ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿಲ್ಲ ಅಪ್ಘಾನ್ ಕ್ರೀಡಾಪಟುಗಳು, ಆದರೂ ಹಾರಾಡಲಿದೆ ಧ್ವಜ

Afghanistan flag will be flown at Tokyo Paralympics opening ceremony despite athletes not taking part

ಟೋಕಿಯೋ, ಆಗಸ್ಟ್ 23: ಟೋಕಿಯೋ ಒಲಿಂಪಿಕ್ಸ್ ಯಶಸ್ವಿಯಾಗಿ ಅಂತ್ಯವಾದ ಬಳಿಕ ಇದೀಗ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಆಯೋಜನೆಗೆ ಟೋಕಿಯೋ ಸಿದ್ಧವಾಗಿದೆ. ಆಗಸ್ಟ್ 24(ಮಂಗಳವಾರ) ಈ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದೆ. ಆದರೆ ಈ ಬಾರಿಯ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಪ್ಘಾನಿಸ್ತಾನದ ಕ್ರೀಡಾಪಟುಗಳು ಭಾಗವಹಿಸುತ್ತಿಲ್ಲ. ಹಾಗಿದ್ದರೂ ಕೂಡ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಅಪ್ಘಾನಿಸ್ತಾನದ ಧ್ವಜ ಹಾರಾಡಲು ಅವಕಾಶ ನೀಡಲಾಗುತ್ತದೆ ಎಂದು ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಸಮಿತಿಯ ಅಧ್ಯಕ್ಷ ಆಂಡ್ರ್ಯೋ ಪಾರ್ಸನ್ಸ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಸಮಿತಿಯ ಅಧ್ಯಕ್ಷ ಆಂಡ್ರ್ಯೋ ಪರ್ಸನ್ಸ್ ಅಪ್ಘಾನಿಸ್ತಾನ ದೇಶದ ಪರವಾಗಿ ನಾವೆಲ್ಲಾ ಒಗ್ಗಟ್ಟಾಗಿ ಇದ್ದೇವೆ ಎಂಬುದನ್ನು ಸೂಚಿಸಲು ಧ್ವಜವನ್ನು ಹಾರಿಸಲಾಗುತ್ತದೆ ಎಂದಿದ್ದಾರೆ. ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗಿಯಾಗಲು ಅಪ್ಘಾನಿಸ್ತಾನದ ಇಬ್ಬರು ಕ್ರೀಡಾಪಟುಗಳು ಸಿದ್ಧರಾಗಿದ್ದರು. ಪ್ಯಾರಾ- ಟಯಿಕ್ವಾಂಡೋ ಅಥ್ಲೀಟ್ ಝಕಿಯಾ ಖುದಾದಡಿ ಮತ್ತು ಡಿಸ್ಕಸ್ ಎಸೆತಗಾರ ಹುಸೈನ್ ರಸೌಲಿ ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಅಪ್ಘಾನಿಸ್ತಾನವನ್ನು ಪ್ರತಿನಿಧಿಸಬೇಕಾಗಿದ್ದ ಕ್ರೀಡಾಪಟುಗಳು. ಆದರೆ ತಾಲೀಬಾನ್ ಸಂಪೂರ್ಣ ಅಪ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದಿರುವ ಕಾರಣದಿಂದಾಗಿ ಇವರು ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ.

ಐಪಿಎಲ್ 2021: ಬೆಂಗಳೂರಿನಲ್ಲಿ ಕ್ವಾರಂಟೈನ್ ಆರಂಭಿಸಿದ ಆರ್‌ಸಿಬಿ-ವಿಡಿಯೋಐಪಿಎಲ್ 2021: ಬೆಂಗಳೂರಿನಲ್ಲಿ ಕ್ವಾರಂಟೈನ್ ಆರಂಭಿಸಿದ ಆರ್‌ಸಿಬಿ-ವಿಡಿಯೋ

ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ ಕಚೇರಿಯ ಪ್ರತಿನಿಧಿಯೊಬ್ಬರು ಅಪ್ಘಾನಿಸ್ತಾನದ ಧ್ವಜವನ್ನು ಹಿಡಿದು ಮುನ್ನಡೆಯಲಿದ್ದಾರೆ ಎಂದು ಪಾರ್ಸನ್ಸ್ ಮಾಹಿತಿ ನೀಡಿದರು. ಇದೇ ಕ್ರೀಡಾಂಗಣದಲ್ಲಿ ಟೋಕಿಯೋ ಒಲಿಂಪಿಕ್ಸ್ 2020ಯ ಉದ್ಘಾಟನಾ ಸಮಾರಂಭ ಕೂಡ ನಡೆದಿತ್ತು.

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ 162 ರಾಷ್ಟ್ರಗಳನ್ನು ಪ್ರತಿನಿಧಿಸಲಾಗುತ್ತದೆ. ಇದರಲ್ಲಿ ನಿರಾಶ್ರಿತ ಕ್ರೀಡಾಪಟುಗಳು ಇದ್ದಾರೆ ಎಂದು ಪಾರ್ಸನ್ಸ್ ಹೇಳಿದರು. ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಸುಮಾರು 4,400 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದು ಐಪಿಸಿ ಮಾಹಿತಿ ನೀಡಿದೆ. ಇದರ ನಿಖರ ಅಂಕಿಅಂಶಗಳನ್ನು ಮಂಗಳವಾರ ಬಿಡುಗಡೆ ಮಾಡಲಾಗುತ್ತದೆ.

ಈ ಪ್ಯಾರಾಲಿಂಪಿಕ್ಸ್ ಸೆಪ್ಟೆಂಬರ್ 5 ರಂದು ಸಮಾರೋಪ ಕಾಣಲಿದೆ. ಈ ಮಧ್ಯೆ ಟೋಕಿಯೋ ಪ್ಯಾರಾಲಿಂಪಿಕ್ಸ್‌ಗೂ ಕೂಡ ಕೊರೊನಾವೈರಸ್ ಕಾಡುತ್ತಿದೆ. ಟೋಕಿಯೊ ನಗರದಾತ್ಯಂತ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಒಂದು ತಿಂಗಳ ಹಿಂದೆ ಒಲಿಂಪಿಕ್ಸ್ ಆರಂಭವಾದಾಗಿನಿಂದ ರಾಜಧಾನಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ನಾಲ್ಕೈದು ಪಟ್ಟು ಹೆಚ್ಚಾಗಿದೆ. ಆದರೆ ಟೋಕಿಯೋ ನಗರದಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುವುದಕ್ಕೂ ಕ್ರೀಡಾಕೂಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.

Story first published: Monday, August 23, 2021, 18:19 [IST]
Other articles published on Aug 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X