ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್‌ ಸ್ಕ್ವಾಷ್‌: ಸೆಮಿಫೈನಲ್‌ಗೆ ಭಾರತದ ಜೋತ್ಸ್ನಾ ಚಿನ್ನಪ್ಪ, ಸೌರವ್‌

Asian Squash Championship: Saurav Ghosal, Joshna Chinappa enter semifinals

ಕೌಲಾಲಂಪುರ, ಮೇ 03: ಭಾರತದ ತಾರೆಗಳಾದ ಜೋತ್ಸ್ನಾ ಚಿನ್ನಪ್ಪ ಮತ್ತು ಸೌರವ್‌ ಘೋಷಾಲ್‌, ಇಲ್ಲಿ ನಡೆಯುತ್ತಿರುವ ಏಷ್ಯನ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಮಹಿಳಾ ಸಿಂಗಲ್ಸ್‌ ಮತ್ತು ಪುರುಷರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ಸ್‌ ತಲುಪಿದ್ದಾರೆ.

 ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ನೀರಜ್‌ ಚೋಪ್ರಾ ಪಾಲ್ಗೊಳುವುದು ಡೌಟ್‌! ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ನೀರಜ್‌ ಚೋಪ್ರಾ ಪಾಲ್ಗೊಳುವುದು ಡೌಟ್‌!

ಗುರುವಾರ ನಡೆದ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿದ ಅಗ್ರ ಶ್ರೇಯಾಂಕಿತ ಆಟಗಾರ ಸೌರವ್‌, ಮಿಂಚಿನ ಆಟವಾಡುವ ಮೂಲಕ 11-4, 11-4, 11-3ರ ಗೇರ ಗೇಮ್‌ಗಳ ಅಂತರದಲ್ಲಿ 6ನೇ ಶ್ರೇಯಾಂಕಿತ ಆಟಗಾರ ಮಲೇಷ್ಯಾದ ಮೊಹಮ್ಮದ್‌ ನಫಿಜ್ವಾನ್‌ ಅದ್ನಾನ್‌ ಎದುರು ಸುಲಭ ಜಯ ದಾಖಲಿಸಿದರು. ಇದೀಗ ಫೈನಲ್‌ ಪ್ರವೇಶಕ್ಕಾಗಿ ಮಲೇಷ್ಯಾದ ಮತ್ತೊಬ್ಬ ಆಟಗಾರ ಹಾಗೂ 7ನೇ ಶ್ರೇಯಾಂಕ ಹೊಂದಿರುವ ಇಯಾನ್‌ ಯೋವ್‌ ಎನ್‌ಜಿ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

 ವಿಶ್ವ ಪ್ಯಾರಾ ಈಜು ಚಾಂಪಿಯನ್‌ಷಿಗೆ ಅರ್ಹತೆ ಪಡೆದ ಕನ್ನಡಿಗ ನಿರಂಜನ್‌ ಮುಕುಂದನ್‌ ವಿಶ್ವ ಪ್ಯಾರಾ ಈಜು ಚಾಂಪಿಯನ್‌ಷಿಗೆ ಅರ್ಹತೆ ಪಡೆದ ಕನ್ನಡಿಗ ನಿರಂಜನ್‌ ಮುಕುಂದನ್‌

ಇದಕ್ಕೂ ಮೊದಲು ನಡೆದ ಮಹಿಳಾ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ಫೈನಲ್ಸ್‌ ಪಂದ್ಯದಲ್ಲಿ ಮಿಂಚಿದ ಜೋತ್ಸ್ನಾ ಚಿನ್ನಪ್ಪ, 12-10, 13-11, 11-7 ಗೇಮ್‌ಗಳಿಂದ ಸ್ವದೇಶಿ ಮಿತ್ರ ಆಟಗಾರ್ತಿ ತನ್ವೀ ಖನ್ನಾ ವಿರುದ್ಧ ಗೆಲುವಿನ ನಗೆ ಬೀರಿ ಉಪಾಂತ್ಯಕ್ಕೆ ಕಾಲಿಟ್ಟರು. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ 8ರ ಘಟ್ಟ ಪ್ರವೇಶಿಸಿದ್ದ ಯುವ ಪ್ರತಿಭೆ ತನ್ವೀ, ಅನುಭವದ ಆಟವಾಡಿದ ಜೋತ್ಸ್ನಾ ಎದುರು ಸಂಪೂರ್ಣ ಶರಣಾದರು. ಆದರೂ, ಮೊದಲ ಎರಡೂ ಗೇಮ್‌ಗಲ್ಲಿ ಸಮಬಲದ ಹೋರಾಟ ನೀಡಿ ಜೋತ್ಸ್ನಾಗೆ ಕಬ್ಬಿಣದ ಕಡಲೆಯಾಗಿದ್ದರು.

 ಭಾರತ ವಿಶ್ವಕಪ್‌ ಗೆಲ್ಲಲಿದೆ: ಭವಿಷ್ಯ ನುಡಿದ ಸಚಿನ್‌ ತೆಂಡೂಲ್ಕರ್‌ ಭಾರತ ವಿಶ್ವಕಪ್‌ ಗೆಲ್ಲಲಿದೆ: ಭವಿಷ್ಯ ನುಡಿದ ಸಚಿನ್‌ ತೆಂಡೂಲ್ಕರ್‌

ಚಾಂಪಿಯನ್‌ಷಿಪ್ಸ್‌ನಲ್ಲಿ 2ನೇ ಶ್ರೇಯಾಂಕ ಪಡೆದಿರುವ ಜೋತ್ಸ್ನಾ ಸೆಮಿಫೈನಲ್ಸ್‌ನಲ್ಲಿ ಮಲೇಷ್ಯಾದ ಆಟಗಾರ್ತಿ ಹಾಗೂ 6ನೇ ಶ್ರೇಯಾಂಕಿತೆ ಶಿವಶಂಕರಿ ಸುಭ್ರಮಣ್ಯಂ ಅವರನ್ನು ಎದುರಾಗಲಿದ್ದಾರೆ.

Story first published: Friday, May 3, 2019, 19:55 [IST]
Other articles published on May 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X