ಕಾಮನ್ ವೆಲ್ತ್ ಪಂದ್ಯ: ಚಿನ್ನ ಗೆದ್ದ ವ್ಹೇಟ್ ಲಿಫ್ಟರ್ ಸಂಜಿತಾ ಚಾನು

Posted By:
common wealth games 2018 : ಚಿನ್ನ ಗೆದ್ದ ವ್ಹೇಟ್ ಲಿಫ್ಟರ್ ಸಂಜಿತಾ ಚಾನು | Oneindia Kannada
Common wealth games 2018: Indias Sanjita Chanu wins gold medal in 53 kg womens weightlifting

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ 2018 ರಲ್ಲಿ ಭಾರತದ ಸಂಜಿತಾ ಚಾನು ಮಹಿಳೆಯರ 53 ಕೆಜಿ ವ್ಹೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

24 ವರ್ಷದ ಖುಮುಕ್ಚಮ್ ಸಂಜಿತ್ ಚಾನು ಒಟ್ಟು 192 ಕೆಜಿ ಭಾರವನ್ನು ಸ್ನಾಚ್, ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ ಎತ್ತುವ ಮೂಲಕ ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕ ತಂದುಕೊಟ್ಟ ಕೀರ್ತಿಗೆ ಪಾತ್ರರಾದರು.

ಭಾರತಕ್ಕೆ ಮೊದಲ ಚಿನ್ನ ತಂದಿತ್ತ ಮೀರಾಬಾಯಿ ಚಾನು

ನಿನ್ನೆಯಷ್ಟೇ 48 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಚಿನ್ನ ಗೆದ್ದಿದ್ದರು. ಇದಕ್ಕೂ ಮುನ್ನ ಕುಂದಾಪುರದ ಗುರುರಾಜ್ ಪೂಜಾರಿ, ಪುರುಷರ 56 ಕೆಜಿ ವಿಭಾಗದಲ್ಲಿ 249(111+134) ಕೆಜಿ ಭಾರ ಎತ್ತುವ ಮೂಲಕ ರಜತ ಪದಕ ಪಡೆದು, ಕಾಮನ್ ವೆಲ್ತ್ ಗೇಮ್ಸ್ ಗೆ ಶುಭಾರಂಭ ನೀಡಿದ್ದರು. ಇದು ಭಾರತ ಈ ಪಂದ್ಯದಲ್ಲಿ ಗೆದ್ದ ಮೊದಲ ಪದಕವಾಗಿತ್ತು.

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ 2018ರಲ್ಲಿ ಈ ಮೂಲಕ ಭಾರತ 3 ಪದಕ ಗೆದ್ದಂತಾಗಿದೆ.

Story first published: Friday, April 6, 2018, 8:12 [IST]
Other articles published on Apr 6, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ