ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಸ್ವರ್ಣ ಗೆದ್ದ ಸ್ವಪ್ನಾ ಬದುಕನ್ನು ಬಿಚ್ಚಿಡುವ ಭಾವುಕ ಚಿತ್ರವಿದು..

Asian Games: Family of Swapna Barman celebrate at their residence

ಜಕಾರ್ತಾ, ಆಗಸ್ಟ್ 29: ಏಷ್ಯನ್ ಗೇಮ್ಸ್ ನಂತ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲೋದು ಸುಲಭವಲ್ಲ. ಅದರಲ್ಲೂ ಬಂಗಾರ ಗೆಲ್ಲೋದಂತೂ ಸಣ್ಣ ಸಾಧನೆ ಅಲ್ಲವೇ ಇಲ್ಲ. ಮಹಿಳಾ ಹೆಪ್ಟಾಥ್ಲಾನ್ ನಲ್ಲಿ ಸ್ವಪ್ನಾ ಬರ್ಮನ್ ಭಾರತಕ್ಕೆ ಬಂಗಾರ ಗೆದ್ದಿದ್ದಾರೆ. ಬಂಗಾರ ಗೆದ್ದಿರುವ ಬರ್ಮನ್ ಬದುಕಿನ ಚಿತ್ರಗಳನ್ನು ಬಿಚ್ಚಿಡಲು ಬಹುಶಃ ಇದೊಂದೇ ಚಿತ್ರ ಸಾಕೇನೊ..

ಏಷ್ಯನ್ 1500 ಮೀ.ನಲ್ಲಿ ಪದಕದಾಸೆ ಮೂಡಿಸಿದ ಮನ್ಜೀತ್, ಜಿನ್ಸನ್ಏಷ್ಯನ್ 1500 ಮೀ.ನಲ್ಲಿ ಪದಕದಾಸೆ ಮೂಡಿಸಿದ ಮನ್ಜೀತ್, ಜಿನ್ಸನ್

ಕ್ರೀಡೆ ಸಹಜವಾಗೇ ಆರ್ಧಿಕ ಬೆಂಬಲವನ್ನು ಬೇಡುತ್ತದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬವೊಂದರ ಪ್ರತಿಭೆ ಕ್ರೀಡಾ ರಂಗದಲ್ಲಿ ಬೆಳಗಬೇಕೆಂದು ಕನಸು ಕಂಡರೆ ಆ ಕನಸನ್ನು ನನಸಾಗಿಸಿಕೊಳ್ಳುವ ದಾರಿಯಲ್ಲಿ ಸವಾಲುಗಳ ಸಾಲೇ ಎದುರಾಗೋದಿದೆ. ಹಾಗಿದ್ದೂ ಬಡತನವನ್ನು ಹಿಮ್ಮೆಟ್ಟಿಸುತ್ತಲೇ ಎದ್ದು ಇಲ್ಲೋ ಕೆಲವೇ ಕೆಲವು ಕ್ರೀಡಾಪಟುಗಳ ಸಾಲಿನಲ್ಲಿ ನಿಲ್ಲುತ್ತಾರೆ ಸ್ವಪ್ನಾ ಬರ್ಮನ್.

ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ

ಆಗಸ್ಟ್ 28ರ ಬುಧವಾರ ನಡೆದ ಮಹಿಳಾ ಹೆಪ್ಟಾಥ್ಲಾನ್ ನಲ್ಲಿ ಭಾರತದ ಸ್ವಪ್ನಾ ಬರ್ಮನ್ ಒಟ್ಟು 6024 ಪಾಯಿಂಟ್ ಗಳನ್ನು ಸಂಪಾದಿಸುವುದರೊಂದಿಗೆ ಚಿನ್ನದ ನಗು ಬೀರಿದ್ದರು. ಬಡತನದಲ್ಲಿರುವ ಹುಡುಗಿ ಹೆಪ್ಟಾಥ್ಲಾನ್ ನಲ್ಲಿ ಚಿನ್ನ ಗೆಲ್ಲೋದು ಸಣ್ಣ ಮಾತಲ್ಲ. ಯಾಕೆಂದರೆ ಹೆಪ್ಟಾಥ್ಲಾನ್ ಏಳು ಬಗೆಯ ವಿವಿಧ (ಅಥ್ಲೆಟಿಕ್ಸ್) ಈವೆಂಟ್ ಗಳನ್ನೊಳಗೊಂಡ ಅತ್ಯಂತ ಕ್ಲಿಷ್ಟಕರ ಸ್ಪರ್ಧೆ.

100 ಮೀ. ಅಡೆತಡೆ (ಹರ್ಡಲ್ಸ್) ಓಟ, ಹೈ ಜಂಪ್, ಶಾಟ್ ಪುಟ್, 200 ಮೀ. ಓಟ, ಲಾಂಗ್ ಜಂಪ್, ಜಾವೆಲಿನ್ ಥ್ರೋ ಮತ್ತು 800 ಮೀಟರ್ಸ್ ಈ ಎಲ್ಲಾ ಈವೆಂಟ್ ಗಳು ಹೆಪ್ಟಾಥ್ಲಾನ್ ನಲ್ಲಿ ಸೇರಿರುತ್ತವೆ. ಎಲ್ಲಾ ಈವೆಂಟ್ ಗಳಲ್ಲಿ ಹೆಚ್ಚಿನ ಅಂಕ ಸಂಪಾದಿಸಿದವರು ವಿಜೇತರೆನಿಸಿಕೊಳ್ಳುತ್ತಾರೆ.

ತನ್ನ ಮಗಳು ಚಿನ್ನ ಗೆದ್ದಿದ್ದು ಯಾವ ಸ್ಪರ್ಧೆಯಲ್ಲಿ ಅನ್ನೋದೇ ಬಹುಶಃ ಈ ಪೋಷಕರಿಗೆ ಗೊತ್ತಿದೆಯೋ ಇಲ್ಲವೊ. ಒಟ್ಟಿನಲ್ಲಿ ದೊಡ್ಡ ಕ್ರೀಡಾಸ್ಪರ್ಧೆಯಲ್ಲಿ ತಮ್ಮ ಮಗಳು ದೇಶಕ್ಕೆ ಬಂಗಾರ ಗೆದ್ದಿದ್ದಾಳೆ ಅನ್ನೋದಷ್ಟೇ ಗೊತ್ತಾಗಿರಬೇಕು. ಆ ಖುಷಿಯನ್ನು ವೆಸ್ಟ್ ಬೆಂಗಾಲ್ ನ ಜಲ್ಪಾಯ್ಗುರಿಯಲ್ಲಿರುವ ತಮ್ಮ ಮನೆಯಲ್ಲಿ ಆಚರಿಸಿಕೊಂಡಿದ್ದಾರೆ. ಈ ಚಿತ್ರವನ್ನು ನಿಟ್ಟಿಸಿ ನೋಡಿ ಸಾಕು; ಬರ್ಮನ್ ಬಡತನದ ಬದುಕು ನಿಮ್ಮ ಕಣ್ಣೆದುರಲ್ಲಿ ತೆರೆತೆರೆಯಾಗಿ ಹಾದುಹೋಗಬಹುದು.

'ನಾವು ತುಂಬಾ ಸಂತೋಷಗೊಂಡಿದ್ದೇವೆ. ನಾನು ಮತ್ತು ಸ್ವಪ್ನಾಳ ತಂದೆ ಅವಳ ಕ್ರೀಡಾಕನಸಿಗೆ ಆಸರೆಯಾಗೋಕೆ ಹರಸಾಹಸ ಪಟ್ಟಿದ್ದೇವೆ. ಈಗಲೂ ಪಡುತ್ತಿದ್ದೇವೆ. ಇವತ್ತು ನಮ್ಮಾ ಕನಸಿಗೆ ರೆಕ್ಕೆ ಮೂಡಿದೆ. ಕನಸು ನನಸಾದ ಖುಷಿಯಾಗುತ್ತಿದೆ' ಎಂದು ಸ್ವಪ್ನಾ ಬಂಗಾರ ಗೆದ್ದ ಬಳಿಕ ಅವರ ಹೆತ್ತವ್ವ ಬಸಾನ ಪ್ರತಿಕ್ರಿಯಿಸಿದ್ದಾರೆ.

ಬರ್ಮನ್ ತಾಯಿ ಬಸಾನ ಟೀ ಎಸ್ಟೇಟ್ ವೊಂದರಲ್ಲಿ ಕೂಲಿ ದುಡಿಯುವವಳು. ತಂದೆ ಪಂಚನನ್ ಬರ್ಮನ್ ರಿಕ್ಷಾ ಡ್ರೈವರ್. ಹೆಚ್ಚು ವಿವರಣೆಯ ಹಂಗಿಲ್ಲದೆ ಸ್ವಪ್ನಾ ಬದುಕಿನ ಬಿಡಿಚಿತ್ರಗಳು ಅರ್ಥವಾಗಲು ಇಷ್ಟು ಸಾಕಾಗಬಹುದೇನೊ. ಬಂಗಾರ ಗೆದ್ದ ಜೋಪಡಿಯ ರಾಜಕುಮಾರಿಗೆ ನಿಮ್ಮದೊಂದು ತುಂಬು ಮನದ ಹಾರೈಕೆಯಿರಲಷ್ಟೇ..

Story first published: Wednesday, August 29, 2018, 23:23 [IST]
Other articles published on Aug 29, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X