬಿಡುಗಡೆಯಾದ ಇತರ ಗೇಮ್ಸ್‌ಗಳಾದ ಎಲ್ಡನ್ ರಿಂಗ್, ಹ್ಯಾಲೊ ಮತ್ತು ರೆಸಿಡೆಂಟ್ ಇವಿಲ್‌ನಂಥಾ ಗೇಮ್ಸ್‌ಗಳು ಕೂಡ ರೆಡ್‌ಲೈನ್' ಎಂಬ ಮಾಲ್ವೇರ್ ಮೂಲಕ ಸಕ್ರಿಯವಾಗಿ ದಾಳಿಕೋರರಿಂದ ಆಕ್ರಮಣಕ್ಕೆ ಒಳಗಾಗಿದೆ.

ಈ 'ರೆಡ್‌ಲೈನ್' ಪಾಸ್‌ವರ್ಡ್ ಕದಿಯುವ ಸಾಫ್ಟ್‌ವೇರ್ ಆಗಿದ್ದು ಬಳಕದಾರರಿಗೆ ದೊಡ್ಡ ಮಟ್ಟದ ಹಾನಿಯುಂಟು ಮಾಡುತ್ತದೆ. ಈ ಮಾಲ್ವೇರ್ ದಾಳಿಗೊಳಗಾದ ವ್ಯಕ್ತಿಗಳ ಪಾಸ್‌ವರ್ಡ್‌ಗಳು, ಬ್ಯಾಂಕ್ ಕಾರ್ಡ್ ವಿವರಗಳು, ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗಳು ಮತ್ತು ವಿಪಿಎನ್ ಸೇವೆಗಳಿಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ಮಾಹಿತಿಗಳನ್ನು ಕದಿಯುವ ಸಾಮರ್ಥ್ಯ ಹೊಂದಿದೆ.

"ಸೈಬರ್ ದಾಳಿಕೋರರು ಆನ್‌ಲೈನ್ ಗೇಮ್ಸ್ ಆಟಗಾರರ ಮೇಲೆ ದಾಳಿ ಮಾಡಲು ಮತ್ತು ಅವರ ಕ್ರೆಡಿಟ್ ಕಾರ್ಡ್ ಡೇಟಾ ಮತ್ತು ಆಟದ ಖಾತೆಗಳನ್ನು ಕದಿಯಲು ಹೆಚ್ಚು ಹೊಸ ಯೋಜನೆಗಳು ಮತ್ತು ಸಾಧನಗಳನ್ನು ಸಿದ್ಧಪಡಿಸುತ್ತಿದ್ದಾರೆ. ಇವುಗಳನ್ನು ಸ್ವತಃ ತಾವು ಬಳಸಿಕೊಳ್ಳುವುದಲ್ಲದೆ ಇತರರಿಗೂ ಮಾರಾಟ ಮಾಡುವ ಜಾಲವಿದೆ. ಉದಾಹರಣೆಗೆ ಇ-ಸ್ಪೋರ್ಟ್‌ಗಳ ಮೇಲಿನ ಸ್ಟ್ರೈಕ್‌ಗಳು ಈಗ ಹೆಚ್ಚಿನ ಪ್ರಮಾಣದಲ್ಲಿ ಆದಾಯವನ್ನು ಗಳಿಸುತ್ತಿದ್ದು ಇದು ಪ್ರಪಂಚದಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಜನಪ್ರಿಯತೆ ಪಡೆಯುತ್ತಿದೆ" ಎಂದು ಕ್ಯಾಸ್ಪರ್ಸ್ಕಿಯ ಹಿರಿಯ ಭದ್ರತಾ ಸಂಶೋಧಕ ಆಂಟನ್ ವಿ ಹೇಳಿಕೊಂಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 15, 2022, 23:38 [IST]
Other articles published on Sep 15, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X