ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಶೂಟಿಂಗ್: 10ಎಂ ಶೂಟಿಂಗ್‌ನಲ್ಲಿ ಫೈನಲ್‌ ಪ್ರವೇಶಿಸಲು ವಿಫಲರಾದ ಅಪೂರ್ವಿ, ಎಲವೆನಿಲ್

Apurvi Chandela and Elavenil Valarivan failed to qualify for the 10m air rifle final at the Tokyo Olympics

ಟೋಕಿಯೋ, ಜುಲೈ 24: ಭಾರತದ ಶೂಟರ್‌ಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಳಪೆ ಪ್ರದರ್ಶನದ ಮೂಲದ ಆರಂಭ ಮಾಡಿದ್ದಾರೆ. ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿರುವ ಎಲವೆನಿಲ್ ವಲರಿವನ್ ಹಾಗೂ ಅಪೂರ್ವಿ ಚಂಡೇಲಾ ಫೈನಲ್ ಹಂತಕ್ಕೇರಿವಲ್ಲಿ ವಿಫಲರಾಗಿದ್ದಾರೆ. ಶನಿವಾರ ನಡೆದ 10 ಎಂ ಏರ್‌ ರೈಫಲ್ ವಿಭಾಗದಲ್ಲಿ ಇಬ್ಬರು ಸ್ಪರ್ಧಿಗಳು ಕೂಡ ನಿರಾಸೆ ಅನುಭವಿಸಿದ್ದಾರೆ.

ಚೊಚ್ಚಲ ಬಾರಿಗೆ ಒಲಿಂಪಿಕ್ಸ್‌ಗೆ ಅವಕಾಶವನ್ನು ಪಡೆದಿರುವ ಎಲವೆನಿಲ್ 16ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. 626.5 ಅಂಕಗಳನ್ನು ಎಲವೆನಿಲ್ ಸಂಪಾದನೆ ಮಾಡಿದ್ದಾರೆ. ಮತ್ತೊಂದೆಡೆ ಅಪೂರ್ವಿ 36ನೇ ಸ್ಥಾನಕ್ಕೆ ಕುಸಿದಿದ್ದಾರೆ. 621.9 ಅಂಕಗಳು ಅಪೂರ್ವಿ ಪಾಲಾದವು. ಅಸಕಾ ಶೂಟಿಂಗ್ ರೇಂಜ್‌ನಲ್ಲಿ ಈ ಸ್ಪರ್ಧೆ ನಡೆದಿದೆ.

ಜರ್ಮನ್ ಸೈಕ್ಲಿಸ್ಟ್ ಸೈಮನ್ ಗೆಶ್ಕೆಗೆ ಕೊರೊನಾ ಸೋಂಕು, ಒಲಿಂಪಿಕ್ಸ್‌ನಿಂದ ಹೊರಕ್ಕೆಜರ್ಮನ್ ಸೈಕ್ಲಿಸ್ಟ್ ಸೈಮನ್ ಗೆಶ್ಕೆಗೆ ಕೊರೊನಾ ಸೋಂಕು, ಒಲಿಂಪಿಕ್ಸ್‌ನಿಂದ ಹೊರಕ್ಕೆ

ಉತ್ತಮ ಆರಂಭದೊಂದಿಗೆ ಭಾರತೀಯ ಶೂಟರ್‌ಗಳು ಸ್ಪರ್ಧೆಯ ಆರಂಭವನ್ನು ಮಾಡಿದರು. ಆದರೆ ಇದೇ ಪ್ರದರ್ಶನವನ್ನು ಮುಂದಿವರಿಸಲು ಅವರಿಂದ ಸಾಧ್ಯವಾಗಲಿಲ್ಲ. ಕುಸಿತವನ್ನು ಕಾಣಲು ಆರಂಭಿಸಿದರು. 21ರ ಹರೆಯದ ಯುವ ಆಟಗಾರ್ತಿ ಎಲವೆನಿಲ್ ಮೊದಲ ಮೂರು ಸುತ್ತಿನಲ್ಲಿ ನೀಡಿದ ಉತ್ತಮ ಪ್ರದರ್ಶನದ ನಂತರ ಎಡವಿದರು. ಅದರಲ್ಲೂ ಐದು ಹಾಗೂ ಆರನೇ ಸಿರೀಸ್‌ನಲ್ಲಿ ಅವರು ಹಿಂದುಳಿಯುವಂತಾಯಿತು.

ಇನ್ನು ಮತ್ತೋರ್ವ ಶೂಟರ್ ಅಪೂರ್ವಿ 34ನೇ ಸ್ಥಾನಕ್ಕೆ ಸಮಾಧಾನಪಟ್ಟಿದ್ದಾರೆ. ಇದಕ್ಕೂ ಮುನ್ನ ರಿಯೋ ಒಲಿಂಪಿಕ್ಸ್‌ನಲ್ಲಿಯೂ ಅಪೂರ್ವಿ ಪಾಳ್ಗೊಂಡಿದ್ದರು. ಅಲ್ಲಿ 36ನೇ ಸ್ಥಾನಿಯಾಗಿ ಹೊರಬಿದ್ದಿದ್ದರು.

ಇನ್ನು ಕ್ವಾಲಿಫಿಕೇಶನ್ ಸುತ್ತಿನಲ್ಲಿ ನಾರ್ವೆಯ ಜೀನೆಟ್ ಹೆಗ್ ಡ್ಯುಸ್ಟಾಡ್ ಒಲಿಂಪಿಕ್ಸ್‌ನ ದಾಖಲೆಯ ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಸಂಪಾದಿಸಿದ್ದಾರೆ. 632.9 ಅಂಕಗಳು ಜೀನೆಟ್ ಹೆಗ್ ಡ್ಯುಸ್ಟಾಡ್ ಪಾಲಾದವು. ದಕ್ಷಿಣ ಕೊರಿಯಾದ ಹೀಮೂನ್ ಪಾರ್ಕ್ 631.7 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ

Story first published: Saturday, July 24, 2021, 8:13 [IST]
Other articles published on Jul 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X